ಬಾಲಕಿಯರ ಶಿಕ್ಷಣಕ್ಕಾಗಿ ನಿಧಿ ಸಂಗ್ರಹ ಅಭಿಯಾನ

7

ಬಾಲಕಿಯರ ಶಿಕ್ಷಣಕ್ಕಾಗಿ ನಿಧಿ ಸಂಗ್ರಹ ಅಭಿಯಾನ

Published:
Updated:
Deccan Herald

ಬೆಳಗಾವಿ: ‘ಕೆಳವರ್ಗದ ಸುಮಾರು 25,000 ಬಾಲಕಿಯರ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ಟಾಟಾ ಸಮೂಹದ ಟೈಟನ್‌ ಕಂಪನಿ ಹಮ್ಮಿಕೊಂಡಿರುವ ಅಭಿಯಾನದಡಿ ಸಾರ್ವಜನಿಕರಿಂದ ಹಣ ಸಂಗ್ರಹಿಸಲು 90 ದಿನಗಳಲ್ಲಿ 6,000 ಕಿ.ಮೀ ಸ್ಕೇಟಿಂಗ್‌ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದೇನೆ’ ಎಂದು ಅಂತರರಾಷ್ಟ್ರೀಯ ಸ್ಕೇಟಿಂಗ್‌ ಪಟು ರಾಣಾ ಉಪ್ಪಲಪಟಿ ಹೇಳಿದರು.

ತಮ್ಮ ಅಭಿಯಾನದ ಅಂಗವಾಗಿ ನಗರಕ್ಕೆ ಸೋಮವಾರ ಬಂದಿದ್ದ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ‘6 ದಿನಗಳ ಹಿಂದೆ ತಮಿಳುನಾಡಿನ ಹೊಸೂರಿನಿಂದ ಸ್ಕೇಟಿಂಗ್‌ ಯಾತ್ರೆ ಆರಂಭಿಸಿದ್ದೇನೆ. ಸುವರ್ಣ ಚತುಷ್ಪಥ ಹೆದ್ದಾರಿ ಮೂಲಕ ದೇಶದ ನಾಲ್ಕೂ ದಿಕ್ಕುಗಳಲ್ಲಿ ಸಂಚರಿಸಲಿದ್ದೇನೆ. ತಲಾ ಒಬ್ಬ ವಿದ್ಯಾರ್ಥಿನಿಗೆ ₹ 3,600 ಸಂಗ್ರಹಿಸಲಾಗುವುದು. ಈಗಾಗಲೇ 1,000 ವಿದ್ಯಾರ್ಥಿಗಳಿಗೆ ಬೇಕಾಗುವಷ್ಟು ಆರ್ಥಿಕ ಸಹಾಯವನ್ನು ಸಂಗ್ರಹಿಸಿದ್ದೇನೆ. ಇನ್ನುಳಿದ 84 ದಿನಗಳಲ್ಲಿ ಬಾಕಿ ವಿದ್ಯಾರ್ಥಿನಿಯರಿಗಾಗಿ ಸಂಗ್ರಹಿಸುತ್ತೇನೆ’ ಎಂದು ತಿಳಿಸಿದರು.

ಟೈಟನ್‌ ಕಂಪನಿಯು ಇತರ ಎನ್‌ಜಿಒಗಳ ಜೊತೆ ಸೇರಿಕೊಂಡು ಇಸಿಎಚ್‌ಒ ಅಭಿಯಾನ ಆರಂಭಿಸಿದೆ. ಕಂಪನಿಯ ಸಹೋದ್ಯೋಗಿಗಳು ಸೇರಿದಂತೆ ಇತರ ಸಾರ್ವಜನಿಕರು ನೀಡುವ ಕೊಡುಗೆಯನ್ನು ವಿದ್ಯಾರ್ಥಿನಿಯರಿಗೆ ವಿತರಿಸಲಾಗುವುದು. ಈ ಹಣದಲ್ಲಿ ಅವರಿಗೆ ಕಲಿಕಾ ಸಾಮಗ್ರಿಗಳು, ನ್ಯಾಪ್‌ಕಿನ್‌, ಶೌಚಾಲಯ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯ ನೀಡಲಾಗುವುದು ಎಂದು ಹೇಳಿದರು.

‘ದೇಶ ಸ್ವಾತಂತ್ರ್ಯ ಪಡೆದು ಏಳು ದಶಕಗಳು ಕಳೆದಿದ್ದರೂ ಹೆಣ್ಣು ಮಕ್ಕಳಿಗೆ ಸಂಪೂರ್ಣ ಶಿಕ್ಷಣ ನೀಡಲು ಸಾಧ್ಯವಾಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಶೇ 40ರಷ್ಟು ಹಾಗೂ ನಗರ ಪ್ರದೇಶಗಳಲ್ಲಿ ಶೇ 65ರಷ್ಟು ಹೆಣ್ಣು ಮಕ್ಕಳಿಗೆ ಮಾತ್ರ ಶಿಕ್ಷಣ ತಲುಪಲು ಸಾಧ್ಯವಾಗಿದೆ. ಸಂಪೂರ್ಣ ಸಾಕ್ಷರತೆ ಮಾಡುವುದು ನಮ್ಮ ಅಭಿಯಾನದ ಉದ್ದೇಶವಾಗಿದೆ’ ಎಂದು ನುಡಿದರು.

ಟೈಟನ್‌ ಮಳಿಗೆಯ ಸಂತೋಷ ಚಂಡಕ್‌, ಸುವೇಂದು ರಾಯ್‌, ಸಂಜಯ ಹೆಬ್ಬಾಳಕರ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !