ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ ಮಕ್ಕಳಿಗೆ ಅಗತ್ಯ ಸಾಮಗ್ರಿ ವಿತರಿಸಿ ಹುಟ್ಟುಹಬ್ಬ ಆಚರಣೆ

Last Updated 15 ಸೆಪ್ಟೆಂಬರ್ 2019, 15:13 IST
ಅಕ್ಷರ ಗಾತ್ರ

ಅಥಣಿ: ‘ನೆರೆಪೀಡಿತ ಗ್ರಾಮಗಳ ಬಡ ಮಕ್ಕಳಿಗೆ ಸಹಾಯಹಸ್ತ ನೀಡಿ, ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಮಾದರಿಯಾಗಿರುವ ಸಮಾಜಸೇವಕ ಗಜಾನನ ಮಂಗಸೂಳಿ ಅವರ ಸಮಾಜ ಸೇವೆ ನಿರಂತರವಾಗಿ ಸಾಗಲಿ’ ಎಂದು ಮುಖಂಡ ಅರುಣ ಯಲಗುದ್ರಿ ಹೇಳಿದರು.

ಇಲ್ಲಿನ ಸ್ನೇಹಜ್ಯೋತಿ ಅಂಧಮಕ್ಕಳ ಶಾಲೆಯಲ್ಲಿ ಶನಿವಾರ ರೋಟರಿ ಕ್ಲಬ್ ಅಥಣಿ ಶಾಖೆ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಅವರ 50ನೇ ಹುಟ್ಟುಹಬ್ಬ ಪ್ರಯುಕ್ತ ವಿದ್ಯಾರ್ಥಿಗಳಿಗೆ ದಿನಬಳಕೆ ವಸ್ತುಗಳು, ಬಟ್ಟೆ ಹಾಗೂ ಹೊದಿಕೆ ವಿತರಿಸಿ ಮಾತನಾಡಿದರು.

ರೋಟರಿ ಕ್ಲಬ್ ಅಧ್ಯಕ್ಷ ಶ್ರೀಕಾಂತ ಅಥಣಿ ಮಾತನಾಡಿ, ‘25 ವರ್ಷಗಳಿಂದ ಸಮಾಜಸೇವೆ, ಧಾರ್ಮಿಕ, ರಾಜಕೀಯ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಗಜಾನನ ಕಾರ್ಯ ಶ್ಲಾಘನೀಯ’ ಎಂದರು.

ಮುಖಂಡರಾದ ಅನಿಲ ಸುಣದೋಳಿ, ಮುರುಗೇಶ ಬಾನಿ, ಜಿ. ದಿಗಂಬರ ಮಾತನಾಡಿದರು.

ರೋಟರಿ ಕ್ಲಬ್‌ನಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದ ಗಜಾನನ ಮಂಗಸೂಳಿ, ‘ನೆರೆ ಬಾಧಿತ 10 ಗ್ರಾಮಗಳ ಸಾವಿರ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಿದ್ದೇನೆ. ರೋಟರಿ ಕ್ಲಬ್ ಬೆಂಗಳೂರು ವತಿಯಿಂದ ₹10ಲಕ್ಷ ಮೌಲ್ಯದ 100 ಕಿಟ್‌ಗಳು ಬಂದಿವೆ. ಅಗತ್ಯ ಸಾಮಗ್ರಿಗಳಿರುವ ಆ ಕಿಟ್‌ಗಳನ್ನು ಸೆ. 23 ಮತ್ತು 24ರಂದು ವಿತರಿಸಲಾಗುವುದು’ ಎಂದರು.

ಮುಖಂಡರಾದ ಸಚಿನ ದೇಸಾಯಿ, ಸುರೇಶ ಪಾಟೀಲ, ಸದಾಶಿವ ಬಡಚಿ, ಸಂಗು ಹಂಡಗಿ, ಈರಣ್ಣ ಅಡಗಲ್ಲ, ಮುರಗೇಶ ಬಚ್ಚನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT