ಶುಕ್ರವಾರ, ಸೆಪ್ಟೆಂಬರ್ 20, 2019
21 °C

ಬೆಳಗಾವಿ: ಗಣೇಶ ಮೂರ್ತಿ ಸಾಗಿಸುವಾಗ ವಿದ್ಯುತ್‌ ತಂತಿ ತಗುಲಿ ಬೆಂಕಿ, ತಪ್ಪಿದ ಅವಘಡ

Published:
Updated:

ಬೆಳಗಾವಿ: ಇಲ್ಲಿನ ಭಾಗ್ಯನಗರದಲ್ಲಿ ಸಾಗಿಸುತ್ತಿದ್ದ 15 ಅಡಿಗೂ ಎತ್ತರದ ಗಣೇಶ ಮೂರ್ತಿ ವಿದ್ಯುತ್ ತಂತಿಗೆ ತಗುಲಿ ಬೆಂಕಿ‌ ಹೊತ್ತಿಕೊಂಡಿತ್ತು. ಆದರೆ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಗಣೇಶ ಮಂಡಳದವರು ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಮೂರ್ತಿ ಇಟ್ಟು ಸಾಗಿಸುತ್ತಿದ್ದರು. ಮೂರ್ತಿಯನ್ನು ಪ್ಲಾಸ್ಟಿಕ್ ನಿಂದ ಮುಚ್ಚಿದ್ದರು. ಮೂರ್ತಿ ತಂತಿಗೆ ತಗುಲಿದಾಗ ಪ್ಲಾಸ್ಟಿಕ್‌ಗೆ ಬೆಂಕಿ ಹೊತ್ತಿಕೊಂಡಿದೆ. ಸಾಗಿಸುತ್ತಿದ್ದವರು ಕೂಡಲೇ ಮಣ್ಣನ್ನು ಎರಚಿ ಬೆಂಕಿ ನಂದಿಸಿದ್ದಾರೆ ಎಂದು ತಿಳಿದುಬಂದಿದೆ.

Post Comments (+)