ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶೋತ್ಸವ ಸಿದ್ಧತೆ ಪರಿಶೀಲಿಸಿದ ಶಾಸಕ

Last Updated 18 ಆಗಸ್ಟ್ 2022, 16:00 IST
ಅಕ್ಷರ ಗಾತ್ರ

ಬೆಳಗಾವಿ: ಎರಡು ವರ್ಷಗಳ ನಂತರ ನಗರದಲ್ಲಿ ಗಣೇಶೋತ್ಸವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಚೌತಿಯಲ್ಲಿ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಆ. 31ರಂದು ನಡೆಯುವ ವಿಸರ್ಜನಾ ಮೆರವಣಿಗೆ ಸಾಗುವ ಮಾರ್ಗಗಳನ್ನು ಶಾಸಕ ಅಭಯ ಪಾಟೀಲ ಗುರುವಾರ ಪರಿಶೀಲಿಸಿದರು.

ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಶಹಾಪುರದ ವಿವಿಧ ಪಾರಂಪರಿಕ ಮಾರ್ಗಗಳಲ್ಲಿ ಸಂಚರಿಸಿದ ಶಾಸಕ, ಅಲ್ಲಿನ ಅಡೆತಡೆಗಳು ಹಾಗೂ ಬಾಕಿ ಉಳಿದ ಕೆಲಸಗಳನ್ನು ಪರಿಶೀಲಿಸಿದರು. ಕೊರೊನಾ ಬಳಿಕ ಎರಡು ವರ್ಷಗಳ ನಂತರ ಅದ್ಧೂರಿಯಾಗಿ ಹಬ್ಬ ನಡೆಯಲಿದೆ. ಈಗಿನಿಂದಲೇ ಎಲ್ಲ ಅಡೆತಡೆಗಳನ್ನು ನಿವಾಸಿಸಬೇಕು, ರಸ್ತೆಗಳಲ್ಲಿನ ತಗ್ಗುಗಳನ್ನು ಮುಚ್ಚಿ, ಫುಟ್‌ಪಾತ್‌ ಸರಿಪಡಿಸಬೇಕು. ಮೆರವಣಿಗೆಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳು ಸೂಚನೆ ನೀಡಿದರು.

ರಸ್ತೆಯ ಇಕ್ಕೆಲಗಳಲ್ಲಿ ನೇತಾಡುತ್ತಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸಬೇಕು. ಮಧ್ಯೆದಲ್ಲಿ ಬೆಳೆದಿರುವ ಮರದ ರೆಂಬೆ– ಕೊಂಬೆಗಳನ್ನು ಕತ್ತರಿಸಬೇಕು. ಎಲ್ಲ ನಗರ ಸೇವಕರು, ಆಯುಕ್ತರು, ಅಧಿಕಾರಿ, ಮಹಾಮಂಡಲದ ಸದಸ್ಯರ ಜೊತೆಯಲ್ಲಿ ಗಣೇಶ ಆಗಮನದ ಮಾರ್ಗ– ನಿರ್ಗಮನ ಮಾರ್ಗದ ಪರಿಶೀಲನೆ ಮಾಡಲಾಗಿದೆ. 2-3 ದಿನಗಳಲ್ಲಿ ಕೆಲಸ ಆರಂಭಗೊಳ್ಳಲಿದೆ. ಬೇರೆಡೆಯಿಂದ ಬೆಳಗಾವಿಗೆ ಆಗಮಿಸುವ ಜನರಿಗೆ ತೊಂದರೆಯಾಗದಂತೆ ಗಮನ ವಹಿಸಬೇಕು. ವಿನಾಕಾರಣ ತಡರಾತ್ರಿ ಜನಹಿತದಲ್ಲಿ ಅಂಗಡಿಗಳನ್ನು ತೆರೆದ ವ್ಯಾಪಾರಿಗಳಿಗೆ ಮುಚ್ಚುವಂತೆ ಒತ್ತಾಯ ಹೇರಬಾರದು ಎಂದು ಶಾಸಕ ಹೇಳಿದರು.

ಲೋಕಮಾನ್ಯ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಲದ ಪದಾಧಿಕಾರಿಗಳು, ನಗರಸೇವಕರು, ಹೆಸ್ಕಾಂ, ಮಹಾನಗರ ಪಾಲಿಕೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT