ಸೋಮವಾರ, ನವೆಂಬರ್ 18, 2019
23 °C

ಇಬ್ಬರ ಬಂಧನ; 64 ಕೆ.ಜಿ. ಗಾಂಜಾ ವಶ

Published:
Updated:
Prajavani

ಬೆಳಗಾವಿ: ರಾಯಬಾಗ ತಾಲ್ಲೂಕಿನ ನಿಪನಾಳ ಗ್ರಾಮದ ಎರಡು ಕಡೆಗಳಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಇಬ್ಬರನ್ನು ಜಿಲ್ಲಾ ಸಿಇಎನ್‌ ಠಾಣೆ ಪೊಲೀಸರು ಬಂಧಿಸಿ, ಅವರಿಂದ ₹ 1.29 ಲಕ್ಷ ಮೌಲ್ಯದ 64 ಕೆ.ಜಿ. 600 ಗ್ರಾಂ. ಗಾಂಜಾ ಸಸಿಗಳನ್ನು ವಶಪಡಿಸಿಕೊಂಡಿದ್ದಾರೆ.

ಶ್ರೀಕಾಂತ ಪಂಡಿತ ಪವಾರ ಹಾಗೂ ಪರಸಪ್ಪ ಯಲ್ಲಪ್ಪ ಹಳಬರ ಬಂಧಿತ ಆರೋಪಿಗಳು. ಮುಸುಕಿನ ಜೋಳ ಬೆಳೆಯ ಜೊತೆ ಗಾಂಜಾ ಗಿಡಗಳನ್ನು ಬೆಳೆಯುತ್ತಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಎಸ್ಪಿ, ಎಎಸ್ಪಿ ಮಾರ್ಗದರ್ಶನದಲ್ಲಿ ಸಿಇಎನ್ ಠಾಣೆ ಇನ್‌ಸ್ಪೆಕ್ಟರ್ ವೀರೇಶ ದೊಡ್ಡಮನಿ, ಪಿಎಸ್‌ಐ ಚಾಮುಂಡೇಶ್ವರಿ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ.

ಪ್ರತಿಕ್ರಿಯಿಸಿ (+)