ಶುಕ್ರವಾರ, ನವೆಂಬರ್ 15, 2019
26 °C

ಗ್ರಾಮೀಣ ಕ್ರೀಡೆ ಪ್ರೋತ್ಸಾಹಿಸಲು ಗರಡಿಮನೆ ನಿರ್ಮಾಣ

Published:
Updated:
Prajavani

ನಿಪ್ಪಾಣಿ: ‘ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಕುರ್ಲಿ ಗ್ರಾಮದಲ್ಲಿ ಗರಡಿಮನೆ ನಿರ್ಮಾಣಕ್ಕಾಗಿ ಶಾಸಕರ ಪ್ರದೇಶಾಭಿವೃದ್ಧಿ ಹಾಗೂ ಯುವಜನ ಸೇವಾ ಇಲಾಖೆಯಿಂದ ₹ 12 ಲಕ್ಷ ಅನುದಾನ ಮಂಜೂರು ಮಾಡಿಸಲಾಗಿದೆ. ಮತ್ತೊಂದು ಗರಡಿಮನೆ ನಿರ್ಮಾಣಕ್ಕೂ ಉತ್ನಿಸುತ್ತೇನೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಶಶಿಕಲಾ ಜೊಲ್ಲೆ ಹೇಳಿದರು.

ತಾಲ್ಲೂಕಿನ ಕುರ್ಲಿ ಗ್ರಾಮದ ವಿಠ್ಠಲ ಮಂದಿರದಲ್ಲಿ ಗುರುವಾರ ಗರಡಿಮನೆ ಉದ್ಘಾಟಿಸಿ ಅವರು ಮಾತನಾಡಿದರು.

‘ಇಲ್ಲಿನ ಯುವ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಮಿಂಚುವಂತಾಗಬೇಕು. ಪಾಲಕರು ಕೂಡ ಮಕ್ಕಳಿಗೆ ಭಾರತೀಯ ಕ್ರೀಡೆಗಳ ಬಗ್ಗೆ ಅರಿವು ಮೂಡಿಸಿ ಅವುಗಳನ್ನು ಉಳಿಸಿ ಬೆಳೆಸುವಂಥ ಕಾರ್ಯ ಮಾಡಬೇಕಾಗಿದೆ’ ಎಂದರು.

ಗ್ರಾಮದಲ್ಲಿ ರಾಜೀವಗಾಂಧಿ ಸೇವಾ ಕೇಂದ್ರ ಉದ್ಘಾಟಿಸಿದರು. ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ 43 ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಿತರಿಸಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಮರ ಶಿಂತ್ರೆ, ತಹಶೀಲ್ದಾರ್‌ ಪ್ರಕಾಶ ಗಾಯಕವಾಡ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ವಕೀಲ ಸಂಜಯ ಶಿಂತ್ರೆ, ಕಿರಣ ನಿಕಾಡೆ, ಕೆ.ಎಸ್. ಪಾಟೀಲ, ರಘುನಾಥ ಪಾಟೀಲ, ರಂಜೀತ ಪಾಟೀಲ, ಸುರೇಶ ಪಾಟೀಲ, ಶಶಿಕಾಂತ ಪವಾರ, ಸುಮನಾ ಯಾದವ, ಭೂ ಸೇನಾ ನಿಗಮದ ಜಿ.ಎಸ್. ತಲ್ಲೂರ, ರಾಹುಲ ಜಾಧವ, ರಾಮಾ ನಿಕಾಡೆ, ಲತಾ ಶಿಂತ್ರೆ, ಸರಸ್ವತಿ ಚೌಗಲೆ, ದತ್ತ ಪಾಟೀಲ, ಗ್ರಾಮ ಲೆಕ್ಕಾಧಿಕಾರಿ ರಮೇಶ ಹಂಜಿ, ಪಿಡಿಒ ಟಿ.ಕೆ. ಜಗದೇವ, ಸುಭಾಷ ಪ್ರತಾಪ, ರಾಜಶೇಖರ ಶಿಂತ್ರೆ ಇದ್ದರು.

ಪ್ರತಿಕ್ರಿಯಿಸಿ (+)