ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಐಟಿ ಎಂಬಿಎಗೆ ಪ್ರಶಸ್ತಿ

Last Updated 24 ಏಪ್ರಿಲ್ 2019, 12:48 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಕೆಎಲ್‌ಎಸ್ ಗೋಗಟೆ ತಾಂತ್ರಿಕ ಕಾಲೇಜಿನ ಎಂಬಿಎ ವಿಭಾಗದವರು ಇತ್ತೀಚಿಗೆ ಹುಬ್ಬಳ್ಳಿಯ ಗ್ಲೋಬಲ್ ಬ್ಯುಸಿನೆಸ್ ಸ್ಕೂಲ್ ಆಯೋಜಿಸಿದ್ದ ಸ್ಪರ್ಧಾ ಮೇಳ ‘ಗ್ಯಾಲಕ್ಟೊ’ದಲ್ಲಿ ವೀರಾಗ್ರಣಿ ಪ್ರಶಸ್ತಿ ಗಳಿಸಿದ್ದಾರೆ.

ಸುಚೇತಾ ಕೌಜಲಗಿ ಅತ್ಯುತ್ತಮ ವ್ಯವಸ್ಥಾಪಕಿ ಪ್ರಶಸ್ತಿಯನ್ನು, ಯೋಜನ್ ಶಂಬುಚೆ ಮತ್ತು ಫಿರ್ದೌಸ್ ಮಾರ್ಕೆಟಿಂಗ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಸಮೀರ್ ಸನದಿ ‘ಔದ್ಯೋಗಿಕ ನೈತಿಕತೆ’ ಎಂಬ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಸೋನಾಲಿ ಸೇಠ್‌ ಮತ್ತು ಪ್ರಜ್ವಲ್ ಬಿಸಿನೆಸ್-ಪ್ಲ್ಯಾನ್ ಸ್ಪರ್ಧೆಯಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದರು. ಹೆಚ್ಚಿನ ಅಂಕಗಳೊಂದಿಗೆ ಕಾಲೇಜಿನ ತಂಡ ಜನರಲ್ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡಿತು.

ವಿದ್ಯಾರ್ಥಿಗಳನ್ನು ಕೆಎಲ್‌ಎಸ್‌ ಅಧ್ಯಕ್ಷ ಎಂ.ಆರ್. ಕುಲಕರ್ಣಿ, ಜಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಯು.ಎನ್. ಕಾಲಕುಂದ್ರಿಕರ, ಪ್ರಾಚಾರ್ಯ ಎ.ಎಸ್. ದೇಶಪಾಂಡೆ, ಎಂಬಿಎ ಡೀನ್ ಕೃಷ್ಣ ಶೇಖರ್ ಲಾಲ್ ದಾಸ್, ಸಾಂಸ್ಕೃತಿಕ ಚಟುವಟಿಕೆಗಳ ಸಂಯೋಜಕಿ ಪ್ರೊ.ವಾಣಿ ಹುಂಡೇಕರ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT