ಗೋಕಾಕ: ಬಸವಣ್ಣನವರ ಜಯಂತಿ ಆಚರಣೆ ನಿಮಿತ್ತ ಸೋಮವಾರ ಇಲ್ಲಿನ ಕಿಲ್ಲೆಯಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಹಾಗೂ ಮುಪ್ಪಯ್ಯನ ಹಿರೇಮಠದ ರಾಚೋಟೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಬೆಳಿಗ್ಗೆ ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಡಾ. ಅರುಣ ತುಪ್ಪದ ಇವರಿಂದ ಷಟಸ್ಥಲ ಧ್ವಜಾರೋಹಣ, ಮಹಾಲಿಂಗೇಶ್ವರ ಭಜನಾ ಮಂಡಳಿಯಿಂದ ಭಜನಾ ಸೇವೆ ನಡೆದವು. ನಂತರ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ, ಷಟಸ್ಥಲ ಧ್ವಜಾರೋಹಣವನ್ನು ಪ್ರೊ. ಚಂದ್ರಶೇಖರ ಅಕ್ಕಿ ನೆರವೇರಿಸಿದರು.

10ಕ್ಕೆ ಡಾ. ಸಂದೀಪ ಶಿರಹಟ್ಟಿ ಅವರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಿಸಲಾಯಿತು. ಬೆಳಿಗ್ಗೆ 11ಕ್ಕೆ ಬಸವೇಶ್ವರ ದೇವಸ್ಥಾನದಲ್ಲಿ ಅಕ್ಕನ ಬಳಗದ ಮಾತೆಯರಿಂದ ಬಸವೇಶ್ವರರ ನಾಮಕರಣ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಮಹಾಪ್ರಸಾದ ಜರುಗಿತು.

ಸಂಜೆ 5ಕ್ಕೆ ಸಹನಾ ಮತ್ತು ಜಯಶೀಲ ಅಂಗಡಿ ದಂಪತಿಯಿಂದ ಪಲ್ಲಕ್ಕಿ ಪೂಜೆ, ಹರ್ಷಾ ಮತ್ತು ಅಕ್ಷಯ ವರದಾಯಿ ದಂಪತಿಯಿಂದ ಬಸವೇಶ್ವರರ ಭಾವಚಿತ್ರ ಪೂಜೆ ನೆರವೇರಿಸಲಾಯಿತು. ದೇವಸ್ಥಾನದಿಂದ ಸಕಲ ವಾದ್ಯಗಳೊಂದಿಗೆ ಬಸವೇಶ್ವರರ ಭಾವಚಿತ್ರದ ಮೆರವಣಿಗೆಗೆ ಮುರುಘರಾಜೇಂದ್ರ ಸ್ವಾಮೀಜಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಕಮಿಟಿಯ ಸೊಮಶೇಖರ ಮಗದುಮ, ಡಾ. ಮಹಾಂತೇಶ ಕಡಾಡಿ, ಬಿ.ಎಸ್.ಕುಂಬಾರ, ಅಶೋಕ ಹೆಗ್ಗಣ್ಣವರ, ಮಹಾಂತೇಶ ತಾಂವಶಿ, ಮಹಾದೇವ ಪಾಟೀಲ, ಅಶೋಕ ಪೂಜಾರಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-21-1665041240

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.