ಗೋಕಾಕ: ‘ಗೋಕಾಕ, ಬೈಲಹೊಂಗಲ ಮತ್ತು ಸವದತ್ತಿ ತಾಲ್ಲೂಕುಗಳ ಗ್ರಾಮಗಳ 2,718 ಎಕರೆ ಕ್ಷೇತ್ರವು ನೀರಾವರಿ ಸೌಲಭ್ಯಕ್ಕೊಳಪಡಿಸುವ ಚಚಡಿ ಏತ ನೀರಾವರಿ ಯೋಜನೆಗೆ ಮಾರ್ಕಂಡೇಯ ಬಲದಂಡೆ ಮುಖ್ಯ ಕಾಲುವೆಯಿಂದ ನೀರಾವರಿ ಸೌಲಭ್ಯ ಒದಗಿಸಲು ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ’ ಎಂದು ಕರ್ನಾಟಕ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಹೊನ್ನಪ್ರಭು ಕಾಕಂಡಕಿ ಹೇಳಿದರು.

ತಾಲ್ಲೂಕಿನ ಮಿಡಕನಟ್ಟಿ ಗ್ರಾಮದಲ್ಲಿ ಚಚಡಿ ಏತ ನೀರಾವರಿ ಯೋಜನೆಯ ಪಂಪ್ಸೆಟ್ ಪೂಜಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ‘ಖನಗಾಂವ, ವಣ್ಣೂರ, ಗಜಮಿನಾಳ, ಕಲಕುಪ್ಪಿ, ಮೇಕಲಮರಡಿ, ಉಜ್ಜನಹಟ್ಟಿ, ಹಣಬರಹಟ್ಟಿ, ಚಿಕ್ಕಬೂದನೂರ, ಹಿರೇಬೂದನೂರ, ಚಚಡಿ, ಗುಂಡ್ಲೂರ, ತಡಸಲೂರ ಭಾಗದ 6,713 ಎಕರೆ ಪ್ರದೇಶದ ಗ್ರಾಮಗಳಿಗೆ ಅನುಕೂಲವಾಗಲಿದೆ’ ಎಂದರು.

‘2007ರಲ್ಲಿ ಆಡಳಿತಾತ್ಮಕ ಅನುಮೋದನೆ ಪಡೆದುಕೊಂಡ ಯೋಜನೆ 2015ರಲ್ಲಿ ಕಾಮಗಾರಿ ಪ್ರಾರಂಭಗೊಂಡಿದ್ದು 2016ರಲ್ಲಿ ಮುಕ್ತಾಯಗೊಳ್ಳಬೇಕಿತ್ತು, ಆದರೆ ತಾಂತ್ರಿಕ ಕಾರಣಗಳಿಂದಾಗಿ ಕಾಮಗಾರಿ ವಿಳಂಬವಾಗಿತ್ತು. ಇದೀಗ ಹಂತ ಹಂತವಾಗಿ ಕಾಮಗಾರಿ ಪ್ರಾರಂಭಗೊಳ್ಳುತ್ತಿದೆ’ ಎಂದು ನೆರೆದಿದ್ದ ಕೃಷಿಕರಿಗೆ ಮಾಹಿತಿ ನೀಡಿದರು.

ಮುಖಂಡರಾದ ಬಸವರಾಜ ಹೊಸಮನಿ, ಸತ್ಯಪ್ಪ ನಾಯ್ಕ, ಯಲ್ಲಪ್ಪ ಉದ್ದನಾಯ್ಕ, ಬಸಪ್ಪ ರಾಮದುರ್ಗ, ಹುಸೇನ್ಸಾಬ್ ಕಿಲ್ಲೇದಾರ, ಶಂಕರ ಮಡಿವಾಳರ, ಸಿದ್ದಪ್ಪ ಹನ್ನಿಕೇರಿ, ಬಸಪ್ಪ ಅಂಗಡಿ, ಸುತ್ತಮುತ್ತಲಿನ ರೈತ ಬಾಂಧವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-21-2050739

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.