ಗೋಕಾಕ: ಕಪ್ಪು ಬಣ್ಣದ ಕಾಗದ ಬಳಸಿ ನೋಟು ಮುದ್ರಿಸಬಹುದು ಎಂದು ನಂಬಿಸಿ ಜನರನ್ನು ವಂಚಿಸುತ್ತಿದ್ದ ಜಾಲವೊಂದನ್ನು ಭೇದಿಸುರುವ ಜಿಲ್ಲಾ ಪೊಲೀಸರು, ಮಹಾರಾಷ್ಟ್ರದ ಇಬ್ಬರು ಕನ್ಸ್ಟೆಬಲ್ಗಳೂ ಸೇರಿದಂತೆ 7 ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, ‘ಗೋಕಾಕ ನಗರದಲ್ಲಿ ನೋಟು ತಯಾರಿಸಿಕೊಳ್ಳುವ ಯಂತ್ರಗಳನ್ನು ಹಾಗೂ ನೀವು ಕೊಡುವ ಹಣದ ನಾಲ್ಕು ಪಟ್ಟು ಕಪ್ಪು ಕಾಗದವನ್ನು ಕೊಡುತ್ತೇವೆ ಎಂದು ವಂಚಿಸುತ್ತಿದ್ದರು’ ಎಂದರು.

ಗೋಕಾಕದ ಪರಶುರಾಮ ಬಡಕರಿ, ಇಮ್ರಾನ್ ಜುನೇದಿ, ಮೆಹಬೂಬ ದೇಸಾಯಿ, ಮಹಾರಾಷ್ಟ್ರದ ಜಯಶ್ರೀ ಕಾಂಬಳೆ, ಮನಿಷಾ ಗಾಯಕವಾಡ, ಉಜ್ವಲಾ ಬಿಲಾನೆ, ಕಾನ್ಸ್ಟೆಬಲ್ ಅನಂತ ನರವಾಡೆ ಹಾಗೂ ಹೆಡ್ ಕಾನ್ಸ್ಟೆಬಲ್ ದಿಲದಾರ್ ಶೇಖ್ ಆರೋಪಿಗಳು. ಈ ಪೈಕಿ ಮೆಹಬೂಬ ದೇಸಾಯಿ ಪರಾರಿಯಾಗಿದ್ದು, ಉಳಿದ ಏಳು ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಂಧಿತರಿಂದ ಬಿಸಿ ಮಾಡುವ ಯಂತ್ರಗಳು, ನೋಟಿನ ಗಾತ್ರದ ಖಾಲಿ ಹಾಳೆಗಳ ಬ್ಯಾಗ್, ಕೆಮಿಕಲ್ ಬಾಟಲಿಗಳು, ಅಸಲಿ ನಾಲ್ಕು ನೋಟುಗಳು, 8 ಮೊಬೈಲ್, ₹2,520 ನಗದು ವಶಪಡಿಸಿಕೊಳ್ಳಲಾಗಿದೆ. ಮುಖ್ಯ ಆರೋಪಿಗಳು ಮಹಾರಾಷ್ಟ್ರ ಮೂಲದವರಾಗಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಸುಲಭವಾಗಿ ಸಂಚರಿಸಲು ಹಾಗೂ ಎಲ್ಲಿಯಾದರೂ ಸಿಲುಕಿಕೊಂಡರೆ ತಪ್ಪಿಸಿಕೊಳ್ಳಲು ಇಬ್ಬರು ಪೊಲೀಸ್ ಕಾನ್ಸ್ಟೆಬಲ್ಗಳು ತಮ್ಮ ಗುರುತಿನ ಚೀಟಿ ತೋರಿಸಿ ಸಹಾಯ ಮಾಡುತ್ತಿದ್ದರು. ಮೊದಲಿಗೆ ಗೋಕಾಕಕ್ಕೆ ಬಂದ ಜಯಶ್ರೀ ಕಾಂಬಳೆ, ಮೆಹಬೂಬ ದೇಸಾಯಿಯನ್ನು ಪರಿಚಯ ಮಾಡಿಕೊಂಡು ಆತನ ಮೂಲಕ ಸ್ಥಳೀಯ ಇನ್ನಿಬ್ಬರನ್ನು ಈ ಜಾಲದಲ್ಲಿ ಸೇರಿಸಿಕೊಂಡಿದ್ದರು. ಬಳಿಕ ಮಹಾರಾಷ್ಟ್ರದ ಇತರರು ಇಲ್ಲಿಗೆ ಬಂದು ವಂಚನೆ ನಡೆಸುತ್ತಿದ್ದರು ಎಂದು ಎಸ್ಪಿ ವಿವರಿಸಿದರು.

ಆರೋಪಿಗಳು 500 ರೂಪಾಯಿ ನೋಟಿನ ಗಾತ್ರದ ಕಪ್ಪು ಬಣ್ಣದ ಖಾಲಿ ಹಾಳೆಗಳನ್ನು ಕೆಮಿಕಲ್ನಲ್ಲಿ ಹಾಕಿ ಯಂತ್ರದಲ್ಲಿ ಸ್ವಲ್ಪ ಬಿಸಿ ಮಾಡಿ ಬಳಿಕ ಬಿಳಿ ಪುಡಿಯಿಂದ ತೊಳೆದರೆ ₹500 ನೋಟುಗಳು ಮೂಡುತ್ತವೆ ಎಂದು ಡೆಮೋ ತೋರಿಸುತ್ತಿದ್ದರು. ಆದರೆ, ಡೆಮೋ ವೇಳೆ ನಿಜವಾದ ₹500 ಮುಖಬೆಲೆಯ ನೋಟಿಗೆ ಮೊದಲೇ ಕಪ್ಪು ಮಸಿ ಹಚ್ಚಿ ಅದನ್ನೇ ಕೆಮಿಕಲ್ನಲ್ಲಿ ಹಾಕಿ ತೊಳೆದು ನೋಟು ಮೂಡಿ ಬಂದಂತೆ ತೋರಿಸುತ್ತಿದ್ದರು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.