ಗೋಕಾಕ: ಕರ್ನಾಟಕ ರಾಜ್ಯ ರೈತ ಸಂಘ– ಹಸಿರು ಸೇನೆಯ ಕಾರ್ಯಕರ್ತರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಿನಿ ವಿಧಾನಸೌಧ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಉಪ-ತಹಶೀಲ್ದಾರ್ ಎಸ್.ಟಿ.ಬೆಟಗೇರಿ ಅವರಿಗೆ ಮನವಿ ಸಲ್ಲಿಸಿದರು.

ರಾಸಾಯನಿಕ ಗೊಬ್ಬರಕ್ಕೆ ಎಫ್ಐಡಿ ತೆಗೆಯಬೇಕು ಮತ್ತು ಯಾವುದೇ ಲಿಂಕ್ ಇಲ್ಲದೆ ರೈತರಿಗೆ ನೇರವಾಗಿ ಅವಶ್ಯವಿರುವ ಯೂರಿಯಾ, ರಸಗೊಬ್ಬರ ವಿತರಿಸಬೇಕು. ಅಕಾಲಿಕ ಮಳೆಯಿಂದ ಬೆಳೆಗಳು ನಾಶವಾಗಿದ್ದು ತಕ್ಷಣವೇ ಸಮೀಕ್ಷೆ ಮಾಡಿ ಪರಿಹಾರ ನೀಡಬೇಕು. ಹೊಸ ಪಡಿತರ ಚೀಟಿ ವಿತರಣೆ ತಕ್ಷಣವೇ ಪ್ರಾರಂಭಿಸಬೇಕು. ತೋಟದ ಮನೆಗಳಿಗೆ ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯ ವರೆಗೆ ಸಿಂಗಲ್ ಫೇಸ್ ಮತ್ತು ನೀರಾವರಿ ಪಂಪ್ ಸೆಟ್ಗಳಿಗೆ ಹಗಲು, 7 ಗಂಟೆಗಳ ಕಾಲ ನಿರಂತರವಾಗಿ ವಿದ್ಯುತ್ ಪೂರೈಸಬೇಕು. ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ರೈತರಿಗೆ ತೊಂದರೆ ಆಗುತ್ತಿದ್ದು ತಕ್ಷಣವೇ ಅವರ ಜೊತೆ ಸಭೆ ಮಾಡಿ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ಮಂಜುನಾಥ ಪೂಜೇರಿ, ವಾಸು ಪಂದ್ರೋಳಿ, ಕುಮಾರ ತಿಗಡಿ, ಸಿದ್ದಲಿಂಗಪ್ಪ ಪೂಜೇರಿ, ಲಾಲಸಾಬ್ ಶಿವಾಪುರೆ, ರಾಯಪ್ಪ ಗೌಡಪ್ಪನವರ, ಬೀರಪ್ಪ ತೋಳಿನವರ, ಮುಖಂಡರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-21-904569430

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.