ಗೋಕಾಕ: ‘ಅವಿಸ್ಮರಣೀಯ ನೆನಪುಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದು ಸದಾ ನೆನಪಿನಲ್ಲಿರುವಂತೆ ಮಾಡುವ ಛಾಯಾಗ್ರಾಹಕರಿಗೆ ಕೆಪಿಎ ಆಸರೆ ಯೋಜನೆ ಉಪಯುಕ್ತವಾಗಿದೆ’ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

ಇಲ್ಲಿನ ಹಿಲ್ ಗಾರ್ಡನ ಕಾರ್ಯಾಲಯದಲ್ಲಿ ಕರ್ನಾಟಕ ಫೋಟೊಗ್ರಾಫರ್ಸ್ ಅಸೋಸಿಯೇಷನ್ ಜಿಲ್ಲಾ ಮತ್ತು ತಾಲ್ಲೂಕು ಸಂಘಗಳ ಸಹಯೋಗದಲ್ಲಿ ಸೋಮವಾರ ನಿಧನ ಹೊಂದಿದ ಸಂಘದ ಸದಸ್ಯ ಛಾಯಾಗ್ರಾಹಕರ ಕುಟುಂಬಕ್ಕೆ ₹1 ಲಕ್ಷ ಸಹಾಯಧನ ನೀಡುವ ಆಸರೆ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಸಂಘವು ಛಾಯಾಗ್ರಾಹಕರ ಮತ್ತು ಅವರ ಕುಟುಂಬದ ರಕ್ಷಣೆಗಾಗಿ ನೀಡುತ್ತಿರುವ ಯೋಜನೆಗಳು ಮಾದರಿಯಾಗಿವೆ. ಛಾಯಾಗ್ರಾಹಕರು ಸಂಘಟಿತರಾಗಿ ತಮ್ಮ ವೃತ್ತಿ ಕೌಶಲದಿಂದ ಬದುಕು ರೂಪಿಸಿಕೊಳ್ಳಿ. ಇದಕ್ಕೆ ನಮ್ಮ ಸಹಾಯ, ಸಹಕಾರ ನೀಡಲಾಗುವುದು’ ಎಂದು ಹೇಳಿದರು.

ಕೆಪಿಎನ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಕೆ.ಆರ್., ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣ ಯಮಕನಮರಡಿ, ಸಹ-ಕಾರ್ಯದರ್ಶಿ ಸುರೇಶ ರಜಪೂತ, ತಾಲ್ಲೂಕು ಅಧ್ಯಕ್ಷ ಗಂಗಾಧರ ಕಳ್ಳಿಗುದ್ದಿ, ಉಪಾಧ್ಯಕ್ಷ ರವಿ ಉಪ್ಪಿನ, ಕಾರ್ಯದರ್ಶಿ ಮಧು ಸೋನಗೋಜಿ, ಖಜಾಂಚಿ ರಾಜಶೇಖರ ರಜಪೂತ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-21-1704601339

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.