ಗೋಕಾಕ: ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘವು ಆರೋಗ್ಯ ತಪಾಸಣೆಗಾಗಿ ಉಚಿತ ಶಿಬಿರ ಏರ್ಪಡಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ್ದೀರಿ ಎಂದು ಯುಥ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ಹೇಳಿದರು.

ನಗರಸಭೆ ಸಮುದಾಯ ಭವನದಲ್ಲಿ ಈಚೆಗೆ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಘದ ಬೆಳಗಾವಿ ಜಿಲ್ಲಾ ಘಟಕ ಅಧ್ಯಕ್ಷ ಎಸ್.ಜಿ. ಸಿದ್ನಾಳ ಮಾತನಾಡಿ, ‘ನಿವೃತ್ತ ನೌಕರರಿಗೆ ಮುಂದೆ ಡಿಎ ಲಭಿಸುವುದಿಲ್ಲ, ವೇತನ ಆಯೋಗದ ಶಿಫಾರಸಿನ ಆರ್ಥಿಕ ಲಾಭ ನೀಡುವುದಿಲ್ಲ ಎಂದು ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಸ್ಪಷ್ಟಪಡಿಸಿರುವುದು ದುರದೃಷ್ಟಕರ. ಹೀಗಾಗಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ’ ಎಂದರು.

ಶಿಕ್ಷಣ ಇಲಾಖೆಯ ಸಹ ನಿರ್ದೇಶಕ ನಿವೃತ್ತ ಗಜಾನನ ಮನ್ನೀಕೇರಿ ಅವರು, ಸಂಘದ ಧ್ಯೇಯ ಧೋರಣೆಗಳ ಕುರಿತು ಮಾತನಾಡಿದರು. ಕಾರ್ಮಿಕ ಧುರೀಣ ಅಂಬಿರಾವ ಪಾಟೀಲ 80 ವರ್ಷ ತುಂಬಿದ ಮತ್ತು ಹಿರಿಯ ನಿವೃತ್ತರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಸಂಘದ ಗೋಕಾಕ ತಾಲ್ಲೂಕು ಘಟಕ ಅಧ್ಯಕ್ಷ ಕೆ.ಡಿ. ವಾಲಿಕಾರ ಅಧ್ಯಕ್ಷತೆ ವಹಿಸಿದ್ದರು.

ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಎಂ.ಬಿ.ಅತ್ತಾರ, ನಿವೃತ್ತ ಅಧ್ಯಾಪಕ ಎಂ.ಬಿ.ಕುದರಿ, ನಿವೃತ್ತ ಜಿಲ್ಲಾ ಸರ್ಜನ್ ಡಾ. ಅಶೋಕ ಮುರಗೋಡ, ನಿವೃತ್ತ ಬಿಇಒ ಎ.ಎಸ್.ಜೋಡಗೇರಿ, ನಿವೃತ್ತ ಸಿಡಿಪಿಒ ಶ್ರೀಶೈಲ ಹಂಜಿ ಇದ್ದರು. ಖಜಾಂಚಿ ದೊಡಮನಿ ಸ್ವಾಗತಿಸಿದರು, ಕಾರ್ಯದರ್ಶಿ ಎಸ್.ಎಸ್.ಕಡಿ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-21-432139834

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.