ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐಗಳಿ ಪಂಚಾಯ್ತಿಯಿಂದ ಸರ್ಕಾರಿ ಶಾಲೆ ದತ್ತು’

Last Updated 24 ಮಾರ್ಚ್ 2022, 12:02 IST
ಅಕ್ಷರ ಗಾತ್ರ

ಐಗಳಿ (ಬೆಳಗಾವಿ): ‘ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಮಾದರಿ ಶಾಲೆಯನ್ನು ಐಗಳಿ ಗ್ರಾಮ ಪಂಚಾಯ್ತಿಯಿಂದ ದತ್ತು ಪಡೆದುಕೊಳ್ಳಲಾಗಿದ್ದು, ಇದರ ಅಭಿವೃದ್ದಿ ನಮ್ಮ ಗುರಿಯಾಗಿದೆ’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಬಸವರಾಜ ಬಿರಾದಾರ ಹೇಳಿದರು.

ಇಲ್ಲಿನ ಸರ್ಕಾರಿ ಕನ್ನಡ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸರ್ಕಾರಿ ಶಾಲೆ ಬಗ್ಗೆ ಮೂಗು ಮುರಿಯುವವರಿಗೆ ಮನವರಿಕೆ ಮಾಡಿಕೊಟ್ಟು ಜಾಗೃತಿ ಮೂಡಿಸುತ್ತಿದ್ದೇವೆ. ಇದರಿಂದ ದಾಖಲಾತಿ ಹೆಚ್ಚಾಗಿದೆ. ಮಾದರಿ ಶಾಲೆಯನ್ನಾಗಿ ಮಾಡುತ್ತೇವೆ. ಒಳ್ಳೆಯ ಶಿಕ್ಷಕರಿದ್ದಾರೆ. ಮಾತೃಭಾಷೆ ಕನ್ನಡ ಕಲಿಸಲು ಟೊಂಕು ಕಟ್ಟಿ ನಿಂತಿದ್ದಾರೆ’ ಎಂದರು.

ಶಾಲೆಯ ಹಳೆಯ ವಿದ್ಯಾರ್ಥಿನಿ, ಉಪನ್ಯಾಸಕಿ ಭಾಗೀರಥಿ ರುದ್ರಗೌಡ ಪಾಟೀಲ, ‘ನಾವು ಕಲಿಯುವಾಗ ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕ ಶಾಲೆ ಇತ್ತು. ಈಗ, ಬಾಲಕಿಯರ ಶಾಲಾ ಕೊಠಡಿ ಖಾಲಿ ಇದೆ. ಇಲ್ಲಿ ಬಾಲಕಿಯರ ಪ್ರೌಢಶಾಲೆ ಪ್ರಾರಂಭವಾಗಬೇಕು’ ಎಂದು ಹೇಳಿದರು.

ರಾಚೋಟೇಶ್ವರ ದೇವರು ಸಾನ್ನಿಧ್ಯ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷೆ ರಾಜಶ್ರೀ ಶಂ.ಪಾಟೀಲ ಉದ್ಘಾಟಿಸಿದರು.

ಪಿಡಿಒ ರಾಜೇಂದ್ರ ಪಾಠಕ, ಸಿಆರ್‌ಸಿ ಮಹಾಂತೇಶ ಗುಡದಿನ್ನಿ, ಶಂಕರಗೌಡ ಪಾಟೀಲ, ಎಸ್‌ಡಿಎಂಸಿ ಅಧ್ಯಕ್ಷೆ ಭೀಮವ್ವ ಚಿಪ್ಪಾಡಿ, ರವೀಂದ್ರ ಹಾಲಳ್ಳಿ, ಸುಜಾತಾ ಭಜಂತ್ರಿ, ಮನೋಹರ ಝುಂಜರವಾಡ, ಸಂತೋಷ ಭಜಂತ್ರಿ, ಉಪದ್ಯಕ್ಷ ಆಲಗೂರ, ಅಣ್ಣಾಸಾಬ ತೆಲಸಂಗ ಇದ್ದರು.

ಅಪ್ಪಾಸಾಬ ಬಿರಾದಾರ ಸ್ವಾಗತಿಸಿದರು. ಎಂ.ಆರ್. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಬಿ.ಕೆ. ಮುಧೋಳ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT