ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ ನಿಗದಿ ಜ.16ರಿಂದ

Last Updated 14 ಜನವರಿ 2021, 16:11 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ 14 ತಾಲ್ಲೂಕುಗಳ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ ನಿಗದಿ ಪ್ರಕ್ರಿಯೆ ಜ. 16ರಿಂದ ಜ.24ರವರೆಗೆ ನಡೆಯಲಿದೆ. ಇದಕ್ಕಾಗಿ ಆಯಾ ತಾಲ್ಲೂಕುಗಳಲ್ಲಿ ಸ್ಥಳ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

* ಜ.16ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1: ಅಥಣಿಯ ಗಚ್ಚಿನಮಠದ ಮುರುಘೇಂದ್ರ ಶಿವಯೋಗಿಸ್ವಾಮಿ ಸಭಾಭವನ.
* ಜ.16ರಂದು ಮಧ್ಯಾಹ್ನ 3ರಿಂದ ಸಂಜೆ 5.30: ಕಾಗವಾಡದ ಶಿರಗುಪ್ಪಿ-ಮೀರಜ್ ರಸ್ತೆ ಬಳಿ ಮಲ್ಲಿಕಾರ್ಜುನ ಹಾಲ್.
* ಜ.18ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1: ರಾಯಬಾಗ ತಾಲ್ಲೂಕಿನ ಚಿಕ್ಕೋಡಿ ರಸ್ತೆ ಮಹಾವೀರ ಭವನ.
* ಜ.18ರಂದು ಮಧ್ಯಾಹ್ನ 3ರಿಂದ ಸಂಜೆ 5.30: ಮೂಡಲಗಿಯ ಕೆ.ಎಚ್. ಸೋನವಾಲ್ಕರ ಕಲ್ಯಾಣ ಮಂಟಪ (ಗುಡ್ಲಮಡ್ಡಿ
ವೀರಭದ್ರೇಶ್ವರ ದೇವಸ್ಥಾನ).
* ಜ.19ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1: ಹುಕ್ಕೇರಿಯ ಬೈಪಾಸ್ ರಸ್ತೆ ಬಳಿ ವಿಶ್ವರಾಜ ಕಲ್ಯಾಣ ಮಂಟಪ.
* ಜ.19ರಂದು ಮಧ್ಯಾಹ್ನ 3ರಿಂದ ಸಂಜೆ 5.30: ಕಿತ್ತೂರು ತಾಲ್ಲೂಕಿನ ಪೊಲೀಸ್ ಠಾಣೆ ಎದುರಿನ ವೀರಭದ್ರೇಶ್ವರ ಕಲ್ಯಾಣ ಮಂಟಪ.
* ಜ.21ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1: ಬೆಳಗಾವಿ ತಾಲ್ಲೂಕಿನ ಕಾಲೇಜು ರಸ್ತೆ ಬಳಿಯ ಮಹಾತ್ಮ ಗಾಂಧಿ ಭವನ.
* ಜ.21ರಂದು ಮಧ್ಯಾಹ್ನ 3ರಿಂದ ಸಂಜೆ 5.30: ಖಾನಾಪುರ ತಾಲ್ಲೂಕಿನ ಖಾನಾಪುರ-ನಂದಗಡ ರಸ್ತೆ ಬಳಿ ಪಾಟೀಲ ಗಾರ್ಡನ್ (ಕರಂಬಳ).
* ಜ.22ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1: ಗೋಕಾಕ ತಾಲ್ಲೂಕಿನ ಘಟಪ್ರಭಾ ರಸ್ತೆ ಬಸವೇಶ್ವರ ಕಲ್ಯಾಣಮಂಟಪ.
* ಜ.22ರಂದು ಮಧ್ಯಾಹ್ನ 3ರಿಂದ ಸಂಜೆ 5.30: ಬೈಲಹೊಂಗಲ ತಾಲ್ಲೂಕಿನ ಇಂಚಲ ಕ್ರಾಸ್ ಬಳಿ ಶಿವಬಸವ ಕಲ್ಯಾಣ ಮಂಟಪ.
* ಜ.23: ಬೆಳಿಗ್ಗೆ 10ರಿಂದ ಮಧ್ಯಾಹ್ನ 1: ಚಿಕ್ಕೋಡಿ ತಾಲ್ಲೂಕಿನ ಅಂಕಲಿ ರಸ್ತೆ ಬಳಿ ಪರಟಿ ನಾಗಲಿಂಗೇಶ್ವರ ಕಲ್ಯಾಣ ಮಂಟಪ.
* ಜ.23ರಂದು ಮಧ್ಯಾಹ್ನ 3ರಿಂದ ಸಂಜೆ 5.30: ನಿಪ್ಪಾಣಿ ತಾಲ್ಲೂಕಿನ ಪಿ.ಬಿ. ರಸ್ತೆ ಹತ್ತಿರ ಆಶೀರ್ವಾದ ಭವನ.
* ಜ.24ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1: ರಾಮದುರ್ಗ ತಾಲ್ಲೂಕಿನ ಸಾಯಿನಗರದ ಪುರಸಭೆ ಸಾಂಸ್ಕೃತಿಕ ಸಭಾಭವನ.
* ಜ.24ರಂದು ಮಧ್ಯಾಹ್ನ 3ರಿಂದ ಸಂಜೆ 5.30: ಸವದತ್ತಿ ತಾಲ್ಲೂಕಿನ ಮಾಮನಿ ಕಲ್ಯಾಣಮಂಟಪದ ಸಭಾಭವನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT