ತರಕಾರಿ ಬೆಲೆಯಲ್ಲಿ ಏರಿಳಿತ: ಹಸಿಮೆಣಸಿನಕಾಯಿ ‘ಖಾರ’, ಚಿಕನ್, ಮೊಟ್ಟೆ ತುಟ್ಟಿ

7

ತರಕಾರಿ ಬೆಲೆಯಲ್ಲಿ ಏರಿಳಿತ: ಹಸಿಮೆಣಸಿನಕಾಯಿ ‘ಖಾರ’, ಚಿಕನ್, ಮೊಟ್ಟೆ ತುಟ್ಟಿ

Published:
Updated:

ಬೆಳಗಾವಿ: ನಗರದಲ್ಲಿ ವಾರದಿಂದೀಚೆಗೆ ಹಸಿಮೆಣಸಿನಕಾಯಿ, ಕೋಳಿ ಮಾಂಸ ಹಾಗೂ ಮೊಟ್ಟೆ ಕೊಂಚ ತುಟ್ಟಿಯಾಗಿದೆ. ಉಳಿದಂತೆ, ತರಕಾರಿಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಆಗಿಲ್ಲ.

ಜಿಲ್ಲೆಯು ತಾಜಾ ತರಕಾರಿಗೆ ಹೆಸರುವಾಸಿ. ಅಲ್ಲದೇ, ಈ ಭಾಗದ ದೊಡ್ಡ ಸಗಟು ತರಕಾರಿ ಮಾರುಕಟ್ಟೆಯೂ ಇದೆ. ಇಲ್ಲಿಗೆ ಖಾನಾಪುರ, ಕಿತ್ತೂರು, ಹುಕ್ಕೇರಿ, ಘಟಪ್ರಭಾ, ಚಿಕ್ಕೋಡಿ, ಬೈಲಹೊಂಗಲ, ಗೋಕಾಕ, ಬೆಳಗಾವಿ ತಾಲ್ಲೂಕು ಮೊದಲಾದ ಕಡೆಗಳ ರೈತರು ನಿತ್ಯ ನೂರಾರು ವಾಹನಗಳಲ್ಲಿ ತರಕಾರಿಗಳನ್ನು ತಂದು ಮಾರುತ್ತಾರೆ. ಅಲ್ಲಿ 240ಕ್ಕೂ ಹೆಚ್ಚಿನ ಸಗಟು ತರಕಾರಿ ವ್ಯಾಪಾರಿಗಳಿದ್ದಾರೆ. ಚಿಲ್ಲರೆ ವ್ಯಾಪಾರಿಗಳು ಅವರಿಂದ ಖರೀದಿಸಿ, ಅಲ್ಲಲ್ಲಿ ಅಂಗಡಿಗಳು, ತಳ್ಳುಗಾಡಿಗಳು ಅಥವಾ ಹಾಗೂ ರಸ್ತೆಗಳ ಬದಿಯಲ್ಲಿ ಇಟ್ಟುಕೊಂಡು ಮಾರುತ್ತಾರೆ. ಬಹುತೇಕ ಬಡಾವಣೆಗಳಲ್ಲಿ ರಸ್ತೆ ಬದಿಯಲ್ಲಿ ಸಂತೆ ಇರುತ್ತದೆ. ಅಲ್ಲಿ, ಮುಖ್ಯ ಮಾರುಕಟ್ಟೆಗಿಂತ ಕೊಂಚ ಬೆಲೆ ಜಾಸ್ತಿಯಾದರೂ, ಸ್ಥಳೀಯರು ಅಲ್ಲಿಯೇ ಖರೀದಿಗೆ ಆದ್ಯತೆ ನೀಡುತ್ತಾರೆ. ಹೀಗಾಗಿ, ಬೆಲೆಯಲ್ಲಿ ವ್ಯತ್ಯಾಸಗಳು ಸಾಮಾನ್ಯವಾಗಿವೆ.

ನೆರೆಯ ಗೋವಾ, ಮಹಾರಾಷ್ಟ್ರವಲ್ಲದೇ, ರಾಜ್ಯದ ರಾಯಚೂರು, ಕಾರವಾರಕ್ಕೂ ಇಲ್ಲಿಂದ ತರಕಾರಿ ರವಾನಿಸಲಾಗುತ್ತದೆ. ನಗರಕ್ಕೆ ಬರುವ ಗೋವಾದವರು ಸಾಮಾನ್ಯವಾಗಿ ತರಕಾರಿಗಳನ್ನು ಖರೀದಿಸಿಕೊಂಡು ಹೋಗುತ್ತಾರೆ. ಹೀಗಾಗಿ, ಖಾನಾಪುರ ರಸ್ತೆಯ ತರಕಾರಿ ಅಂಗಡಿಗಳಲ್ಲಿ ವಾರಾಂತ್ಯದ ದಿನಗಳಲ್ಲಿ ತರಕಾರಿ ಬೆಲೆ ಜಾಸ್ತಿ ಇರುತ್ತದೆ.

ಸ್ವಲ್ಪ ಏರಿಕೆ:
‘ವಾರದ ಹಿಂದಿಗೆ ಹೋಲಿಸಿದರೆ ಈಗ ಕ್ಯಾರೆಟ್‌ ಬೆಲೆ ₹ 70ರಿಂದ 60ಕ್ಕೆ ಇಳಿದಿದೆ. ಕ್ಯಾರೆಟ್‌ಗೆ ಹೆಚ್ಚಿನ ಬೇಡಿಕೆ ಇದೆ. ಪೂರೈಕೆಯೂ ಚೆನ್ನಾಗಿರುವುದರಿಂದ ಬೆಲೆ ಕಡಿಮೆಯೇ ಇದೆ. ಕೊತ್ತಂಬರಿ ಸೊಪ್ಪಿನ ಬೆಲೆ ₹ 5 (ಸಣ್ಣ ಕಟ್ಟು) ಇದೆ. ಕೆಲವು ತಾಲ್ಲೂಕುಗಳಲ್ಲಿ ಮಳೆ ಬೀಳುತ್ತಿರುವುದರಿಂದಾಗಿ, ಮಾರುಕಟ್ಟೆಯಲ್ಲಿ ಒಂದಷ್ಟು ತರಕಾರಿಗಳ ಆವಕದ ಪ್ರಮಾಣ ಕಡಿಮೆಯಾಗಿದೆ. ಇದರಿಂದಾಗಿ, ತರಕಾರಿ ಬೆಲೆ ಸ್ವಲ್ಪ ಏರಿದೆ. ಮುಖ್ಯವಾಗಿ ಹಸಿಮೆಣಸಿನ ಕಾಯಿ ಬೆಲೆ ಜಾಸ್ತಿಯಾಗಿದೆ. ಕೆ.ಜಿ. ₹ 30ರಿಂದ ₹ 40ಕ್ಕೆ ಹೆಚ್ಚಾಗಿದೆ’ ಎಂದು ವ್ಯಾಪಾರಿಗಳಾದ ಪ್ರಶಾಂತ ಮರಗಿ ಹಾಗೂ ಸೈಯದ್ ಹುದಲಿ ತಿಳಿಸಿದರು.

‘ಗ್ರಾಹಕರು, ಸ್ಥಳೀಯ ಕ್ಯಾರೆಟ್‌ಗಿಂತ ಬೆಂಗಳೂರಿನ ಕ್ಯಾರೆಟ್‌ ಅನ್ನು ಹೆಚ್ಚಾಗಿ ಕೇಳುತ್ತಾರೆ. ಸ್ಥಳೀಯವಾಗಿ ಸಿಗುವ ಕ್ಯಾರೆಟ್‌ ಅನ್ನು ಅಂದೇ ಖಾಲಿ ಮಾಡಬೇಕು. ಬೆಂಗಳೂರಿನಿಂದ ಬರುವುದಾದರೆ, ರುಚಿಯಾಗಿರುತ್ತದೆ; 2–3 ದಿನವಿಟ್ಟರೂ ಕೆಡವುದಿಲ್ಲ ಎಂದು ಗ್ರಾಹಕರು ಹೇಳುತ್ತಾರೆ. ಇಲ್ಲಿನ ಸಗಟು ಮಾರುಕಟ್ಟೆಗೆ 2 ದಿನಕ್ಕೊಮ್ಮೆ ಬೆಂಗಳೂರಿನಿಂದ ಒಂದು ಲೋಡ್‌ ಕ್ಯಾರೆಟ್‌ ಬರುತ್ತದೆ’ ಎಂದು ಮಾಹಿತಿ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !