ಮತಗಟ್ಟೆಗೆ ಹೋಗುವ ಮುನ್ನ...

ಸೋಮವಾರ, ಮೇ 27, 2019
27 °C

ಮತಗಟ್ಟೆಗೆ ಹೋಗುವ ಮುನ್ನ...

Published:
Updated:

ಬೆಳಗಾವಿ: ಮತಗಟ್ಟೆಗೆ ಹೋಗುವ ಮುನ್ನ... ಇವನ್ನು ಗಮನಿಸಿ.

* ಮತ ಚಲಾಯಿಸಲು ಮತದಾರರ ಪಟ್ಟಿಯಲ್ಲಿ ಹೆಸರು ಇರುವುದು ಕಡ್ಡಾಯ.

* ಮುಖ್ಯ ಚುನಾವಣಾಧಿಕಾರಿ ಜಾಲತಾಣದಲ್ಲಿ ಲಭ್ಯವಿರುವ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಧೃಡಪಡಿಸಿಕೊಳ್ಳಿ ceokarnataka.kar.nic.in ಮತ್ತು www.nvsp.in

* ಸಹಾಯವಾಣಿ 1950ಗೆ ಕರೆ ಮಾಡಿಯೂ ಮಾಹಿತಿ ಪಡೆಯಬಹುದು.

* ಮತಗಟ್ಟೆ ಕೇಂದ್ರಗಳ ಒಳಗೆ ಮೊಬೈಲ್‌ ಫೋನ್‌, ಕ್ಯಾಮೆರಾ ತೆಗೆದುಕೊಂಡು ಹೋಗುವಂತಿಲ್ಲ.

ಮತದಾನ ಕೇಂದ್ರದಲ್ಲಿ...

* ಮತಗಟ್ಟೆ ಅಧಿಕಾರಿ 1: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಮತ್ತು ಮತದಾರರ ಗುರುತಿನ ಚೀಟಿ ಪರಿಶೀಲಿಸುತ್ತಾರೆ.

* ಮತಗಟ್ಟೆ ಅಧಿಕಾರಿ 2: ನಿಗದಿತ ಬೆರಳಿಗೆ ಶಾಯಿ ಗುರುತು ಹಾಕುತ್ತಾರೆ. ಮತದಾನದ ಚೀಟಿ ನೀಡಿ ನಿಮ್ಮ ಸಹಿ ಪಡೆದುಕೊಳ್ಳುತ್ತಾರೆ.

* ಮತಗಟ್ಟೆ ಅಧಿಕಾರಿ 3: ಮತದಾನದ ಚೀಟಿ ಪಡೆದು ನಿಮ್ಮ ಬೆರಳನ್ನು ಪರಿಶೀಲಿಸುತ್ತಾರೆ.

* ಹಂತ 4: ಮತದಾನದ ಸ್ಥಳಕ್ಕೆ ಹೋಗಿ, ಉರಿಯುತ್ತಿರುವ ಹಸಿರು ದೀಪ ಮತಯಂತ್ರ ಸಿದ್ಧವಾಗಿರುವುದನ್ನು ಹೇಳುತ್ತದೆ. ಅಭ್ಯರ್ಥಿ ಹೆಸರು, ಚಿಹ್ನೆ ಮುಂದಿರುವ ನೀಲಿ ಬಟನ್‌ ಒತ್ತುವ ಮೂಲಕ ನಿಮ್ಮ ಮತ ಚಲಾಯಿಸಬೇಕು. ಅಭ್ಯರ್ಥಿ ಹೆಸರಿನ ಎದುರಿನ ಕೆಂಪು ದೀಪ ಉರಿಯುತ್ತದೆ. ಬೀಪ್‌ ಶಬ್ದ ಕೇಳಿಸುತ್ತದೆ.

* ಹಂತ 5: ವಿವಿಪ್ಯಾಟ್‌ ಮಷಿನ್‌ಮಲ್ಲಿರುವ ಮುದ್ರಿತ ಪ್ರತಿ ನೋಡಿ ಮತ ನೀವು ಚಲಾಯಿಸಿದ ಅಭ್ಯರ್ಥಿಗೆ ಹೋಗಿದೆ ಎನ್ನುವುದನ್ನು ಖಾತ್ರಿ ಮಾಡಿಕೊಳ್ಳಿ. ವಿವಿಪ್ಯಾಟ್‌ ಚೀಟಿ ಏಳು ಸೆಕೆಂಡ್‌ವರೆಗೆ ಕಾಣಿಸುತ್ತದೆ. ನಂತರ ಡಬ್ಬದೊಳಗೆ ಬೀಳುತ್ತದೆ. ಬೀಪ್‌ ಶಬ್ದ ಕೇಳುತ್ತದೆ.

* ಹಂತ 6: ನೀವು ಚಲಾಯಿಸಿದ ಮತ ನೀವು ಆಯ್ಕೆ ಮಾಡಿದ ವ್ಯಕ್ತಿಗೆ ಬೀಳದಿದ್ದರೆ ಚುನಾವಣಾ ಅಧಿಕಾರಿಗೆ ದೂರು ನೀಡಬಹುದು. ದೂರು ಸರಿಯಾಗಿದ್ದರೆ ಮತ್ತೊಮ್ಮೆ ಮತ ಚಲಾಯಿಸಲು ಷರತ್ತುಬದ್ಧ ಅವಕಾಶ ನೀಡಲಾಗುತ್ತದೆ. ಅಭ್ಯರ್ಥಿಗಳಲ್ಲಿ ಯಾರೂ ನಿಮಗೆ ಇಷ್ಟವಾಗದಿದ್ದಲ್ಲಿ ‘ನೋಟಾ’ ಗುಂಡಿ ಒತ್ತಬಹುದು.

ಚಾಲೆಂಜ್‌ ವೋಟ್‌

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದು, ನಿಮ್ಮ ಬಳಿ ಮತದಾರರ ಗುರುತಿನ ಚೀಟಿ ಇಲ್ಲದಿದ್ದ ಸಂದರ್ಭದಲ್ಲಿ ಇತರೆ 11 ಬದಲಿ ದಾಖಲೆಗಳನ್ನು ನೀಡಿ ಮತದಾನ ಮಾಡಬಹುದು. ಮತಗಟ್ಟೆಯಲ್ಲಿ ಏಜೆಂಟರ್‌ಗಳು ಗುರುತಿನ ಚೀಟಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೆ ₹ 2 ಠೇವಣಿ ಇರಿಸಿ ಮತದಾನ ಮಾಡಬಹುದು. ನಿಯಮ 49ಜೆ ಅನುಸಾರ ಇದನ್ನು ಚಾಲೆಂಜ್‌ ವೋಟ್‌ ಎಂದು ಕರೆಯಲಾಗುತ್ತದೆ.

ಟೆಂಡರ್‌ ವೋಟ್‌

ನೀವು ಮತಗಟ್ಟೆಗೆ ಬಂದು ಮತ ಚಲಾಯಿಸುವುದಕ್ಕೂ ಮುನ್ನ ನಿಮ್ಮ ಹೆಸರಿನಲ್ಲಿ ಬೇರೆ ಯಾರಾದರೂ ಮತ ಚಲಾಯಿಸಿದ್ದರೆ ಅಂತಹ  ಸಂದರ್ಭದಲ್ಲಿ ಮತ ಚಲಾಯಿಸಲು ಅವಕಾಶವಿದೆ. ಅದನ್ನು ಟೆಂಡರ್‌ ವೋಟ್‌ ಎಂದು ಕರೆಯಲಾಗುತ್ತದೆ.

ಟೆಂಡರ್‌ ವೋಟ್‌ ಮಾಡಲು ಮತಗಟ್ಟೆ ಅಧಿಕಾರಿ ಭೇಟಿಯಾಗಿ ಸಮಜಾಯಿಷಿ ನೀಡಿ ಅವರು ನೀಡುವ ನಮೂನೆಯಲ್ಲಿ ಸಹಿ ಮಾಡಬೇಕಾಗುತ್ತದೆ.

ಎಪಿಕ್‌ ಇಲ್ಲದಿದ್ದರೆ ಏನು ಮಾಡುವುದು?

ಮತದಾರರ ಗುರುತಿನ ಚೀಟಿ ಲಭ್ಯವಿಲ್ಲದಿದ್ದಲ್ಲಿ ಇತರ 11 ದಾಖಲೆಗಳನ್ನು ನೀಡಿ ಮತ ಚಲಾಯಿಸಲು ಅವಕಾಶವಿದೆ.

ದಾಖಲೆಗಳು: ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಕೇಂದ್ರ, ರಾಜ್ಯ ಸರ್ಕಾರ, ಸಾರ್ವಜನಿಕ ಸೀಮಿತ ಕಂಪನಿಗಳ ನೌಕರರಿಗೆ ನೀಡಲಾದ ಛಾಯಾಚಿತ್ರಗಳೊಂದಿಗೆ ಸೇವೆಯ ಗುರುತಿನ ಚೀಟಿಗಳು, ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್‌ಗಳು ನೀಡಿರುವ ಪಾಸ್‌ಬುಕ್, ಪ್ಯಾನ್ ಕಾರ್ಡ್‌, ಆರ್‌ಜಿಐ ಅಥವಾ ಎನ್‌ಪಿಆರ್ ಮೂಲಕ ನೀಡಲಾಗಿರುವ ಸ್ಮಾರ್ಟ್ ಕಾರ್ಡ್, ಉದ್ಯೋಗ ಖಾತ್ರಿ ಗುರುತಿನ ಪತ್ರ, ಕಾರ್ಮಿಕ ಇಲಾಖೆಯಿಂದ ನೀಡಲಾಗಿರುವ ವಿಮಾಕಾರ್ಡ್‌ಗಳು, ಫೋಟೊಸಹಿತದ ಪಿಂಚಣಿ ಕಾರ್ಡ್, ಶಾಸಕರು, ಸಂಸದರು ನೀಡಿರುವ ಅಧಿಕೃತ ಗುರುತಿನ ಚೀಟಿ, ಮತ್ತು ಆಧಾರ ಕಾರ್ಡ್‌.

ಎಡಗೈ ತೋರು ಬೆರಳಿಗೆ

ಮತದಾರರು ಮತದಾನ ಮಾಡಿರುವುದನ್ನು ಖಚಿತಪಡಿಸಿಕೊಳ್ಳಲು ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಚ್ಚಲಾಗುವುದು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !