ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಜಿಮ್ ಕಿಟ್ ವಿತರಿಸಿದ ಸತೀಶ ಜಾರಕಿಹೊಳಿ

Last Updated 1 ಅಕ್ಟೋಬರ್ 2020, 12:00 IST
ಅಕ್ಷರ ಗಾತ್ರ

ಬೆಳಗಾವಿ: ಯಮಕನಮರಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯುವಕರಿಗೆ ಶಾಸಕ ಸತೀಶ ಜಾರಕಿಹೊಳಿ ₹ 90 ಲಕ್ಷ ವೆಚ್ಚದ ಮೂರು ಜಿಮ್ ಕಿಟ್‌ಗಳನ್ನು ವಿತರಿಸಿದರು.

ನಂತರ ಮಾತನಾಡಿದ ಅವರು, ‘ಈಗಾಗಲೇ 42 ಕಿಟ್‌ಗಳನ್ನು ಕ್ಷೇತ್ರದ ವಿವಿಧ ಗ್ರಾಮಗಳ ಯುವಕರಿಗೆ ವಿತರಿಸಿದ್ದೇನೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಶಿಕ್ಷಣ ಕ್ರಾಂತಿ ಮಾಡಲು ಪ್ರಯತ್ನಿಸುತ್ತಿದ್ದೇನೆ. ಯುವಜನರು ದುಶ್ಚಟಗಳಿಗೆ ಮಾರು ಹೋಗದೆ ಆರೋಗ್ಯ ಕಾಪಾಡಿಕೊಂಡು ಸದೃಢವಾಗಿರಬೇಕು’ ಎಂದು ಸಲಹೆ ನೀಡಿದರು.

ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ, ಮುಖಂಡರಾದ ರಾಜು ಮಾಯಣ್ಣವರ, ಜಾವೇದ ತಹಶೀಲ್ದಾರ, ಶಿವ ದೇಸಾಯಿ, ರಾಜು ಕುಟ್ರೆ, ನಾಗೇಶ ದೇಸಾಯಿ, ನಂದು ಜಾಧವ, ಗೌಡಪ್ಪ ಪಾಟೀಲ, ಸಾಗರ ಪಟಕೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT