ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲುಮತ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಹೆಚ್ಚಲಿ: ನಿಶಾಂತ ದಳವಾಯಿ

Last Updated 26 ಜನವರಿ 2022, 14:40 IST
ಅಕ್ಷರ ಗಾತ್ರ

ಅಥಣಿ: ‘ಮುಖಂಡರು ರಾಜಕಾರಣದೊಂದಿಗೆ ಸಮಾಜ ಸಂಘಟನೆಗೂ ಒತ್ತು ಕೊಡಬೇಕು. ಆಗ, ರಾಜಕೀಯ ಭವಿಷ್ಯದೊಂದಿಗೆ ಹಾಲುಮತಕ್ಕೂ ಒಳಿತಾಗುತ್ತದೆ’ ಎಂದು ಹಾಲುಮತ ಮಹಾಸಭಾ ಚಿಕ್ಕೊಡಿ ಜಿಲ್ಲಾ ಘಟಕದ ಅಧ್ಯಕ್ಷ ನಿಶಾಂತ ದಳವಾಯಿ ಹೇಳಿದರು.

ಸಂಗೊಳ್ಳಿರಾಯಣ್ಣ ಪುಣ್ಯಸ್ಮರಣೊತ್ಸವದ ನಿಮಿತ್ತ ಇಲ್ಲಿ ಸಮಾಜದಿಂದ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಲವು ವರ್ಷಗಳಿಂದ ನಾವು ಸಮಾಜ ಸಂಘಟನೆ ಮಾಡುತ್ತಾ ಬಂದಿದ್ದೇವೆ. ಇನ್ನೂ ಸಕ್ರಿಯವಾಗಿ ಚಟುವಟಿಕೆಗಳು ನಡೆಯಬೇಕು. ಎರಡು ವರ್ಷಗಳಿಂದ ಕೊರೊನಾದಿಂದಾಗಿ ಸಂಘಟನೆಗೆ ತೊಡಕಾಗಿದೆ. ಮುಂದೆ ಕ್ರಿಯಾಶೀಲವಾಗಿ ತೊಡಗಬೇಕು’ ಎಂದರು.

ಕುರುಬರ ಸಂಘ ಜಿಲ್ಲಾ ಘಟಕದ ಪ್ರದಾನ ಕಾರ್ಯದರ್ಶಿ ಸತ್ಯಪ್ಪ ಬಾಗೆನ್ನವರ್, ‘ಹಿಂದುಳಿದ ವರ್ಗದವರಾದ ನಾವು ಸಮಾಜವನ್ನು ಸಂಘಟಿಸಿ ಹಕ್ಕು ಪಡೆದುಕೊಳ್ಳಬೇಕಾಗಿದೆ. ರಾಜಕೀಯ ಪ್ರಾತನಿಧ್ಯ ಸಿಗುವಂತೆಯೂ ಮಾಡಬೇಕಿದೆ. ಜನರಿಗೆ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಲು ಅವಕಾಶಗಳನ್ನು ಕಲ್ಪಿಸಬೇಕು’ ಎಂದು ನುಡಿದರು.

‘ಬರುವ ಚುನಾವಣೆಗಳಲ್ಲಿ ಸಮಾಜದವರಿಗೆ ಹೆಚ್ಚಿನ ಟಿಕೆಟ್‌ಗೆ ಬೇಡಿಕೆ ಇಡಬೇಕು‘ ಎಂದು ಕರೆ ನೀಡಿದರು.

ಮುಖಂಡರಾದ ಸುರೇಶ ಮಾಯಣ್ಣವರ, ಬಾಬು ಮೆಂಡಿಗೇರಿ, ಬೀರಪ್ಪ ಯಕ್ಕಂಚ್ಚಿ, ಅಪ್ಪಸಾಬ ಮಳಮಳಸಿ, ಬಾಬುರಾವ ವಾಘಮೋಡೆ, ರಾಜಕುಮಾರ ದಳವಾಯಿ, ಚಿದಾನಂದ ಮುಕುಣಿ, ವಿಠ್ಠಲ ತಟ್ರಿ, ರಾಯಪ್ಪ ಗುಬಚಿ, ಮಾಯಪ್ಪ ಹಡಗಲಿ, ದುಂಡಪ್ಪ ಗುಬಚಿ, ಚನಮಲ್ಲ ಹುಚ್ಚೋಡೆಯರ, ಅಣ್ಣಸಾಬ ಮಳಮಳಸಿ, ಸಂಭಾಜಿ ವಾಘಮೋರೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT