ಶನಿವಾರ, ಜುಲೈ 2, 2022
22 °C
ರಾಜ್ಯ ಜೂನಿಯರ್‌, ಸಬ್‌ ಜೂನಿಯರ್‌ ಈಜು

ಹಾಷಿಕಾ, ರಿಧಿಮಾ ದಾಖಲೆ

ಇಮಾಮ್‌ಹುಸೇನ್‌ ಗೂಡುನವರ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಬೆಂಗಳೂರಿನ ಡಾಲ್ಫಿನ್‌ ಈಜು ಕೇಂದ್ರದ ಹಾಷಿಕಾ ರಾಮಚಂದ್ರ ಮತ್ತು ಬೆಂಗಳೂರಿನ ಬಸವನಗುಡಿ ಈಜು ಕೇಂದ್ರದ ರಿಧಿಮಾ ವೀರೇಂದ್ರಕುಮಾರ ಅವರು ಕರ್ನಾಟಕ ರಾಜ್ಯ ಈಜು ಸಂಸ್ಥೆ, ಬೆಳಗಾವಿಯ ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ ಸಹಯೋಗದಲ್ಲಿ ಸುವರ್ಣ ಜೆಎನ್‌ಎಂಸಿ ಈಜುಕೊಳದಲ್ಲಿ ಗುರುವಾರ ನಡೆದ ರಾಜ್ಯ ಜೂನಿಯರ್‌ ಮತ್ತು ಸಬ್‌ ಜೂನಿಯರ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ದಾಖಲೆ ಬರೆದರು.

ಬಾಲಕಿಯರ(ಗುಂಪು–2) 200 ಮೀ. ಫ್ರೀಸ್ಟೈಲ್‌ನಲ್ಲಿ ಹಾಷಿಕಾ(ಕಾಲ 2 ನಿಮಿಷ, 21.51) ಗುರಿ ಮುಟ್ಟಿ, 28 ವರ್ಷಗಳ ಹಿಂದೆ ಸಜಿನಿ ಶೆಟ್ಟಿ ನಿರ್ಮಿಸಿದ್ದ ದಾಖಲೆ(2:22.66) ದಾಖಲೆಯನ್ನು ಮುರಿದರು. ಬಾಲಕಿಯರ (ಗುಂಪು–1) 50 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ರಿಧಿಮಾ(29.77 ಸೆ.) ಗುರಿ ಮುಟ್ಟಿ, ಬೆಳಿಗ್ಗೆ ತಾವೇ ನಿರ್ಮಿಸಿದ್ದ ದಾಖಲೆ(30.10 ಸೆ.) ಮುರಿದರು.

ಫಲಿತಾಂಶ: ಹಾಷಿಕಾ(ಕಾಲ 2 ನಿಮಿಷ, 21.51)-1, ಬಾಲಕಿಯರ ವಿಭಾಗ(ಗುಂಪು–2): 200 ಮೀ. ಫ್ರೀಸ್ಟೈಲ್‌: ತನಿಷಿ ಗುಪ್ತಾ(ಡಾಲ್ಫಿನ್‌ ಕೇಂದ್ರ; 2:29.64ಸೆ.)–2, ತನಿಷಾ ವಿನಯ(2:37:28 ಸೆ.)–3.

ಬಾಲಕಿಯರ ವಿಭಾಗ(ಗುಂಪು–1): 50 ಮೀ. ಬ್ಯಾಕ್‌ಸ್ಟ್ರೋಕ್‌: ರಿಧಿಮಾ(29.77 ಸೆ.)–1 ಶಾಲಿನಿ ದೀಕ್ಷಿತ್(ಡಾಲ್ಫಿನ್‌ ಈಜು ಕೇಂದ್ರ:31.55ಸೆ.)–2, ರಿತು ಭರಮರೆಡ್ಡಿ(ಬಸವನಗುಡಿ ಈಜು ಕೇಂದ್ರ; 32.56 ಸೆ.)–3.

ಬಾಲಕರ ವಿಭಾಗ(ಗುಂಪು–1): 800 ಮೀ. ಫ್ರೀಸ್ಟೈಲ್‌: ಪವನ ಧನಂಜಯ(8:48.57 ಸೆ.)–1, ಅಮೋಘ ವೆಂಕಟೇಶ(ಇಬ್ಬರೂ ಬಸವನಗುಡಿ ಈಜು ಕೇಂದ್ರ; 9:00:06ಸೆ.)–2, ಧೋನಿಶ್‌ ಎನ್‌.(ವಿಜಯನಗರ ಈಜು ಕೇಂದ್ರ; 9:09.31ಸೆ.)–3.

ಬಾಲಕಿಯರ ವಿಭಾಗ(ಗುಂಪು–1): 800 ಮೀ. ಫ್ರೀಸ್ಟೈಲ್‌: ಶಿರೀನ್‌ ಎನ್‌.(9:35.12), ಆದಿತಿ ಮುಲಾಯ್‌(9:51.45)–2, ರಿತಿಕಾ ಬಿ.ಎಂ.(ಮೂವರು ಬಸವನಗುಡಿ ಈಜು ಕೇಂದ್ರ; 10:00.17)–3.

ಬಾಲಕರ ವಿಭಾಗ(ಗುಂಪು–2): 100 ಮೀ. ಬ್ರೆಸ್ಟ್‌ಸ್ಟ್ರೋಕ್‌): ಆರ್‌.ನವನೀತ್‌ ಗೌಡ(ಡಾಲ್ಫಿನ್‌ ಈಜು ಕೇಂದ್ರ; 1:12.34)–1, ದಕ್ಷ ಮಟ್ಟ(ಬಸವನಗುಡಿ ಈಜು ಕೇಂದ್ರ: 1:17.00ಸೆ.)–2, ಡೆನಿಯಲ್‌ ಪಾಲ್‌(ಡಾಲ್ಫಿನ್‌ ಕೇಂದ್ರ; 1:17.03ಸೆ.)–3.

ಬಾಲಕರ ವಿಭಾಗ (ಗುಂಪು–3): 200 ಮೀ. ಫ್ರೀಸ್ಟೈಲ್‌: ಶರಣ ಶ್ರೀಧರ (ಕಾಲ: 2ನಿಮಿಷ 19.08 ಸೆ.)–1, ಜಾಸ್‌ ಸಿಂಗ್‌(ಇಬ್ಬರೂ ಮತ್ಸ್ಯ ಈಜು ಕೇಂದ್ರ;2:29.93ಸೆ.)–2, ಆರವ್‌ ಜೆ. (ಪೂಜಾ ಈಜು ಕೇಂದ್ರ; 2:33.08 ಸೆ.)–3.

ಗುಂಪು–3: ಬಾಲಕಿಯರ 200 ಮೀ. ಫ್ರೀಸ್ಟೈಲ್‌: ಅಲಿಸ್ಸಾ ರೆಗೊ (ಡಾಲ್ಫಿನ್‌ ಕೇಂದ್ರ;2:27.65 ಸೆ.)–1, ತ್ರಿಶಾ ಸಿಂಧು (ಡಿಕೆವಿ ಈಜು ಕೇಂದ್ರ;2:28.53 ಸೆ.)–2, ತನ್ವಿ ಗೌರವ(ವಿಜಯನಗರ ಈಜು ಕೇಂದ್ರ; 2:23.770ಸೆ.)–3.

ಬಾಲಕರ 100 ಮೀ. ಬ್ರೆಸ್ಟ್‌ಸ್ಟ್ರೋಕ್‌(ಗುಂಪು–1): ವಿದಿಥ್‌ ಶಂಕರ(ಡಾಲ್ಫಿನ್‌ ಕೇಂದ್ರ; 1:06.47)–1, ಶುಭಾಂಗ ಕುಬೇರ್‌ (1:09.16 ಸೆ.)–2, ಆದಿತ್‌ ಓಲೆಟಿ(ಇಬ್ಬರೂ ಬಸವನಗುಡಿ ಈಜು ಕೇಂದ್ರ;1:09.59ಸೆ.)–3.

ಮಹಿಳೆಯರ ವಿಭಾಗ (ಗುಂಪು–1): 100 ಮೀ. ಬ್ರೆಸ್ಟ್‌ಸ್ಟ್ರೋಕ್‌: ಸಾನ್ವಿ ರಾವ್‌ (ಗ್ಲೋಬಲ್‌ ಈಜು ಕೇಂದ್ರ; 1:17.28ಸೆ.)–1, ಎಸ್‌.ಲಕ್ಷ್ಯ (ಬಸವನಗುಡಿ ಈಜು ಕೇಂದ್ರ; 1:17.34 ಸೆ.)–2, ಲಿನೇಯ್ಶಾ ಅನಿಲಕುಮಾರ(ಗ್ಲೋಬಲ್‌ ಈಜು ಕೇಂದ್ರ; 1:18.51ಸೆ.)–3.

ಬಾಲಕಿಯರ ವಿಭಾಗ(ಗುಂಪು–2) 100 ಮೀ. ಬ್ರೆಸ್ಟ್‌ಸ್ಟ್ರೋಕ್‌: ಮಾನವಿ ವರ್ಮಾ (ಡಾಲ್ಫಿನ್‌ ಕೇಂದ್ರ; 1:16.39ಸೆ.)–1, ವಿನಿತಾ ನಯನಾ(ಬಸವನಗುಡಿ ಈಜು ಕೇಂದ್ರ; 1:17.48ಸೆ.)–2, ರೈನಾ ಫರ್ನಾಂಡೀಸ್‌(ಡಾಲ್ಫಿನ್‌ ಈಜು ಕೇಂದ್ರ;1:17.50ಸೆ.)–3.

ಬಾಲಕರ ವಿಭಾಗ(ಗುಂಪು–1) 50 ಮೀ. ಬ್ಯಾಕ್‌ಸ್ಟ್ರೋಕ್‌: ಉತ್ಕರ್ಷ್‌ ಪಾಟೀಲ(ಬಸವನಗುಡಿ ಈಜು ಕೇಂದ್ರ; 27.76ಸೆ.)–1, ನಯನ ವಿಘ್ನೇಶ(ನೆಟ್ಟಕಲ್ಲಪ್ಪ ಈಜು ಕೇಂದ್ರ; 28.29 ಸೆ.)–2, ಆಕಾಶ ಮಾಣಿ(ಬಸವನಗುಡಿ ಈಜು ಕೇಂದ್ರ; 28.51ಸೆ.)–3.

ಬಾಲಕರ ವಿಭಾಗ(ಗುಂಪು–2) 50 ಮೀ. ಬ್ಯಾಕ್‌ಸ್ಟ್ರೋಕ್‌: ಇಶಾನ್‌ ಮೆಹ್ರಾ (ಡಾಲ್ಫಿನ್‌ ಈಜು ಕೇಂದ್ರ;29.56ಸೆ.)–1, ಕುಶಾಲ್‌ ಕೆ.(ಬಸವನಗುಡಿ ಈಜು ಕೇಂದ್ರ; 29.82ಸೆ.)–2, ಅಮನ್‌ ಸುಣಗಾರ(ಬೆಳಗಾವಿ ಸ್ವಿಮ್ಮರ್ಸ್‌ ಕ್ಲಬ್‌; 29.88ಸೆ.)–3.

ಬಾಲಕಿಯರ ವಿಭಾಗ(ಗುಂಪು–2) 50 ಮೀ. ಬ್ಯಾಕ್‌ಸ್ಟ್ರೋಕ್‌: ಸಿದ್ಧಿ ಶಾಹ್‌(ಡಾಲ್ಫಿನ್‌ ಈಜು ಕೇಂದ್ರ; 33.13ಸೆ.)–1, ಪ್ರಿಯಾಂಶಿ ಮಿಶ್ರಾ(ಗಫ್ರಾಯ್‌ ಸ್ವಿಮ್ಮಿಂಗ್‌ ಪ್ರೊಗ್ರಾಮ್‌; 33.61ಸೆ.)–2, ನಕ್ಷತ್ರಾ ಗೌತಮ್‌(ಬಸವನಗುಡಿ ಈಜು ಕೇಂದ್ರ; 34.12ಸೆ.)–3.

ಬಾಲಕರ ವಿಭಾಗ(ಗುಂಪು–3) 100 ಮೀ. ಬಟರ್‌ಫ್ಲೈ: ಅರ್ಜುನ ರಾಘವನ್‌(1:16.28ಸೆ.)–1, ಅಥರ್ವ ಪಾಲ್‌ಸಿಂಗ್‌ ರಾಥೋಡ(ಇಬ್ಬರೂ ಡಾಲ್ಫಿನ್‌ ಈಜು ಕೇಂದ್ರ;1:16.69)–2, ಎಸ್‌.ಕ್ರಿಶ್‌(ಬಸವನಗುಡಿ ಈಜು ಕೇಂದ್ರ; 1:17.25ಸೆ.)–3.

ಬಾಲಕಿಯರ ವಿಭಾಗ(ಗುಂಪು–3) 100 ಮೀ. ಬಟರ್‌ಫ್ಲೈ: ಅಲಿಸ್ಸಾ ರೆಗೊ(1:17.81ಸೆ.)–1, ಜನನಿ ವಿ.(1:21.21ಸೆ.)–2, ದ್ವಿಶಾ ಶೆಟ್ಟಿ(ಮೂವರು ಡಾಲ್ಫಿನ್‌ ಈಜು ಕೇಂದ್ರ;1:24.37ಸೆ.)–3.

ಬಾಲಕರ ವಿಭಾಗ(ಗುಂಪು–1) 200 ಮೀ. ಬಟರ್‌ಫ್ಲೈ: ಉತ್ಕರ್ಷ್‌ ಪಾಟೀಲ(ಬಸವನಗುಡಿ ಈಜು ಕೇಂದ್ರ;2:06.58)–1, ಕಾರ್ತಿಕೇಯನ್‌ (ಡಾಲ್ಫಿನ್‌ ಈಜು ಕೇಂದ್ರ;2:08.88)–2, ನಯನ್‌ ವಿಘ್ನೇಶ್ (ನೆಟ್ಟಕಲ್ಲಪ್ಪ ಈಜು ಕೇಂದ್ರ;2:09.34)–3.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು