ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮುದಾಯ ಭವನ ನಿರ್ಮಾಣಕ್ಕೆ ಕ್ರಮ’

Last Updated 3 ಅಕ್ಟೋಬರ್ 2019, 9:34 IST
ಅಕ್ಷರ ಗಾತ್ರ

ಬೆಳಗಾವಿ: ‘ಸಮಾಜದವರ ಸಹಕಾರದಿಂದ ದೇವರ ದಾಸಿಮಯ್ಯ ಕಲ್ಯಾಣ ಮಂಟಪ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ಸಂಕಲ್ಪ ಮಾಡಲಾಗಿದೆ’ ಎಂದು ಜಿಲ್ಲಾ ಹಟಗಾರ ಸಮಾಜದ ಅಧ್ಯಕ್ಷ ಶಿವಪುತ್ರ ಬೋಜಣ್ಣವರ ತಿಳಿಸಿದರು.

ಇಲ್ಲಿ ಈಚೆಗೆ ನಡೆದ ಸಮಾಜದ 4ನೇ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.

‘ಶಿವಾಚಾರ, ನೇಕಾರ ಸಮಾಜದ ಸಂಘಟನೆ ಹಾಗೂ ಉನ್ನತಿಗಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಫೆಬ್ರುವರಿಯಲ್ಲಿ 6ನೇ ಸಮಾವೇಶ ನಡೆಸಿ, ವಧು–ವರರ ಮಾಹಿತಿ ಪುಸ್ತಕ ‘ಸಂಕಲನ’ವನ್ನು ಎಲ್ಲರಿಗೂ ಹಂಚಿದ್ದೇವೆ’ ಎಂದರು.

ಕಾರ್ಯದರ್ಶಿ ಎಂ.ಆರ್. ಪಾಟೀಲ ವಾರ್ಷಿಕ ಲೆಕ್ಕಪತ್ರ ವರದಿ ಮಂಡಿಸಿದರು. ದ್ವಿತೀಯ ಪಿಯು ಹಾಗೂ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ಭೂಮಿಕಾ ಮೋಹನ ಜಾಡಗೌಡ, ಶ್ರೇಯಸ್ ಪ್ರವೀಣ ಭೋಜಣ್ಣವರ, ಖುಷಿ ಟಿ. ಗೊನಬಾಳ, ಜಯೇಶ ಎಸ್. ಉರಮನಟ್ಟಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ಶ್ರೀಕಾಂತ ಎಸ್. ಬಾಡಗಿ, ಹುಬ್ಬಳ್ಳಿಯ ರೈಲ್ವೆ ಸಮಿತಿ ಸದಸ್ಯರಾದ ಡಾ.ಮಹಾದೇವ ಎಸ್. ಇಟ್ನಾಳ, ಬಸವರಾಜ ಬಾಗೋಜಿ ಇದ್ದರು.

ಸದಸ್ಯರಾದ ಮಲಗೌಡ ಪಾಟೀಲ, ಶಂಕರ ಭಾಣಕರ, ಕಲ್ಲಪ್ಪ ಚವನ್ನವರ, ಪ್ರವೀಣ ಭೋಜಣ್ಣವರ, ಮೋಹನ ಜಾಡಗೌಡ, ಡಿ.ಕೆ. ನಿಂಬಾಳ, ಸೋಮಶೇಖರ ಭೋಜ, ವೀರಭದ್ರಪ್ಪ ಬಾಡಗಿ, ಚಂದ್ರಶೇಖರ ಪಾಟೀಲ ಇದ್ದರು.

ಆರ್‌.ಆರ್‌. ಖಾನಾಪುರಿ ನಿರೂಪಿಸಿದರು. ಅಶೋಕ ಅಮಾಶಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT