ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ಮಂದಿಗೆ ಉದ್ಯೋಗದಾತ ದರೆಪ್ಪ, ಸಮಾಜಸೇವೆಯೊಂದಿಗೆ ಉದ್ಯಮದಲ್ಲೂ ಸಕ್ರಿಯ

Last Updated 22 ಮೇ 2019, 19:48 IST
ಅಕ್ಷರ ಗಾತ್ರ

ಅಥಣಿ: ಪಟ್ಟಣದ ನಿವಾಸಿ ದರೆಪ್ಪ ಠಕ್ಕಣ್ಣವರ ಸಮಾಜಸೇವೆಯೊಂದಿಗೆ ಉದ್ಯಮದಲ್ಲೂ ಗುರುತಿಸಿಕೊಂಡಿದ್ದಾರೆ. ಪೇವರ್ಸ್‌ ತಯಾರಿಕೆ ಘಟಕ ಸ್ಥಾಪಿಸಿ, 20 ಮಂದಿಗೆ ಉದ್ಯೋಗ ನೀಡಿ ಗಮನಸೆಳೆದಿದ್ದಾರೆ.

ಹೊರವಲಯದ ಚಮಕೇರಿ ರಸ್ತೆಯಲ್ಲಿ ತಮ್ಮದೇ ಆದ 12 ಎಕರೆ ಜಮೀನಿನಲ್ಲಿ 20 ಗುಂಟೆಯಲ್ಲಿ ಘಟಕ ಸಿದ್ಧಪಡಿಸಿದ್ದಾರೆ. ₹ 20 ಲಕ್ಷ ಹೂಡಿಕೆ ಮಾಡಿ ಉದ್ಯಮಿಯಾಗಿದ್ದಾರೆ. ನಿತ್ಯವು ಇಲ್ಲಿ ಸರಾಸರಿ 10ಸಾವಿರ ಪೇವರ್‌ ಬ್ಲಾಕ್‌ಗಳನ್ನು ತಯಾರಿಸುವ ಸಾಮರ್ಥ್ಯ ಈ ಘಟಕದ್ದಾಗಿದೆ. ಇದಕ್ಕೆ ಬೇಕಾದ ಒಂದು ಯಂತ್ರ ಹಾಗೂ ಇತರ ಸಾಮಗ್ರಿಗಳು ಇವೆ.

ಇತ್ತೀಚಿನ ವರ್ಷಗಳಲ್ಲಿ ಮನೆಗಳ ಆವರಣದಲ್ಲಿ, ರಸ್ತೆಗಳ ಬದಿಯಲ್ಲಿ, ಗಲ್ಲಿಗಳಲ್ಲಿ, ಮೈದಾನಗಳ ಅಂಚಿನಲ್ಲಿ, ಉದ್ಯಾನಗಳಲ್ಲಿ ಪೇವರ್‌ ಬ್ಲಾಕ್‌ ಅಳವಡಿಸುವುದು ಸಾಮಾನ್ಯವಾಗಿ ಹೋಗಿದೆ. ಹೀಗಾಗಿ, ಮಾರುಕಟ್ಟೆಯಲ್ಲಿ ಅವುಗಳಿಗೆ ಬೇಡಿಕೆಯೂ ಇದೆ. ಇದಕ್ಕೆ ತಕ್ಕಂತೆ ಅವರು ಘಟಕ ಆರಂಭಿಸಿದ್ದಾರೆ. ಹಲವರಿಗೆ ನೆರವಾಗಿದ್ದಾರೆ.

ಇವರು ಆರು ವಿಧದ ಪೇವರ್ ಬ್ಲಾಕ್‌ಗಳನ್ನು ತಯಾರಿಸುತ್ತಾರೆ. ಒಂದು ಬ್ರಾಸ್‌ ಅನ್ನು ₹ 4200ಕ್ಕೆ ಮಾರುತ್ತಾರೆ. ಜಿಗ್‌ಜಾಗ್, ಕಾಸ್ಮಿಕ್‌, ಪಾಲ್ಕಾನ್, ಕ್ರಿಸ್‌ ಕ್ರಾಸ್, ಮಾಲ್‌ಸ್ಟೋನ್, ಟಾರಸ್ ಮೊದಲಾದ ವಿಧದ ಪೇವರ್‌ ಬ್ಲಾಕ್‌ಗಳು ಇವರ ಬಳಿ ಲಭ್ಯ ಇವೆ.

ಒಂದು ಬ್ರಾಸ್‌ನಲ್ಲಿ 280 (ಜಿಗ್‌ಜಾಗ್), ಕಾಸ್ಮಿಕ್‌ (180), 225 (ಪಾಲ್ಕಾನ್‌), 152 (ಕ್ರಿಸ್‌ ಕ್ರಾಸ್‌), 150 (ಮಾಲ್‌ಸ್ಟೋನ್) ಹಾಗೂ 152 (ಟಾರಸ್‌) ಬರುತ್ತವೆ.

ಎಸ್ಸೆಸ್ಸೆಲ್ಸಿ ಓದಿರುವ ಅವರು, ದ್ರಾಕ್ಷಿ ಬೆಳೆಯುತ್ತಿದ್ದರು. ನಂತರ, ಗುತ್ತಿಗೆದಾರರಾದರು. ಈಗಲೂ ಪ್ರಗತಿಪರ ಕೃಷಿಕರಾದ ಅವರು ಪ್ರಥಮ ದರ್ಜೆ ಗುತ್ತಿಗೆದಾರರೂ ಹೌದು. ಸ್ಟೋನ್ ಕ್ರಷರ್ ಕೂಡ ಹೊಂದಿದ್ದಾರೆ. ಇವುಗಳಿಂದಲೂ ಹಲವರಿಗೆ ಕೆಲಸ ಕೊಟ್ಟಿದ್ದಾರೆ. ತಾವೂ ಬೆಳೆಯುವುದರೊಂದಿಗೆ, ಸ್ಥಳೀಯರಿಗೂ ನೆರವಾಗಿದ್ದಾರೆ.

‘ಪೇವರ್‌ ಬ್ಲಾಕ್‌ ತಯಾರಿಕಾ ಉದ್ಯಮವನ್ನು ನಾನು ಯಾವುದೇ ಲಾಭಕ್ಕಾಗಿ ಆರಂಭಿಸಿಲ್ಲ. ನಾನು ಮಾಡುತ್ತಿರುವ ಹಲವು ಉದ್ಯಮಗಳಲ್ಲಿ ಇದೂ ಒಂದು. ಹೆಚ್ಚಿನ ಜನರಿಗೆ ಉದ್ಯೋಗ ನೀಡಬೇಕು ಎಂಬ ಉದ್ದೇಶದಿಂದ ಘಟಕ ತೆರದಿದ್ದೇನೆ‌. ಗುಣಮಟ್ಟ ಕಾಪಾಡಿಕೊಂಡು ಹೋಗುತ್ತಿದ್ದೇನೆ. ವಿವಿಧೆಡೆಯಿಂದ ಬಂದು ಪೇವರ್‌ ಬ್ಲಾಕ್‌ಗಳನ್ನು ಖರೀದಿಸುತ್ತಾರೆ’ ಎಂದು ‘ಪ‍್ರಜಾವಾಣಿ’ಗೆ ತಿಳಿಸಿದರು.

ಹಲವು ವರ್ಷಗಳಿಂದಲೂ ಬೇಸಿಗೆ ಸಂದರ್ಭದಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸುವ ಮೂಲಕ ಜನರಿಗೆ ನೆರವಾಗುತ್ತಿದ್ದಾರೆ. ಈ ಬಾರಿಯೂ ಮಾರ್ಚ್‌ನಿಂದಲೂ ಟ್ಯಾಂಕರ್‌ ನೀರು ಸರಬರಾಜು ಮಾಡುತ್ತಿದ್ದಾರೆ. ಸಂಪರ್ಕಕ್ಕೆ: 9902579939.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT