ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾಟದಲ್ಲಿ ಖುಷಿಪಟ್ಟರು

Last Updated 8 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನೀರಿನಲ್ಲಿ ಆಡಿದೆ
ನನಗೆ ರಜೆಯಲ್ಲಿ ಶಿವನಸಮುದ್ರಕ್ಕೆ ಕರೆದುಕೊಂಡು ಹೋಗಿದ್ರು. ಅಪ್ಪ, ಅಮ್ಮ, ಅತ್ತೆ, ಅಜ್ಜಿ, ಅಜ್ಜ ಎಲ್ಲರೂ ಜೊತೆಯಾಗಿ ಹೋಗಿದ್ವಿ. ಬೆಟ್ಟಗಳನ್ನೆಲ್ಲ ನೋಡಿದೆ. ದಿನಾ ಸ್ಕೂಲ್‌ಗೆ ಹೋಗಿ ಬೇಜಾರಾಗಿರುತ್ತಲ್ಲ ಹೀಗೆ ಟ್ರಿಪ್‌ಗೆ ಹೋಗಿದ್ದು ಖುಷಿ ಆಯಿತು. ನನ್ನ ಥರವೇ ಅಲ್ಲಿ ಇನ್ನೂ ಎಷ್ಟೋ ಮಕ್ಕಳು ಬಂದಿದ್ರು. ನನಗೆ ನೀರೆಂದರೆ ತುಂಬಾ ಇಷ್ಟ. ಅಲ್ಲಿ ನೀರಿನ ಆಟಗಳು ಮಜವಾಗಿದ್ದವು. ನಾನು ಕೇಳಿದ ಐಸ್‌ಕ್ರೀಂ ಕೂಡ ಕೊಡಿಸಿದರು. ಯಾವಾಗಲೂ ಹೀಗೇ ಹೋಗಬೇಕು ಅನಿಸ್ತು.
–ರಿಷಿಕಾ ಆರ್‌, ಆಡೆನ್‌ ಶಾಲೆ, ಕತ್ರಿಗುಪ್ಪೆ

*


ಪ್ರಾಣಿಗಳನ್ನು ಕಣ್ತುಂಬಿಕೊಂಡೆ
ನನಗೆ ರಜೆ ಬಂದರೆ ಊರುರು ಸುತ್ತಬಹುದು ಎಂದು ತುಂಬಾ ಖುಷಿ. ಈ ಸಲ ನನಗೆ ಬನ್ನೇರುಘಟ್ಟ, ಇಸ್ಕಾನ್‌ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ರು. ನನಗೆ ಪ್ರಾಣಿಗಳೆಂದರೆ ತುಂಬಾ ಇಷ್ಟ. ಅಲ್ಲಿ ಸಾಕಷ್ಟು ಪ್ರಾಣಿಗಳಿದ್ದವು. ಸಫಾರಿಗೂ ಹೋಗಿದ್ದೆ. ಹುಲಿ, ಸಿಂಹ, ಆನೆ ಎಲ್ಲ ನೋಡಿದೆ. ಹಾವುಗಳೆಂದರೆ ನನಗೆ ತುಂಬಾ ಭಯ. ಅಲ್ಲಿ ದಪ್ಪ, ದಪ್ಪದ ಹಾವುಗಳಿತ್ತು. ನನ್ನ ಅಕ್ಕ ಎಲ್ಲಾ ಪ್ರಾಣಿಗಳ ಬಗ್ಗೆ ಪರಿಚಯ ಮಾಡಿದರು. ಸಂಜೆ ಇಸ್ಕಾನ್‌ ಹೋಗಿದ್ದೆ. ಅಲ್ಲಿ ಪೊಂಗಲ್‌ ತಿಂದೆ. ಗೊಂಬೆಯನ್ನು ಕೊಡಿಸಿದರು. ಇಡಿ ದಿನ ಖುಷಿ ಖುಷಿಯಾಗಿ ಕಳೆದೆ.
–ಭೂಮಿಕಾ, ರಾಯಲ್‌ ಸ್ಕೂಲ್‌, ಜೆ.ಪಿ. ನಗರ

*


ಬೃಂದಾವನ ಪಾರ್ಕ್ ಇಷ್ಟವಾಯಿತು
ಪರೀಕ್ಷೆ ಮುಗಿದ ತಕ್ಷಣ ಪಿಕ್‌ನಿಕ್‌ ಕರೆದುಕೊಂಡು ಹೋಗ್ತೇವೆ ಅಂತ ಮನೆಯಲ್ಲಿ ಹೇಳಿದ್ರು. ನನಗೆ ನೀರಿನಲ್ಲಿ ಆಟವಾಡೊ ಜಾಗಕ್ಕೆ ಕರೆದುಕೊಂಡು ಹೋಗಲು ಹೇಳಿದ್ದೆ. ರಜೆ ಬಂದ ತಕ್ಷಣ ಫನ್‌ವರ್ಡ್‌ಗೆ ಕರೆದುಕೊಂಡು ಹೋದ್ರು. ರೋಲರ್‌ ಕೋಸ್ಟರ್‌, ಯಾಹೂ ಸ್ಲೈಡ್‌, ಕಿಡ್ಡಿಸ್‌ ಬಂಪರ್‌ ಬೋಟ್‌ ಇಷ್ಟವಾಯಿತು. ಕೆಲವೊಂದು ಆಟಗಳು ತುಂಬಾ ಬೋರ್‌ ಎನಿಸಿತು. ಸಂಜೆ ಬನ್ನೇರುಘಟ್ಟಕ್ಕೂ ಹೋದೆವು. ಪ್ರಾಣಿಗಳನ್ನು ನೋಡಿ ಖುಷಿ ಆಯಿತು. ಆಮೇಲೆ ಜಯನಗರದ ಬೃಂದಾವನ ಪಾರ್ಕ್‌ಗೆ ಕರೆದುಕೊಂಡು ಹೋದ್ರು. ಅದು ನನಗೆ ತುಂಬಾ ಇಷ್ಟವಾಯಿತು. ಅಲ್ಲಿ ಮಕ್ಕಳಿಗೆ ಆಡುವುದಕ್ಕೆ ಮಣ್ಣನ್ನು ಹಾಕಿರುತ್ತಾರೆ. ಅದರಲ್ಲಿ ಚೆನ್ನಾಗಿ ಆಟವಾಡಿದೆ.
–ತನು, ಆ್ಯನ್ಸ್‌ ಇಂಟರ್‌ನ್ಯಾಷನಲ್‌ ಶಾಲೆ, ಆರ್‌. ಟಿ. ನಗರ

*


ಮೈಸೂರು, ಮಧುರೈಗೆ ಹೋಗಿದ್ದೆ
ತಮಿಳುನಾಡಿನ ಮಧುರೈಗೆ ಹೋಗಿದ್ವಿ. ತುಂಬಾ ದೊಡ್ಡ ದೇವಸ್ಥಾನವದು ನೋಡಿ ಖುಷಿಯಾಯಿತು. ಒಂದು ದಿನಕ್ಕೆ ಹೋಗಿ ಬಂದಕ್ಕೆ ಸ್ವಲ್ಪ ಸುಸ್ತಾಯಿತು. ಅಪ್ಪ, ಅಮ್ಮ, ಅಜ್ಜಿ, ತಮ್ಮ ಎಲ್ಲರೂ ಮೈಸೂರಿಗೆ ಹೋಗಿದ್ವಿ. ಅಲ್ಲಿ ಚಾಮುಂಡಿ ಬೆಟ್ಟ, ರಂಗನತಿಟ್ಟು, ಅರಮನೆ, ಮೃಗಾಲಯಕ್ಕೆ ಹೋದ್ವಿ. ಸಂಜೆ ಕೆಆರ್‌ಎಸ್‌ನಲ್ಲಿ ಬಣ್ಣಬಣ್ಣದ ನೀರಿನ ಕಾರಂಜಿಯನ್ನು ನೋಡಿ ಖುಷಿಯಾಯಿತು. ಬೇರೆ ಊರಿಗೆ ಹೋದಾಗ ಶಾಪಿಂಗ್‌ ಮಾಡೋದು ನನಗೆ ಇಷ್ಟ.
–ಲಿಷಾ

*


ಸುತ್ತಾಟದ ಜೊತೆ ಶಾಪಿಂಗ್‌ ಖುಷಿ
ನಾನು ಈಗ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದೇನೆ. ಅದಕ್ಕೆ ತುಂಬಾ ಪಿಕ್‌ನಿಕ್‌ ಮಾಡಕ್ಕೆ ಆಗಿಲ್ಲ. ಮೊನ್ನೆ ಬೆಳಿಗ್ಗೆ 5 ಗಂಟೆಗೆ ಮನೆಯಿಂದ ಪಿಕ್‌ನಿಕ್‌ಗೆಂದು ಹೊರಟೆವು. ತಲಕಾಡು, ಮಹದೇಶ್ವರ ಬೆಟ್ಟ, ಶಿಂಷಾಕ್ಕೆಲ್ಲ ಹೋಗಿದ್ವಿ. ಅಲ್ಲಿ ವಾಟರ್‌ ಫಾಲ್ಸ್‌ನಲ್ಲಿ ಆಡಿದ್ದು ನನಗೆ ಖುಷಿ ಆಯಿತು. ಕನ್ನಡಕ, ಪರ್ಸ್‌, ಟೋಪಿ, ಬಳೆಗಳನ್ನೆಲ್ಲ ತೆಗೆದುಕೊಂಡೆ. ಮನೆಗೆ ರಾತ್ರಿ ಬಂದೆವು. ಇನ್ನೇರಡು ದಿನಗಳಲ್ಲಿ ಶೂಟಿಂಗ್‌ ಮುಗಿಯುತ್ತದೆ. ಮತ್ತೇ ಬೇರೆ ಕಡೆ ಕರೆದುಕೊಂಡು ಹೋಗುತ್ತೇನೆ ಎಂದು ಅಮ್ಮ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT