ಚಿಕ್ಕೋಡಿ: ಭಾರಿ ಮಳೆಯಿಂದಾಗಿ ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕಿ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಭಾರಿ ಮಳೆಯಿಂದಾಗಿ ಹೊರವಲಯದ ರಾಮನಗರ ಬಳಿ ರಭಸವಾಗಿ ಹರಿಯುತ್ತಿರುವ ಹಳ್ಳದಲ್ಲಿ ಬಾಲಕಿ ಕೊಚ್ಚಿಕೊಂಡು ಹೋದ ಘಟನೆ ಶುಕ್ರವಾರ ನಡೆದಿದೆ.
‘ಬಾಲಕಿಯನ್ನು ರಾಮನಗರದ ನಿವಾಸಿ ಕಿರಣ ಶಾನೂರ ವಿಭೂತಿ (12) ಎಂದು ಗುರುತಿಸಲಾಗಿದೆ. ಚಿಕ್ಕೋಡಿಗೆ ಹೋಗಿ ಬರುತ್ತಿದ್ದ ಮೂವರು ಸಹೋದರಿಯರು ಹಳ್ಳ ದಾಟಿಕೊಂಡು ರಾಮನಗರಕ್ಕೆ ತೆರಳುತ್ತಿದ್ದಾಗ ನೀರಿನ ರಭಸ ಹೆಚ್ಚಾದ್ದರಿಂದ ಕೊಚ್ಚಿಕೊಂಡು ಹೋಗಿದ್ದರು. ಗಮನಿಸಿದ ಸ್ಥಳೀಯರು ಇಬ್ಬರನ್ನು ರಕ್ಷಿಸಿದ್ದಾರೆ. ಕಿರಣ ಕೊಚ್ಚಿ ಹೋಗಿದ್ದಾಳೆ’ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ಕೈಗೊಂಡಿದ್ದಾರೆ. ಸಿಪಿಐ ಆರ್.ಆರ್. ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.