ಚಿಕ್ಕೋಡಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದಿದೆ. ಹೀಗಾಗಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ರಾಜಾಪೂರೆ ಬ್ಯಾರೇಜಿನಿಂದ ಕೃಷ್ಣಾ ನದಿಗೆ 89,833 ಕ್ಯುಸೆಕ್ ನಷ್ಟು ಹೊರ ಹರಿವು ಇದ್ದು, ಕಲ್ಲೋಳ ಬಳಿಯಲ್ಲಿ ಕೃಷ್ಣಾ ಸಂಗಮ ಸ್ಥಳದಲ್ಲಿ ದೂಧಗಂಗಾ ನದಿಗೆ 23,930 ಕ್ಯುಸೆಕ್ ಹೊರ ಹರಿವು ಇದೆ. ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ-ಯಡೂರ ಬ್ಯಾರೇಜ್ ಬಳಿಯಲ್ಲಿ ಕೃಷ್ಣಾ ನದಿಗೆ 1,13,763 ಕ್ಯುಸೆಕ್ ನೀರು ಹೊರ ಹರಿವು ಇದೆ. ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಹಿಪ್ಪರಗಿ ಬ್ಯಾರೇಜ್ ನಲ್ಲಿ ಕೃಷ್ಣಾ ನದಿಗೆ 93235 ಕ್ಯುಸೆಕ್ ಒಳ ಹರಿವು, 92485 ಕ್ಯುಸೆಕ್ ಹೊರ ಹರಿವು ಇದೆ.