ಭಾನುವಾರ, ಆಗಸ್ಟ್ 14, 2022
28 °C

ಬಡ ಜನರಿಗೆ ‘ಧರ್ಮವಾಹಿನಿ’ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಗರಗೋಳ (ಸವದತ್ತಿ ತಾ): ‘ಕೊರೊನಾ ಸೋಂಕಿನಿಂದ ಬಡ ಕುಟುಂಬಗಳು ಜೀವನ ನಿರ್ವಹಣೆಗೆ ಪರಿತಪಿಸುತ್ತಿವೆ. ಅವರಿಗೆ ತಕ್ಕಮಟ್ಟಿಗಾದರೂ ನೆರವಾಗಲು ಶ್ರಮಿಸುತ್ತಿದ್ದೇವೆ’ ಎಂದು ಗೋಕಾಕ ತಾಲ್ಲೂಕು ಕುಂದರಗಿಯ ಅಡವಿ ಸಿದ್ದೇಶ್ವರ ಮಠದ ಅಮರಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದ ಕುಷ್ಠ ರೋಗಿಗಳ ಕಾಲೊನಿಯಲ್ಲಿ ಅಡವಿಸಿದ್ದೇಶ್ವರ ಧರ್ಮವಾಹಿನಿ ವತಿಯಿಂದ ಶುಕ್ರವಾರ ಮುನವಳ್ಳಿಯ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಅವರ 47ನೇ ಹುಟ್ಟುಹಬ್ಬ ಅಂಗವಾಗಿ ಕುಂದರಗಿಯ ಅಮರಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ದಿನಸಿ ಹಾಗೂ ಆಹಾರ ಕಿಟ್, ಹಾಸಿಗೆ, ಹೊದಿಕೆ, ಬಟ್ಟೆಗಳು ಹಾಗೂ ನೀರಿನ ಬಾಟಲಿಗಳನ್ನು ವಿತರಿಸಿ ಮಾತನಾಡಿದರು.

‘ಲಾಕ್‌ಡೌನ್‌ದಿಂದ ಸಂಕಷ್ಟದಲ್ಲಿರುವ ಬಡ ಕುಟುಂಬಗಳು ಸೇರಿದಂತೆ ನಿರ್ಗತಿಕರನ್ನು ಗುರುತಿಸಿ ಅಡವಿಸಿದ್ದೇಶ್ವರ ಧರ್ಮವಾಹಿನಿಯಿಂದ ಸೇವೆ ಮಾಡಲಾಗುತ್ತಿದೆ’ ಎಂದರು.

ಕಲಾವಿದ ಸಂಜು ಬಸಯ್ಯ, ಪ್ರಜಾರಿ ಗೋವಿಂದ ಚುಳಕಿ, ಮಹೇಂದ್ರ ಪತ್ತಾರ, ರಾಜು ದಾಸಗೋಳ, ವಿನೋದ ಅಂಕಲಗಿ, ವಿಜಯ ಚರಲಿಂಗಮಠ, ಪ್ರಜ್ವಲ್ ಅಷ್ಟಗಿಮಠ, ಬಿ.ಬಿ. ಹುಲಿಗೊಪ್ಪ, ಶ್ರೀಶೈಲ ಹಿರೇಮಠ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು