ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮಣ ಸವದಿ ನೆರವು: 4 ಸಾವಿರ ಕ್ವಿಂಟಲ್‌ ಜೋಳ, ಗೋಧಿ ವಿತರಣೆ

Last Updated 21 ಏಪ್ರಿಲ್ 2020, 10:31 IST
ಅಕ್ಷರ ಗಾತ್ರ

ಅಥಣಿ: ಲಾಕ್‌ಡೌನ್‌ನಿಂದ ಕಂಗಾಲಾಗಿರುವ ಬಡ ಕುಟುಂಬಗಳಿಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಸತ್ಯಸಂಗಮ್ ಗ್ರಾಮ ವಿಕಾಸ ಪ್ರತಿಷ್ಠಾನದದಿಂದ ಇಲ್ಲಿನ 23 ವಾರ್ಡ್‌ಗಳಲ್ಲಿ 25ಸಾವಿರ ಕುಟುಂಬಗಳಿಗೆ 4ಸಾವಿರ ಕ್ವಿಂಟಲ್ ಆಹಾರ ಧಾನ್ಯವನ್ನು (ಜೋಳ ಹಾಗೂ ಗೋಧಿ) ವಿತರಿಸಲಾಗಿದೆ.

ಬಿಜೆಪಿ ಯುವ ಮೋರ್ಚಾ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಚಿದಾನಂದ ಸವದಿ ಪ್ರತಿ ಕುಟುಂಬಕ್ಕೆ ತಲಾ 5 ಕೆ.ಜಿ. ಗೋಧಿ ಮತ್ತು ಜೋಳ ವಿತರಿಸುತ್ತಿದ್ದಾರೆ. ಪ್ರತಿಷ್ಠಾನದ ಶಿವಕುಮಾರ ಸವದಿ, ಶಿವಾನಂದ ಸವದಿ, ಸುಮಿತ್ ಸವದಿ, ಸಂತೋಷ ಸಾವಡಕರ, ಮಹಾಂತೇಶ ಠಕ್ಕಣ್ಣವರ, ಸುಶೀಲಕುಮಾರ ಪತ್ತಾರ, ಎ.ಎಂ. ಖೋಬ್ರಿ, ಪಂಚಯ್ಯ ಅಳ್ಳಿಮಟ್ಟಿ, ಬಾಹುಬಲಿ ಕಡೋಲಿ, ವಿಕಾಸ ತಾಂಬಟ ಕೈಜೋಡಿಸಿದ್ದಾರೆ.

‘ಲಾಕ್‌ಡೌನ್‌ನಿಂದ ಕ್ಷೇತ್ರದ ಜನರು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ನೆರವಾಗುತ್ತಿದ್ದೇನೆ. ಬಡವರು, ಕೃಷಿ ಕೂಲಿಕಾರರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಪ್ರಯತ್ನ ಮಾಡಿದ್ದೇವೆ’ ಎಂದು ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT