ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಸಿಯು: ಹಿಂದಿ ಪುಸ್ತಕಗಳ ಬಿಡುಗಡೆ

Last Updated 26 ಜುಲೈ 2021, 14:25 IST
ಅಕ್ಷರ ಗಾತ್ರ

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಯುಜಿಸಿ ಮಾರ್ಗಸೂಚಿ ಪ್ರಕಾರ ಅಭ್ಯಾಸಕ್ಕಾಗಿ ಡಾ.ರಾಜೇಂದ್ರ ಪೋವಾರ ಅವರು ಸಂಪಾದಿಸಿದ ಹಿಂದಿ ವಿಷಯದ 4 ಪಠ್ಯಪುಸ್ತಕಗಳನ್ನು ಸೋಮವಾರ ಬಿಡುಗಡೆ ಮಾಡಲಾಯಿತು.

ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಮತ್ತು ಕುಲಸಚಿವ ಪ್ರೊ.ಬಸವರಾಜ ಪದ್ಮಶಾಲಿ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ, ‘ರಾಜೇಂದ್ರ ಅವರು ಹಿಂದಿ ಅಭ್ಯಾಸ ಮಂಡಳದ ಸದಸ್ಯರಾಗಿದ್ದು, ಪಠ್ಯಕ್ರಮವನ್ನು ಇತರ ಪ್ರಾಧ್ಯಾಪಕರ ಸಹಾಯದಿಂದ ಸಮಯಕ್ಕೆ ಸರಿಯಾಗಿ ಸಿದ್ಧಪಡಿಸಿದ್ದಾರೆ’ ಎಂದು ಅಭಿನಂದಿಸಿದರು.

ಅಧ್ಯಯನ ಮಂಡಳಿಯ ಅಧ್ಯಕ್ಷ ಡಾ.ಚಂದ್ರಕಾಂತ ವಾಘಮಾರೆ, ವಿಶ್ವವಿದ್ಯಾಲಯದ ಹಿಂದಿ ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಮತ್ತು ಸಹಾಯಕ ಸಂಪಾದಕ ಶಂಕರಮೂರ್ತಿ ಕೆ.ಎನ್., ಕಾರ್ಯದರ್ಶಿ ಡಾ.ಡಿ.ಎಂ. ಮುಲ್ಲಾ, ಡಾ.ಅಮಿತ ಚಿಂಗಳಿ ಮತ್ತು ಡಾ.ಮಹಾದೇವ ಸಂಕಪಾಳ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT