ಹಿರೇಬಾಗೇವಾಡಿ: ಇಲ್ಲಿನ ಚಾವಡಿ ಕೂಟಿನಲ್ಲಿ ಚರಂಡಿ ನೀರು ರಸ್ತೆಯ ಮೇಲೆ ಹರಿದು ಬಂದು ಸಾರ್ವಜನಿಕರಿಗೆ ಹಾಗೂ ಸಂತೆ ವ್ಯಾಪಾರಿಗಳಿಗೆ ತೊಂದರೆಯುಂಟಾಗುತ್ತಿದ್ದು ಸಂಬಂಧಿತರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಂಗಳವಾರ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಐದಾರು ದಿನಗಳಿಂದ ವಿವಿಧ ಬೀದಿಗಳ ತ್ಯಾಜ ನೀರು ಚರಂಡಿ ಮೂಲಕ ಸರಿಯಾಗಿ ಹೋಗದೇ ರಸ್ತೆಯ ಮೇಲೆ ಹರಿದು ಕೆಟ್ಟ ವಾಸನೆ ಬರುತ್ತಿದೆ. ಅದರಲ್ಲಿನ ತ್ಯಾಜ್ಯ, ಪ್ಲಾಸ್ಟಿಕ್ ಬಾಟಲ್, ಕೊಳಕು ಎಲ್ಲ ಹರಿದು ಬರುತ್ತಿದೆ. ಚಾವಡಿ ಕೂಟ ಗ್ರಾಮದ ಪ್ರಮುಖ ಸ್ಥಳವಾಗಿದ್ದು ಇಲ್ಲಿ ಪ್ರತಿ ಮಂಗಳವಾರಕ್ಕೊಮ್ಮೆ ಜರುಗುವ ಸಂತೆಗೆ ಸುತ್ತಲಿನ ಹತ್ತಾರು ಹಳ್ಳಿಗಳಿಂದ ಸಾಕಷ್ಟು ಜನರು ವ್ಯಾಪಾರ ವಹಿವಾಟಿಗೆ ಬರುತ್ತಾರೆ. ಡೆಂಗಿ, ಮಲೇರಿಯಾದಂತಹ ರೋಗ ಹರಡುವ ಭೀತಿಯಲ್ಲಿ ಜನರಿದ್ದಾರೆ. ಸಂಬಂಧ ಪಟ್ಟ ಅಧಿಕಾರಿಗಳು ಚರಂಡಿಗಳನ್ನು ಶುಚಿಗೊಳಿಸಿ ನೀರು ಹರಿಯಲು ಸರಿಯಾದ ವ್ಯವಸ್ಥೆ ಮಾಡಬೇಕಿದೆ.

ಬಿ.ಎಸ್.ಗಾಣಗಿ, ಮಹಾಂತೇಶ ಈಳಿಗೇರ, ಶಿವಾನಂದ ಸೋನಪ್ಪನವರ, ಯಾಸಿನ ಬಾಗವಾನ, ಯಲ್ಲಪ್ಪ ಸುಣಗಾರ, ಶಿವಾನಂದ ತೋಟಗಿ, ಸ್ಥಳೀಯರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-21-2134244466

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.