ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಚರಿ: ಭಾರತದ ಜೋಡಿಗೆ ಕಂಚು

Last Updated 28 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಶಾಂಘೈ, ಚೀನಾ: ಇಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್‌ನ ಕಾಂಪೌಂಡ್‌ ವಿಭಾಗದ ಮಿಶ್ರ ಡಬಲ್ಸ್‌ ಸ್ಪರ್ಧೆಯಲ್ಲಿ ಭಾರತದ ಅಭಿಷೇಕ್‌ ವರ್ಮಾ ಹಾಗೂ ಜ್ಯೋತಿ ಸುರೇಖಾ ವೆನ್ನಮ್‌ ಜೋಡಿಯು ಕಂಚಿನ ಪದಕ ಜಯಿಸಿದೆ.

ಶನಿವಾರ ನಡೆದ ಪಂದ್ಯದಲ್ಲಿ ಟರ್ಕಿಯ ಯೆಸಿಮ್‌ ಬೊಸ್ತಾನ್ ಹಾಗೂ ಡೆಮಿರ್‌ ಎಲ್ಮಾಗಾಕ್ಲಿ ಅವರನ್ನು ಭಾರತದ ಜೋಡಿಯು 154–148ರಲ್ಲಿ ಮಣಿಸಿತು.

ಭಾರತದ ಜೋಡಿಯು ಪಂದ್ಯದ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ಎದುರಾಳಿ ತಂಡದ ಮೇಲೆ ಒತ್ತಡ ಹೆಚ್ಚಿಸಿತು. ನಂತರ ಸಮಬಲ ಹೋರಾಟ ಮುಂದುವರಿದರೂ, ಭಾರತದ ಆಟಗಾರರು ಮೇಲುಗೈ ಸಾಧಿಸಿ ಕಂಚು ಗೆದ್ದರು.

ಪುರುಷರು ಹಾಗೂ ಮಹಿಳೆಯರ ಕಾಂಪೌಂಡ್‌ ವಿಭಾಗದ ತಂಡ ಸ್ಪರ್ಧೆಯಲ್ಲಿ ಭಾರತದ ಬಿಲ್ಲುಗಾರರು ನಿರಾಸೆಗೊಂಡರು. ಸನ್ನೆ ಡೆ ಲ್ಯಾಟ್‌, ಜೂಡಿ ವರ್ಮಿಲೆನ್‌ ಹಾಗೂ ಮಾರ್ಟಿನ್‌ ಕೌವೆನ್‌ಬರ್ಗ್‌ ಅವರಿದ್ದ ನೆದರ್ಲೆಂಡ್‌ನ ತಂಡವು ಭಾರತದ ಜ್ಯೋತಿ, ಮಧುಮಿತಾ ಕುಮಾರಿ ಹಾಗೂ ಮಸ್ಕನ್‌ ಕಿರಾರ್‌ ಅವರ ತಂಡವನ್ನು 223–221ರಿಂದ ಮಣಿಸಿ ಕಂಚಿನ ಪದಕದ ಸಾಧನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT