ಹುಕ್ಕೇರಿ: ತಾಲ್ಲೂಕಿನ ಹಿಡಕಲ್ ಡ್ಯಾಂ ಬಳಿಯ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆಗೆ 2025–26ನೇ ಸಾಲಿಗೆ ಕಬ್ಬು ಪೂರೈಸಿದ ಸದಸ್ಯ ರೈತರಿಗೆ ‘ಪ್ರತಿ ಟನ್ ಕಬ್ಬಿಗೆ ಅರ್ಧ ಕೆಜಿಯಂತೆ’ 50 ಕೆ.ಜಿ ಮಿತಿಗೊಳಪಟ್ಟು ಪ್ರತಿ ಕೆ.ಜಿ ಸಕ್ಕರೆಗೆ ₹ 20ರ ದರದಲ್ಲಿ ಹಾಗೂ ಸದಸ್ಯರಲ್ಲದ ರೈತರಿಗೆ ‘ಪ್ರತಿ ಟನ್ ಕಬ್ಬಿಗೆ ಅರ್ಧ ಕೆಜಿಯಂತೆ’ ₹ 50 ಕೆ.ಜಿ ಮಿತಿಗೊಳಪಟ್ಟು ಪ್ರತಿ ಕೆ.ಜಿ ಸಕ್ಕರೆಗೆ ₹ 25ರ ದರದಲ್ಲಿ ಸಕ್ಕರೆ ವಿತರಣೆ ಮಾಡಲಿದೆ.

ಕಾರ್ಖಾನೆಯ ಕಾರ್ಯಕ್ಷೇತ್ರದಲ್ಲಿ ಬರುವ ಹುಕ್ಕೇರಿ, ಗೋಕಾಕ, ಚಿಕ್ಕೋಡಿ, ಬೆಳಗಾವಿ ತಾಲ್ಲೂಕಿನವರು ಕಾರ್ಖಾನೆಗೆ ₹ 10 ಸಾವಿರ ಷೇರು ಹಣ ತುಂಬಿದ ‘ಅ’ ವರ್ಗದ ಸದಸ್ಯರಿಗೆ 50 ಕೆ.ಜಿ ಸಕ್ಕರೆಯನ್ನು ಮತ್ತು ₹ 5 ಸಾವಿರ ಷೇರು ಹಣ ತುಂಬಿದ ‘ಬ’ವರ್ಗದ ಸದಸ್ಯರಿಗೆ 25 ಕೆ.ಜಿ.ಸಕ್ಕರೆಯನ್ನು ಪ್ರತಿ ಕೆ.ಜಿಗೆ ₹ 20 ದರದಲ್ಲಿ ಏ.10 ರಿಂದ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ್ ತಿಳಿಸಿದ್ದಾರೆ.

ಸದಸ್ಯರು ಮತ್ತು ರೈತರು ನಿಗದಿತ ಅವಧಿದಲ್ಲಿ ಸಕ್ಕರೆ ಪಡೆಯಬೇಕು. ಷೇರು ಬಾಕಿ ಉಳಿಸಿಕೊಂಡವರು ಷೇರು ಹಣ ತುಂಬಿ ಸಕ್ಕರೆ ಪಡೆಯುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-21-1566467051

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.