ಸೋಮವಾರ, ಅಕ್ಟೋಬರ್ 21, 2019
24 °C

ಮನೆ ಹಾನಿ: ಸಂತ್ರಸ್ತರ ಬ್ಯಾಂಕ್‌ ಖಾತೆಗಳಿಗೆ ₹ 115 ಕೋಟಿ ಜಮಾ

Published:
Updated:

ಬೆಳಗಾವಿ: ‘ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಮನೆ ಕಳೆದುಕೊಂಡಿದ್ದ 34,000 ಜನರ ಖಾತೆಗೆ ಇದುವರೆಗೆ ₹ 115 ಕೋಟಿ ಪರಿಹಾರ ವಿತರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಸ್‌.ಬಿ. ಬೊಮ್ಮನಹಳ್ಳಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮನೆ ಕಳೆದುಕೊಂಡ ಸಂತ್ರಸ್ತರ ಪಟ್ಟಿಯನ್ನು ರಾಜೀವ್‌ ಗಾಂಧಿ ವಸತಿ ನಿಗಮದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದೇವೆ. ಇದರ ಪ್ರಕಾರ, ಪರಿಹಾರ ವಿತರಿಸಲಾಗಿದೆ. ತಾತ್ಕಾಲಿಕ ಶೆಡ್‌ಗಳ ನಿರ್ಮಾಣಕ್ಕಾಗಿ ₹ 5.07 ಕೋಟಿ ಹಾಗೂ ಬಾಡಿಗೆಗಾಗಿ ₹ 1.05 ಕೋಟಿ ನೀಡಲಾಗಿದೆ’ ಎಂದು ಹೇಳಿದರು.

‘ಇದುವರೆಗೆ ಜಿಲ್ಲೆಯಲ್ಲಿ ₹ 11,000 ಕೋಟಿ ಆಸ್ತಿ– ಪಾಸ್ತಿ ನಷ್ಟ ಉಂಟಾಗಿದೆ. 2.21 ಲಕ್ಷ ಹೆಕ್ಟೇರ್‌ ಪ್ರದೇಶದ ಬೆಳೆ ನಷ್ಟ ಉಂಟಾಗಿದೆ. ಎನ್‌ಡಿಆರ್‌ಎಫ್‌ ಮಾನದಂಡದ ಪ್ರಕಾರ, ಬೆಳೆ ಪರಿಹಾರವನ್ನು ಸಂತ್ರಸ್ತರ ಖಾತೆಗೆ ಸದ್ಯದಲ್ಲಿಯೇ ವಿತರಿಸಲಾಗುವುದು’ ಎಂದರು.

Post Comments (+)