ಎಂ.ಕೆ.ಹುಬ್ಬಳ್ಳಿ: ಪಟ್ಟಣದಲ್ಲಿ ಬುಧವಾರ ಸಂಜೆ ಅರ್ಧ ಗಂಟೆ ಸುರಿದ ಭಾರಿ ಗಾಳಿ ಆಲಿಕಲ್ಲು ಮಳೆಗೆ ಅಲ್ಲಲ್ಲಿ ಮರಗಳು ಧರೆಗುರುಳಿದ್ದು, ತೆಗ್ಗು ಗುಂಡಿಗಳು ಹೊಳೆಯಂತಾಗಿ ಸಾರ್ವಜನಿಕರಿಗೆ ಕಿರಿಕಿರಿಯುಂಟು ಮಾಡಿದವು.

ಗಾಳಿ ರಭಸಕ್ಕೆ ಅಲಲ್ಲಿ ಮರಗಳ ರೆಂಬೆ ಕೊಂಬೆಗಳು ಮುರಿದು ಬಿದ್ದಿದ್ದರಿಂದ ಕೆಲಗಂಟೆಗಳ ಕಾಲ ವಿದ್ಯುತ್ ಸ್ಥಗಿತಗೊಂಡಿತ್ತು. ಪಟ್ಟಣದ ಸಂಗೋಳ್ಳಿ ರಾಯಣ್ಣ ಸರ್ಕಲ್ ಸಮೀಪದ ಅವೈಜ್ಞಾನಿಕ ಮುಖ್ಯರಸ್ತೆಯಲ್ಲಿ ಹೊಳೆಯಂತೆ ಮಳೆನೀರು ತುಂಬಿ ಕೊಂಡಿದ್ದರಿಂದ ಜನರು ಸಂಚರಿಸಲು ಪರದಾಡುವಂತಾಯಿತು. ಬಿಸಿಲಿನ ತಾಪಕ್ಕೆ ಬೇಸತ್ತಿದ್ದ ಜನರಿಗೆ ಅರ್ಧಗಂಟೆ ಸುರಿದ ಒಂದಿಷ್ಟು ಮಳೆ ಸಂತಸ ಮೂಡಿಸಿತು.

ಗೋಕಾಕ: ಮೂರ್ನಾಲ್ಕು ವಾರಗಳಿಂದ ಬಿಸಿಲಿನ ಧಗೆಯಿಂದ ಬೆಂದು ಬಸವಳಿದಿದ್ದ ಜನಸಾಮಾನ್ಯರಿಗೆ ಬುಧವಾರ ಸಂಜೆ ಸುರಿದ ಗುಡುಗು-ಸಿಡಿಲು-ಮಿಂಚಿನಿಂದ ಕೂಡಿದ್ದ ಧಾರಾಕಾರ ಮಳೆ ತಂಪೆರೆದಿದೆ.

ಅನಿರೀಕ್ಷಿತವಾಗಿ ಸುರಿದ ಮಳೆಯಿಂದ ನಗರದ ಬಹುತೇಕ ಚರಂಡಿಗಳು ತುಂಬಿ ಹರಿದವು. ರಸ್ತೆಗಳೆಲ್ಲ ಮಳೆ ನೀರಿನಿಂದ ಆವೃತ್ತವಾಗಿದ್ದರೆ, ವಾಹನ ಸಂಚಾರ ಸಂಪೂರ್ಣ ಸ್ಥಬ್ಧಗೊಂಡಿತ್ತು.

ಕಳೆದ ಎರಡು ವಾರಗಳಿಂದ ರಣಬಿಸಿಲಿನಿಂದ ಕುಗ್ಗಿ ಹೋಗಿದ್ದ ಜನತೆಗೆ ಬುಧವಾರ ಸುರಿದ ಮಳೆ ತುಸು ಮಂದಹಾಸ ಬೀರುವಂತೆ ಮಾಡಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-21-630899135

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.