ಹುಕ್ಕೇರಿ: ತಾಲ್ಲೂಕಿನ ಅಂಕಲಗುಡಿ ಕ್ಷೇತ್ರದ ಲಕ್ಷ್ಮೀದೇವಿ (ಜಾಲೆಮ್ಮದೇವಿ) ಜಾತ್ರಾ ಮಹೋತ್ಸವ ಏ. 24 ರಿಂದ 28ರವರೆಗೆ ವಿಜೃಂಭಣೆಯಿಂದ ಜರುಗಲಿದೆ.

24 ರಂದು ಬೆಳಿಗ್ಗೆ 8ಕ್ಕೆ ಅಂಕಲಗುಡಿಕ್ಷೇತ್ರದ ಹನುಮಾನ ಮಂದಿರ (ಕ್ರಾಸ)ದಿಂದ ಗ್ರಾಮದ ಲಕ್ಷ್ಮೀದೇವಿ ಮಂದಿರದವರೆಗೆ ಪೂರ್ಣಕುಂಭ ಮೆರವಣಿಗೆ ಹಾಗೂ ಜಾತ್ರಾ ಮಹೋತ್ಸವ ಉದ್ಘಾಟನಾ ಸಮಾರಂಭ ನಡೆಯಲಿದೆ. ಘೋಡಗೇರಿ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ ಹಾಗೂ ತವಗಮಠ ಕುರಣಿಯ ಆನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಸಂಸದರಮೇಶ ಕತ್ತಿ ಉದ್ಘಾಟಿಸುವರು. 11ರಿಂದ ಉಡಿ ತುಂಬಲಾಗುವುದು. ಸಂಜೆ 4ಕ್ಕೆ ಕಮಿಟಿ ವತಿಯಿಂದ ‘ಟಗರಿನ ಕಾಳಗ’ ಜರುಗಲಿದೆ. ಪ್ರಥಮ ಬಹುಮಾನ ₹ 11,111 ಮತ್ತು ದ್ವಿತೀಯ ₹ 8,888 ಇರಿಸಲಾಗಿದೆ.

ಏ. 25ರಂದು ಮಧ್ಯಾಹ್ನ 3ಕ್ಕೆ ಒಂದು ಎತ್ತು ಮತ್ತು ಒಂದು ಕುದುರೆ ಗಾಡಿ ಸ್ಪರ್ಧೆ ನಡೆಯಲಿದೆ. ಅಂಕಲಗುಡಿಕ್ಷೇತ್ರದ ಗ್ರಾಮದಿಂದ ಶಿಂದಿಹಟ್ಟಿ ಗ್ರಾಮದ ಪೆಟ್ರೋಲಿಯಂ ಬಂಕ್ವರೆಗೆ ಸ್ಪರ್ಧೆ ನಡೆಯಲಿದೆ. ಪ್ರಥಮ ₹ 25,000, ದ್ವಿತೀಯ ₹ 20,000, ತೃತೀಯ ₹ 15,000ನ್ನು ನೀಡಲಾಗುವುದು.

ಏ. 26ರಂದು ಬೆಳಿಗ್ಗೆ 11ಕ್ಕೆ ಹುಕ್ಕೇರಿಯ ಶಾಸಕ ನಿಖಿಲ್ ಕತ್ತಿ ಸಮುದಾಯ ಭವನ ಉದ್ಘಾಟಿಸುವರು. ಮಧ್ಯಾಹ್ನ 3ಕ್ಕೆ ಜೋಡು ಎತ್ತು ಗಾಡಿ ಸ್ಪರ್ಧೆಯಿದೆ. ಪ್ರಥಮ ಬಹುಮಾನ ₹ 40,000, ದ್ವಿತೀಯ ₹ 30,000, ತೃತೀಯ ₹ 20,000 ನೀಡಲಾಗುವುದು. ರಾತ್ರಿ 10ಕ್ಕೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಏ. 27ರಂದು ಮಧ್ಯಾಹ್ನ 3ಕ್ಕೆ ಜೋಡು ಕುದುರೆಗಾಡಿ ಸ್ಪರ್ಧೆಯಿದೆ. ಪ್ರಥಮ ಬಹುಮಾನ ₹ 25,000, ದ್ವಿತೀಯ ₹ 20,000, ತೃತೀಯ ₹ 15,000 ನೀಡಲಾಗುವುದು. ರಾತ್ರಿ 9ಕ್ಕೆ ಡೊಳ್ಳಿನ ಹಾಡುಗಳು ಮತ್ತು ಬೆಳಿಗ್ಗೆ ಮೂರು ಗಂಟೆಗೆ ವಾಲಗ ಜರುಗಲಿದೆ.

ಏ. 28 ರಂದು ಬೆಳಿಗ್ಗೆ 9ಕ್ಕೆ ಪರಸ್ಥಳದಿಂದ ಬಂದ ಪಲ್ಲಕ್ಕಿಗಳ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ನಂತರ ಉತ್ಸವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬಂದ ಕಲಾ ತಂಡಗಳು ಭಾಗಿಯಾಗುವವು. ರಾತ್ರಿ 10ಕ್ಕೆ ‘ರೈತ ನಕ್ಕರೆ ಜಗವೆಲ್ಲ ಸಕ್ಕರೆ’ ಅರ್ಥಾತ್ ಸಿಡಿದೆದ್ದ ಸಹೋದರರು ಸಾಮಾಜಿಕ ನಾಟಕವಿದೆ ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-21-1329971432

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.