ಹುಕ್ಕೇರಿ: ‘ಮುಸ್ಲಿಮರ ತ್ಯಾಗ ಮತ್ತು ಬಲಿದಾನದ ಸಂಕೇತವೇ ಬಕ್ರೀದ್’ ಎಂದು ಪಟ್ಟಣದ ಹನ್ನೊಂದು ಜಮಾತ ಅಧ್ಯಕ್ಷ ಸಲಿಂ ನದಾಫ್ ಹೇಳಿದರು.

ಪಟ್ಟಣದ ಈದ್ಗಾ ಮೈದಾನದಲ್ಲಿ ಬಕ್ರೀದ್ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಸಾಮೂಹಿಕ ಪ್ರಾರ್ಥನೆ ನೆರವೇರಿಸಿ ಮಾತನಾಡಿದರು.

‘ಇಸ್ಲಾಂ ಧರ್ಮದಲ್ಲಿ ಪ್ರವಾದಿ ಇಬ್ರಾಹಿಂ ಅಲ್ಲಾಹುನಿಗಾಗಿ ಹೆಂಡತಿ, ಮಗುವನ್ನು ತ್ಯಾಗ ಮಾಡಿದ ಹಿನ್ನೆಲೆಯಲ್ಲಿ ಪ್ರತಿ ವರ್ಷ ಅಲ್ಲಾನ ಪ್ರೀತಿಗಾಗಿ ಭೂಲೋಕದ ಅಕ್ರಮ ತ್ಯಾಗ ಮಾಡುವಂತೆ ನಮ್ಮಲ್ಲಿಯ ಅಹಂ ಅನ್ನು ಬಲಿಕೊಡುವಂತೆ ಬಕ್ರೀದ್ ಆಚರಿಸಲಾಗುತ್ತಿದೆ’ ಎಂದರು.

ಮುಖಂಡ ಇರ್ಷಾದ್ ಮೊಕಾಶಿ ಮಾತನಾಡಿ, ‘ಎಲ್ಲ ಧರ್ಮೀಯರು ಶಾಂತಿ, ಸಹಬಾಳ್ವೆಯಿಂದ ಬದುಕುವಂತೆ ಪ್ರಾರ್ಥಿಸಲಾಗಿದೆ’ ಎಂದರು.

ಪಟ್ಟಣದ ಹೊರವಲಯದ ಅರ್ಜುನವಾಡ ರಸ್ತೆ ಪಕ್ಕದ ಈದ್ಗಾ ಮೈದಾನದಲ್ಲಿ ಹನ್ನೂಂದು ಜಮಾತ ಮತ್ತು ಅಂಜುಮನ್ ಕಮಿಟಿ ಸದಸ್ಯರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಪಟ್ಟಣದ ಜುಮ್ಮಾ ಮಸೀದಿ, ಮಹಮ್ಮದಿಯಾ ಮಸೀದಿ, ಗಜಬಾರವಾಡಿ ಮಸೀದಿ, ಜಾಮಾ ಮಸೀದಿ ಸೇರಿದಂತೆ ತಾಲ್ಲೂಕಿನ ಪಾಶ್ಚಾಪುರ, ನೇರ್ಲಿ, ಸುಲ್ತಾನಪುರ ಸೇರಿ ವಿವಿಧ ಗ್ರಾಮಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳು ಜರುಗಿದವು.

ಬಾಗವಾನ್, ಕಬೀರ ಮಲಿಕ್, ಸಲಿಂ ಕಳಾವಂತ, ಶಬ್ಬೀರ ಸನದಿ, ನಾಶೀರ್ ಸುತಾರ, ಕೇಸರ್ ಮೊಕಾಶಿ, ಜಾವೀದ ನದಾಫ್, ಅಷರಫ್ ಖಾನಜಾದೆ, ಡಿ.ಆರ್.ಖಾಜಿ, ರಾಜು ಮುಜಾವರ್, ಅಲಂ ಮಕಾನದಾರ್, ಫಾರೂಕ ಮುಲ್ಲಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-21-76631835

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.