ಹುಕ್ಕೇರಿ: ‘ಯಾರನ್ನೂ ದ್ವೇಷಿಸದೆ, ಎಲ್ಲರನ್ನೂ ಪ್ರೀತಿಸಬೇಕು ಎಂದು ವಚನಗಳ ಮೂಲಕ ಬಸವಣ್ಣ ಸಾರಿರುವುದು ಸಾರ್ವಕಾಲಿಕ’ ಎಂದು ಹಿರೇಮಠದ ಚಂದ್ರಶೇಖರ್ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಬಸವ ಜಯಂತಿ ಅಂಗವಾಗಿ ಅಡವಿ ಸಿದ್ಧೇಶ್ವರ ಮಠದ ಎದುರಿಗೆ ಬಸವಣ್ಣನ ಚಿತ್ರಕ್ಕೆ ಭಾನುವಾರ ಪೂಜೆ ಸಲ್ಲಿಸಿ ಮಾತನಾಡಿದರು.

ಮಾಜಿ ಸಚಿವ ಶಶಿಕಾಂತ ನಾಯಿಕ ಮತ್ತು ತಹಶೀಲ್ದಾರ್ ಬಲರಾಮ ಕಟ್ಟಿಮನಿ ಮಾತನಾಡಿದರು. ಹನ್ನೊಂದು ಜಮಾತ ಅಧ್ಯಕ್ಷ ಸಲಿಂ ನದಾಫ್, ಮುಖಂಡರಾದ ಸುಭಾಸ ನಾಯಿಕ, ಸುರೇಶ ಜಿನರಾಳ, ಮಲ್ಲಪ್ಪ ಬಿಸಿರೊಟ್ಟಿ, ತಮ್ಮಣ್ಣಗೌಡ ಪಾಟೀಲ, ನಂಜುಂಡಪ್ಪ, ಪರಗೌಡ ಪಾಟೀಲ, ಬಿಇಒ ಪ್ರಭಾವತಿ ಪಾಟೀಲ, ಮುಖ್ಯಾಧಿಕಾರಿ ಈಶ್ವರ ಸಿದ್ನಾಳ, ಪಿಇಒ ಎ.ಐ. ಕೋಟಿವಾಲೆ, ಬಿ.ಆರ್.ಸಿ. ಸಮನ್ವಯಾಧಿಕಾರಿ ಎ.ಎಸ್.ಪದ್ಮನ್ನವರ, ಎಡಿಎ ಆರ್.ಕೆ.ನಾಯ್ಕರ್, ಸಿಡಿಪಿಒ ಹೊಳೆಪ್ಪ, ತಾಲ್ಲೂಕು ಪಂಚಾಯಿತಿಯ ಎಸ್.ಎಸ್.ಮಠದ, ಎ.ಎಸ್.ಡಂಗ ಇದ್ದರು.

ಜನಮನ ಗೆದ್ದ ಕುದುರೆ ಕುಣಿತ!: ಬಸವ ಜಯಂತಿಗೆ ತಂದ ಕುದುರೆಯ ಕುಣಿತ ನೆರೆದಿದ್ದ ಜನರ ಮನ ಗೆದ್ದಿತು. ವಾದ್ಯಕ್ಕೆ ತಕ್ಕಂತೆ ಹೆಜ್ಜೆಯಿರಿಸಿ, ಕಾಲು ಎತ್ತಿ ನಮಸ್ಕರಿಸುವ ನೃತ್ಯ ಎಲ್ಲರನ್ನು ಆಕರ್ಷಿಸಿತು.

ಮೆರವಣಿಗೆ: ಬಸವ ಜಯಂತಿ ಪ್ರಯುಕ್ತ ವಿರಕ್ತಮಠದ ಶಿವಬಸವ ಸ್ವಾಮೀಜಿ ಬಸವಣ್ಣನವರ ಚಿತ್ರಕ್ಕೆ ಪೂಜೆ ಸಲ್ಲಿಸಿ ‘ಎತ್ತುಗಳ ಮೆರವಣಿಗೆಗೆ’ ಚಾಲನೆ ನೀಡಿದರು. ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಠಕ್ಕೆ ಮರಳಿತು. ಬೀದಿಗಳಲ್ಲಿ ಭಕ್ತರು ತಮ್ಮ ಮನೆಯ ಮುಂದೆ ಬಂದ ಎತ್ತುಗಳಿಗೆ ಪೂಜೆ ಸಲ್ಲಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-21-1223193219

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.