ಹುಕ್ಕೇರಿ: ತಾಲ್ಲೂಕಿನ ಶಹಾಬಂದರ ಗ್ರಾಮದಲ್ಲಿ ಜನಿಸಿದ ಬಸವರಾಜ ನಡಗಡ್ಡಿ ಅವರು ಬೆಂಗಳೂರಿನ ಬಿ.ಎಂ.ಟಿ.ಸಿ. ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತ ನೂರಾರು ಕವನ ರಚಿಸಿ ಕನ್ನಡ ನುಡಿ ಸೇವೆ ಮಾಡಿ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಶಿಕ್ಷಕ ಪರಶುರಾಮ ಬಿರನೋಳಿ ಹೇಳಿದರು.

ಅವರು ಭಾನುವಾರ ಶಹಾಬಂದರ ಗ್ರಾಮದ ಕಮಲಾದೇವಿ ದೇವಸ್ಥಾನದಲ್ಲಿ ವಿಶ್ವ ಪತ್ರಿಕಾ ಸ್ವಾತಂತ್ರ ದಿನದ ಪ್ರಯುಕ್ತ ಯುವ ಸಾಹಿತಿ ಬಸವರಾಜ ಉಮೇಶ ನಡಗಡ್ಡಿ ಅವರು ಬರೆದ ಚೈತ್ರ ಚಂದ್ರಮ ಮತ್ತು ಜೀವನ ಪ್ರೀತಿ ಎಂಬ ಎರಡು ಕವನ ಸಂಕಲನ ಬಿಡುಗಡೆ ಮಾಡಿ, ಹೊಸ ವಂಟಮುರಿ ಗ್ರಾಮದ ಸಮಾಜ ಸೇವಕ ವಿನೋದ ಜಗಜಂಪಿ ಅವರಿಗೆ ‘ಬಸವ ಶ್ರೀ ಕಾಯಕ ರತ್ನ’ ಪ್ರಶಸ್ತಿ ಲಭಿಸಿದ್ದಕ್ಕಾಗಿ ಏರ್ಪಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿನೋದ ಜಗಜಂಪಿ ಎಲೆಮರೆ ಕಾಯಿಯಂತೆ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆ ಪ್ರಶಂಸನೀಯ ಎಂದರು. ಶಹಾಬಂದರ ಪಿ.ಕೆ.ಪಿ.ಎಸ್ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಹಗೇದಾಳ, ಸಾಹಿತಿ ಮಾರುತಿ ಬುಕನಟ್ಟಿ, ಗ್ರಾಮದ ಮುಖಂಡರಾದ ಮಾರುತಿ ಬಿರಂಜಿ, ನಿಂಗಪ್ಪ ಬಿರಂಜಿ, ಉಮೇಶ ನಡಗಡ್ಡಿ, ಶಿಕ್ಷಕ ಪ್ರಕಾಶ ಜಕ್ಕನ್ನವರ, ಬಸು ವಟವಟಿ, ಮಾರುತಿ ಸಿಂದಿಮರ, ಚಂದ್ರು ಬುಕನಟ್ಟಿ, ಅಶೋಕ ಬುಕನಟ್ಟಿ, ಪತ್ರಕರ್ತ ಎ.ಎಂ.ಕರ್ನಾಚಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-21-407325252

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.