ಹುಕ್ಕೇರಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನಲ್ಲಿ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ವಾಹನವನ್ನು ಶ್ರೀರಾಮ ಸೇನೆ ಕಾರ್ಯಕರ್ತರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಹುಕ್ಕೇರಿ ಮೂಲಕ ಅಕ್ರಮವಾಗಿ ಗೋಮಾಂಸದ ಸಾಗಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಶ್ರೀರಾಮ ಸೇನೆಯ ಕಾರ್ಯಕರ್ತರು ಕೋರ್ಟ್ ಸರ್ಕಲ್ ಬಳಿ ನಿಗಾ ಇರಿಸಿದ್ದರು. ಈ ವೇಳೆ ಟಾಟಾ ಏಸ್ (ಇಂಟ್ರಾ) ವಾಹನ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಚಲಿಸುತ್ತಿರುವುದು ಕಂಡುಬಂದಿದೆ. ಸಂಶಯಗೊಂಡ ಕಾರ್ಯಕರ್ತರು ಗೂಡ್ಸ್ ಗಾಡಿ ಬೆನ್ನತ್ತಿ ರಕ್ಷಿ ಕ್ರಾಸ್ ಬಳಿ ಸಂಜೆ 7 ಗಂಟೆಗೆ ತಡೆದು ತಪಾಸಣೆ ನಡೆಸಿದಾಗ, ಘಟನೆ ಬೆಳಕಿಗೆ ಬಂದಿದೆ.

ತಕ್ಷಣ ಕಾರ್ಯಕರ್ತರಾದ ಶಿವಾಜಿ ಘಾಟಗೆ, ಬಸವರಾಜ ಅಲಗರಾವುತ, ರಾಹುಲ ಅಂಕಲೆ, ಕೆಂಪಣ್ಣ ಬೆಳವಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಭೀಮಪ್ಪ ಲಗಮಪ್ಪ ಅಂಬಾರಿ ನೀಡಿದ ದೂರಿನನ್ವಯ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ತಾಲ್ಲೂಕಿನಲ್ಲಿ ಗೋಹತ್ಯೆ ಮತ್ತು ಮಾಂಸ ಅಕ್ರಮ ಸಾಗಾಟ ಅವಿರತವಾಗಿ ನಡೆಯುತ್ತಿದೆ. ಇಂತಹ ಕೃತ್ಯ ತಡೆಯಲು ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಶ್ರೀರಾಮ ಸೇನೆ ಕಾರ್ಯಕರ್ತ ರಾಹುಲ್ ಅಂಕಲೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.