ಹುಕ್ಕೇರಿ: ವಿದ್ಯಾರ್ಥಿಗಳಿಗೆ ತಾತ್ವಿಕ ವ್ಯವಹಾರಿಕ ಜ್ಞಾನ ಬರಲಿ ಎನ್ನುವ ದೃಷ್ಟಿಯಿಂದ ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ‘ಆಹಾರೋತ್ಸವ’ ಏರ್ಪಡಿಸಲಾಗಿತ್ತು.

ಕಲಾ, ಬಿಬಿಎ, ಸೈನ್ಸ್ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಗ್ರಾಮೀಣ ಶೈಲಿಯ ಊಟ ಸಿದ್ಧಪಡಿಸಿಕೊಂಡು ಬಂದಿದ್ದರೆ, ಕೆಲವು ವಿದ್ಯಾರ್ಥಿಗಳು ಉಪಾಹಾರ ಸಿದ್ಧಪಡಿಸಿಕೊಂಡು ಬಂದಿದ್ದರು.

ಪ್ರಾಚಾರ್ಯ ಪ್ರಕಾಶ ಲಕ್ಷೆಟ್ಟಿ, ಸಿಡಿಸಿ ಸದಸ್ಯ ಪಿ.ಜಿ.ಕೊಣ್ಣೂರ್, ಪ್ರಾಧ್ಯಾಪಕರಾದ ಸತೀಶ್ ಮೊಹಿತೆ, ಸಂದೀಪ ಸಾಳುಂಕೆ, ವಿರೂಪಾಕ್ಷಿ ಪಾಟೀಲ, ಮಲ್ಲಿಕಾರ್ಜುನ ದಲಾಲ, ಬಸವರಾಜ ವಾಸನ್ ಮತ್ತಿತರರು ₹ 100 ದರದಲ್ಲಿ ಒಂದು ಪ್ಲೇಟ್ ಊಟ ಖರೀದಿಸಿ ಉತ್ಸವಕ್ಕೆ ಚಾಲನೆ ನೀಡಿದರು.

ಮಂಚ್ ಮಾನಿಯಾ ತಂಡದ ವಿದ್ಯಾರ್ಥಿನಿಯರು (ಚಪಾತಿ ಮತ್ತು ಸಜ್ಜೆ ರೊಟ್ಟಿ, ಬದನೆ, ಮಡಕಿ ಕಾಳು, ಜುಣಕದ ವಡೆ, ಶಾವಿಗೆ ಪಾಯಸ, ಶೇಂಗಾ ಚಟ್ನಿ, ಮೊಸರು, ಪಾಪಡ್, ಉಪ್ಪಿನಕಾಯಿ, ಪುಳಿಯೊಗರೆ ಮತ್ತು ಮಸಾಲಾ ಅನ್ನ, ಸಾಂಬಾರು, ಅಂಬಲಿ) ₹ 100 ಒಂದು ಪ್ಲೇಟ್ ಊಟಕ್ಕೆ ದರ ನಿಗದಿ ಮಾಡಿದ್ದರು.

ಝಾನ್ಸಿ ರಾಣಿ ತಂಡದ ವಿದ್ಯಾರ್ಥಿನಿಯರು ಮೊಸರು ಜತೆ ದಾಲಿಪಟ್ಟಿ (ದಪಾಟಿ) ಯನ್ನು ಒಂದು ಪ್ಲೇಟಿಗೆ ₹ 20 ರಂತೆ ಮಾರಾಟ ಮಾಡಿದರು.

ಆರ್.ಸಿ.ಬಿ.ತಂಡದ ವಿದ್ಯಾರ್ಥಿನಿಯರು ಒಂದು ಪ್ಲೇಟಿಗೆ ₹ 40 ರಂತೆ ಪುಳಿಯೊಗರೆ ಮತ್ತು ಭಡಂಗ (ಮಂಡಕ್ಕಿ) ₹ 20 ರಂತೆ ಈರುಳ್ಳಿ, ಹಸಿ ಮಾವು ಮತ್ತು ಟೊಮಾಟೊ ಸೇರಿಸಿ ಮಾರಾಟ ಮಾಡಿದರು.

ಬೇಸಿಗೆ ಬಿಸಿಗೆ ಮಜ್ಜಿಗೆ ಮಾರಾಟ: ಹಾಸ್ಟೇಲ್ ಬಾಯ್ಸ್ ತಂಡದ ವಿದ್ಯಾರ್ಥಿಗಳು ಬೇಸಿಗೆ ಬಿಸಿಲಿನ ತಾಪದಲ್ಲಿ ಮಜ್ಜಿಗೆ ₹ 15ಕ್ಕೆ ಒಂದು ಗ್ಲಾಸ್ ಮತ್ತು ಎರಡು ಗ್ಲಾಸಿಗೆ ₹20 ರಂತೆ ಭರ್ಜರಿ ಮಾರಾಟ ಮಾಡಿದರು.

ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ತಮಗೆ ಇಷ್ಟವಾದ ಸ್ವಾದಿಷ್ಟ ತಿಂಡಿ, ಭೋಜನ ಖರೀದಿಸಿ ಆಹಾರೋತ್ಸವಕ್ಕೆ ಪ್ರೋತ್ಸಾಹ ನೀಡಿದರು. ಸಾಂಸ್ಕೃತಿಕ ಸಂಘದ ಸಂಯೋಜಕ ಸತೀಶ್ ಮೊಹಿತೆ, ದೈಹಿಕ ಶಿಕ್ಷಣ ನಿರ್ದೇಶಕ ಅಶೋಕ ಮುದೆನ್ನವರ, ಪ್ರೊ ಪ್ರಿಯಾ ಕಬಾಡೆ, ಐಕ್ಯೂಎಸಿ ಸಂಯೋಜಕ ಬಸವರಾಜ ವಾಸನ್, ಸಂದೀಪ, ಎನ್.ಎಸ್.ಎಸ್.ಅಧಿಕಾರಿ ರವಿ ಪಾಟೀಲ, ಪ್ರೊ ರೇಣುಕಾ ಹಿರೇಮನಿ, ಅನಿಲ ಕಾಂಬಳೆ, ವೈ.ಎಸ್.ಡಾಂಗೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-21-1495012028

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.