ಹುಕ್ಕೇರಿ: ‘ಸಂಘ ಸಂಸ್ಥೆ ಹುಟ್ಟು ಹಾಕುವುದು ಮುಖ್ಯವಲ್ಲ. ಸಂಸ್ಥೆಯನ್ನು ಉಳಿಸಿ ಬೆಳೆಸಿ ಮುಂದುವರಿಸಿಕೊಂಡು ಹೋಗುವುದು ಎಲ್ಲರ ಹೊಣೆಗಾರಿಕೆ’ ಎಂದು ಯಮಕನಮರಡಿಯ ಲಕ್ಷ್ಮೀ ಸೌಹಾರ್ದ ಸಹಕಾರ ಸಂಘದ ಸಂಸ್ಥಾಪಕ ರವಿ ಜಿಂಡ್ರಾಳಿ ಹೇಳಿದರು.

ಅವರು ಬುಧವಾರ ತಾಲ್ಲೂಕಿನ ಮಸರಗುಪ್ಪಿ ಗ್ರಾಮದಲ್ಲಿ ಮಸರಗುಪ್ಪಿ ಲಕ್ಷ್ಮೀ ಸೌಹಾರ್ದ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿದರು.

ಸಂಘದ ಆಡಳಿತ ಮಂಡಳಿಯ ನಿಸ್ವಾರ್ಥ ಸೇವೆ, ಸಿಬ್ಬಂದಿಯ ಪ್ರಾಮಾಣಿಕತೆ ಮತ್ತು ಗ್ರಾಹಕರ ವಿಶ್ವಾಸ ಸಹಕಾರ ಸಂಘದ ಪ್ರಗತಿಗೆ ಕಾರಣವಾಗುತ್ತವೆ ಎಂದರು.

ಸಾನ್ನಿಧ್ಯ ವಹಿಸಿದ್ದ ಕ್ಯಾರಗುಡ್ಡದ ಅವುಜೀಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಮಾತನಾಡಿ, ‘ಸಹಕಾರ ಸಂಘ ಸಂಸ್ಥೆಗಳು ಗ್ರಾಮೀಣ ಭಾಗದ ಜನರಿಗೆ ರಾಷ್ಟ್ರೀಕೃತ ಬ್ಯಾಂಕುಗಳಿಗಿಂತ ಸುಲಭವಾಗಿ ಸಾಲ ನೀಡುತ್ತವೆ. ಗ್ರಾಮೀಣ ಭಾಗದ ಜನರು ಆರ್ಥಿಕವಾಗಿ ಬೆಳೆಯಲು ಅನುಕೂಲ ಮಾಡುತ್ತವೆ. ಜನರು ಸದುಪಯೋಗ ಮಾಡಿಕೊಳ್ಳಬೇಕಷ್ಟೇ’ ಎಂದರು.

ಪಾಶ್ಚಾಪುರ ರುಸ್ತುಂಪುರ ಮಾರ್ಕಂಡೇಯ ಫೌಂಡೇಶನ್ ಕಾರ್ಯಾಧ್ಯಕ್ಷ ಆಲಮಖಾನ ದೇಸಾಯಿ ಮಾತನಾಡಿದರು.

ಸಂಘದ ಸಂಸ್ಥಾಪಕ ಅಧ್ಯಕ್ಷ ಸಂಜಯ ಕಂಠಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಇಮ್ತಿಯಾಜ ಬೇಗ ಇನಾಮದಾರ, ಸದಸ್ಯರಾದ ಕಲಗೌಡ ಪಾಟೀಲ, ದುಂಡಗೌಡ ಪಾಟೀಲ, ಅಶೋಕ ಕಡಲಗಿ, ದೇವರಾಜ ಹಣಗಂಡಿ, ಶಿವಾನಂದ ಪಾಟೀಲ, ದಾದಪ್ಪ ದಪ್ಪಾಧೂಳಿ, ಮೋಸಿನಬೇಗ ಇನಾಮದಾರ, ಅಬ್ಬಾಸ ಮುಲ್ತಾನಿ, ಅರುಣಾ ಕಂಠಿ, ಲಕ್ಷ್ಮೀ ಪಾಟೀಲ, ರೋಹಿತ ಚಲವಾದಿ, ಸಂತೋಷ ಘಸ್ತಿ, ಸಿಇಒ ಕಲ್ಲಪ್ಪ ಮರಡಿ, ಸಿಬ್ಬಂದಿ ರಶ್ಮೀಕುಮಾರ ಮರೆನ್ನವರ, ಮಂಜುನಾಥ ಡೋನಿ, ಸಂತೋಷ ಪಾಟೀಲ, ಸಿಇಒ ಕಲ್ಲಪ್ಪ ಮರಡಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-21-1004622080

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.