ಹುಕ್ಕೇರಿ: ರಾಜ್ಯದಲ್ಲಿ ಗೋವಂಶದ ಸಂರಕ್ಷಣೆ, ಸಂವರ್ಧನೆ ಮತ್ತು ಹತ್ಯೆಯ ಮೇಲೆ ಪೂರ್ಣ ನಿಷೇಧ ಹೇರುವಂತೆ ಸ್ಥಳೀಯ ಶ್ರೀರಾಮ ಸೇನಾ ಘಟಕದ ಪದಾಧಿಕಾರಿಗಳು ಪ್ರತಿಭಟನೆ ಮಾಡಿ ತಹಶೀಲ್ದಾರ್ ಬಲರಾಮ ಕಟ್ಟಿಮನಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಮುಖಂಡರಾದ ಶಿವರಾಜ ಅಂಬಾರಿ ಮತ್ತು ಶಿವಾಜಿ ಘಾಟಗೆ ಮಾತನಾಡಿ, ಗ್ರಾಮೀಣ ಆರ್ಥಿಕತೆಯ ಮೂಲಾಧಾರವಾದ ಗೋವಂಶ ಹತ್ಯೆಯಿಂದ ನಶಿಸಿ ಹೋಗುತ್ತಿದೆ. ಹಿಂದೂ ಧರ್ಮದಲ್ಲಿ ಗೋಮಾತೆಗೆ ವಿಶಿಷ್ಟ ಸ್ಥಾನಮಾನವಿದೆ. ಜತೆಗೆ ರೈತರಿಗೆ ಮತ್ತು ಸಾರ್ವಜನಿಕರಿಗೆ ಗೋವು ಕಾಮಧೇನು. ಅಳಿವಿನ ಅಂಚಿನಲ್ಲಿರುವ ಗೋವಂಶ ಕಾಪಾಡಬೇಕಿದೆ ಎಂದರು.

ತಹಶೀಲ್ದಾರ್ ಬಲರಾಮ ಕಟ್ಟಿಮನಿ ಮನವಿ ಸ್ವೀಕರಿಸಿ, ರಾಜ್ಯಪಾಲರಿಗೆ ಜಿಲ್ಲಾಧಿಕಾರಿ ಮೂಲಕ ಕಳುಹಿಸಲಾಗುವುದು ಎಂದರು. ವಿವೇಕ ಪುರಾಣಿಕ, ಬಸವರಾಜ ಅಲಗರಾವುತ, ಸುನೀಲ ಪೂಜಾರಿ, ಅಜಿತ್ ರಾಣಿಕನವರ, ರಾಹುಲ್ ಅಂಕಲೆ, ಶಿವರಾಜ ಅಂಬಾರಿ, ಮಂಜುನಾಥ ಅಂಕಲೆ, ಪ್ರವೀಣ ಬಾಳೋಜಿ, ಅವಜೇಶ ಅಂಕಲೆ, ಸುನೀಲ ತೇರದಾಳ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-21-83968395

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.