ಹುಕ್ಕೇರಿ: ಪಂಪಸೆಟ್ಗಳಿಗೆ ರಾತ್ರಿ ಸಮಯದಲ್ಲಿ ವಿದ್ಯುತ್ ಪೂರೈಕೆ ಮಾಡುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ರೈತರ ಜೀವಕ್ಕೂ ಅಪಾಯವಿದೆ. ಈ ಕಾರಣ ಹಗಲು ಸಮಯದಲ್ಲಿ ಏಳು ತಾಸು ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿ ಭಾರತೀಯ ಕೃಷಿಕ ಸಮಾಜ ಮತ್ತು ವಿವಿಧ ರೈತಪರ ಸಂಘಟನೆಗಳು ಸ್ಥಳೀಯ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಗಣೇಶ ಈಳಗೇರ್, ಉಪಾಧ್ಯಕ್ಷ ಜಿಯಾವುಲ್ ವಂಟಮೂರಿ, ಮಹಾಂತೇಶ ಕಮತೆ, ವಕೀಲ ಭೀಮಸೇನ್ ಬಾಗಿ, ಲಕ್ಷ್ಮೀ ಪೂಜಾರಿ ಮಾತನಾಡಿ, ತಾಲ್ಲೂಕಿನ ಬಸ್ತವಾಡ, ಬೆಳವಿ, ಯಾದಗೂಡ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ತಡರಾತ್ರಿ ವಿದ್ಯುತ್ ಪೂರೈಸುವುದರಿಂದ ಕತ್ತಲಲ್ಲಿ ರೈತರು ಬೆಳೆಗಳಿಗೆ ನೀರು ಹಾಯಿಸಲು ಪರದಾಡುತ್ತಿದ್ದಾರೆ ಎಂದು ತಿಳಿಸಿದರು.

ಕೆಲವೊಂದು ಗ್ರಾಮಗಳಲ್ಲಿ ನಿರಂತರ ಜ್ಯೋತಿ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗದ್ದರಿಂದ ದೀಪಗಳು ಬೆಳಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ ಎಂದು ಸಂಕಷ್ಟ ವಿವರಿಸಿದರು. ಹೆಚ್ಚಿನ ವೋಲ್ಟೇಜ್ ಪೂರೈಕೆ ಮಾಡಿ ಅನುಕೂಲ ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿ ರೆಸಿಡೆಂಟ್ ಎಂಜಿನಿಯರ್ ನೇಮಿನಾಥ ಖೆಮಲಾಪುರೆ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀರಿಸಿದ ಆರ್.ಇ. ಖೆಮಾಲಾಪುರೆ ಅವರು ಮಾತನಾಡಿ, ಸರ್ಕಾರದ ನಿಯಮಾನುಸಾರ ರಾತ್ರಿ ಮೂರು ಗಂಟೆ ಮತ್ತು ಹಗಲಿನಲ್ಲಿ ನಾಲ್ಕು ಗಂಟೆ ಸೇರಿ ಒಟ್ಟು ಏಳು ತಾಸು ವಿದ್ಯುತ್ ಪೂರೈಸಲಾಗುತ್ತಿದೆ. ತಾಲ್ಲೂಕಿನ ಕಣಗಲಾ, ಪಾಶ್ಚಾಪುರ, ಹೆಬ್ಬಾಳ, ಹುಕ್ಕೇರಿ ಪಟ್ಟಣ ಹೊರತುಪಡಿಸಿ ಉಳಿದೆಡೆ ಸಮಸ್ಯೆಯಾಗದಂತೆ ಉಪಕೇಂದ್ರ ನಿರ್ಮಿಸಲಾಗಿದೆ ಎಂದರು.

ತಾಲ್ಲೂಕಿನ ಬೆಳವಿ, ನಿಡಸೋಸಿ, ಕಣಗಲಾ, ಪಾಶ್ಚಾಪುರ ಗ್ರಾಮಗಳಲ್ಲಿ ವಿದ್ಯುತ್ ಉಪಕೇಂದ್ರಗಳ ರಚನಾ ಕಾರ್ಯ ಪ್ರಗತಿಯಲ್ಲಿದ್ದು, ಕಾಮಗಾರಿ ಮುಗಿದ ತಕ್ಷಣ ಸಮಸ್ಯೆ ಬಗೆ ಹರಿಯಲಿದೆ. ಜತೆಗೆ ಬೇಡಿಕೆಗೆ ಅನುಸಾರ ಹೆಚ್ಚುವರಿ ಟಿ.ಸಿ. ಅಳವಡಿಸುತ್ತಿದ್ದೇವೆ ಎಂದು ಸಮಜಾಯಿಸಿ ಉತ್ತರಿಸಿದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವಿಶ್ವನಾಥ ನೈಕ, ಮುಖಂಡರಾದ ಅಲಗೌಡ ಪಾಟೀಲ, ರಾಮಪ್ಪ ವಾಸೇದಾರ, ಗುರುಸಿದ್ಧ ಬಾಗಿ, ಸಿದ್ಧಪ್ಪ ಭಂಡಾರಿ, ಎಂ.ಎಸ್. ಕೋಟಿವಾಲೆ, ಎ.ಎಸ್. ಸಂಕನ್ನವರ ಸೇರಿದಂತೆ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-21-341121393

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.