ಹುಕ್ಕೇರಿ: ತಾಲ್ಲೂಕಿನಲ್ಲಿ ಏತ ನೀರಾವರಿ ಯೋಜನೆ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬ ಖಂಡಿಸಿ ಪಟ್ಟಣದ ಕೋರ್ಟ್ ಸರ್ಕಲ್ನಲ್ಲಿ ನಡೆಯುತ್ತಿರುವ ರಾಜ್ಯ ರೈತ ಸಂಘದ ಬೃಹತ್ ಪ್ರತಿಭಟನೆ ಗುರುವಾರ ಎರಡು ದಿನ ಪೂರೈಸಿತು. ಶುಕ್ರವಾರವೂ ಮುಂದುವರಿಯಲಿದೆ.

ಸಮಾವೇಶ ಉದ್ಧೇಶಿಸಿ ಮಾತನಾಡಿದ ರಾಜ್ಯ ಘಟಕದ ಅಧ್ಯಕ್ಷ ಚೂನಪ್ಪ ಪೂಜೇರಿ ಮತ್ತು ಗೌರವಾಧ್ಯಕ್ಷ ಶಶಿಕಾಂತ ಗುರೂಜಿ, ತಾಲ್ಲೂಕಿನಲ್ಲಿ ಎರಡು ಜಲಾಶಯಗಳಿದ್ದು, ಮೂರು ನದಿಗಳು ಹರಿಯುತ್ತಿದ್ದರೂ, ತಾಲ್ಲೂಕಿನ 54 ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ ಎಂದರು.

ಶಾಸಕ ನಿಖಿಲ್ ಕತ್ತಿ ಮಾತನಾಡಿ, ‘ನಮ್ಮ ಅಜ್ಜ ಮತ್ತು ತಂದೆ ದಿ.ಉಮೇಶ ಕತ್ತಿ ಶಾಸಕರಾದಾಗ ಕ್ಷೇತ್ರದಲ್ಲಿ ಶೇ 16 ರಷ್ಟು ನೀರಾವರಿ ಸೌಲಭ್ಯವಿತ್ತು. ದಿ.ಉಮೇಶ್ ಕತ್ತಿ ಮುತುವರ್ಜಿ ವಹಿಸಿ ವಿವಿಧ ನೀರಾವರಿ ಯೋಜನೆ ಕೈಗೊಂಡು ಶೇ 70 ರಿಂದ 80ರಷ್ಟು ನೀರಾವರಿ ಸೌಲಭ್ಯ ಕಲ್ಪಿಸಿದ್ದಾರೆ’ ಎಂದರು.

‘ಸದ್ಯ ನನೆಗುದಿಗೆ ಬಿದ್ದಿರುವ ಮಲ್ಲಿಕಾರ್ಜುನ ಏತ ಮತ್ತು ಶಿಪ್ಪೂರ ಏತ ನೀರಾವರಿ ಕೈಗೂಡಿಸಲು ಕ್ರಮವಹಿಸುತ್ತೇನೆ. ರೈತರ ಹೋರಾಟಕ್ಕೆ ನಮ್ಮ ಬೆಂಬಲ ಇದೆ’ ಎಂದು ಹೇಳಿದರು.

ನಿಡಸೋಸಿ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ವಿರಕ್ತಮಠದ ಶಿವಬಸವ ಸ್ವಾಮೀಜಿ, ಮಾಜಿ ಸಚಿವ ಶಶಿಕಾಂತ ನಾಯಿಕ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಮುಗಳಿಹಾಳ, ಜಿಲ್ಲಾ ಘಟಕದ ಅಧ್ಯಕ್ಷ ಮಂಜು ಪೂಜಾರಿ, ಉಪಾಧ್ಯಕ್ಷ ಗೋಪಾಲ, ಸತ್ಯಪ್ಪ ಮಲ್ಲಾಪುರೆ, ರಾಮದುರ್ಗದ ಜಗದೀಶ ದೇವರಡ್ಡಿ, ಚೇತನ್, ನಿಪ್ಪಾಣಿ ರಾಜು ಪವಾರ್ ಸಭೆ ಉದ್ಧೇಶಿಸಿ ಮಾತನಾಡಿದರು.

ವಕೀಲ ಭೀಮಸೇನ್ ಬಾಗಿ, ರೈತ ಮುಖಂಡರಾದ ಭೀಮಗೌಡ ಗಿರಿಗೌಡನವರ, ಪ್ರೇಮ ಚೌಗಲಾ, ಸಂಜೀವ ಹಾವನ್ನವರ, ಮುಖಂಡರಾದ ಮಾರುತಿ ಅಷ್ಟಗಿ, ಸತ್ಯಪ್ಪ ನಾಯಿಕ, ಅಣ್ಣಾಗೌಡ ಪಾಟೀಲ, ಕಲಗೌಡ ಪಾಟೀಲ, ಉದಯ ಹುಕ್ಕೇರಿ, ಗುರುರಾಜ ಕುಲಕರ್ಣಿ, ಆನಂದ ಲಕ್ಕುಂಡಿ, ಹಾವೇರಿ, ಬಬಲೇಶ್ವರ, ವಿಜಯಪುರ ಸೇರಿದಂತೆ ವಿವಿಧ ಭಾಗಗಳ ರೈತ ಮುಖಂಡರು, ವಿವಿಧ ಗ್ರಾಮಗಳ ನೂರಾರು ರೈತರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-21-398693170

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.