ಹುಕ್ಕೇರಿ: ತಾಲ್ಲೂಕಿನ ಶಿರೂರು ಡ್ಯಾಂನಿಂದ ಮಾರ್ಕಂಡೇಯ ನದಿ ಎಡದಂಡೆ ಕಾಲುವೆಯ ಬಸಾಪುರ ಗ್ರಾಮದ ಮೂಲಕ ಬನ್ನಿಬಾಗಿ ಗ್ರಾಮದವರೆಗೆ ಹಾದುಹೋಗುವ ಕಾಲುವೆಗೆ ಶೀಘ್ರ ನೀರು ಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಪದಾಧಿಕಾರಿಗಳು ಮತ್ತು ರೈತರು ಗುರುವಾರ ಹಿಡಕಲ್ ಡ್ಯಾಂನ ಕರ್ನಾಟಕ ನೀರಾವರಿ ನಿಗಮದ (ಜಿ.ಆರ್.ಬಿ.ಸಿ.ಸಿ.ಉಪವಿಭಾಗ ನಂ.1 ಕಚೇರಿ) ಮುಂದೆ ಧರಣಿ ನಡೆಸಿ ಆಗ್ರಹಿಸಿದರು.

20 ವರ್ಷಗಳಲ್ಲಿ ಒಂದು ಸಲ ಮಾತ್ರ ನೀರನ್ನು ಕಾಲುವೆಗೆ ಹರಿಸಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ನೀರನ್ನು ಹರಿಸದೆ ಕಾಲುವೆ ಹಾಳು ಮಾಡಲಾಗಿದೆ. ಶಿರೂರು ಗ್ರಾಮದಿಂದ ಹಾಯ್ದು ಹೋಗುವ ಹಗೆದಾಳ, ಬಸಾಪುರ, ಯಲ್ಲಾಪುರ, ಕರಗುಪ್ಪಿ, ಬನ್ನಿಬಾಗಿ ಮಾರ್ಗದಿಂದ ಹಾಯ್ದು ಹೋಗುವ ಕಾಲುವೆಗೆ ನೀರನ್ನು ಹರಿಸಬೇಕು. ಈ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಎಲ್ಲಾ ಕೊಳವೆ ಬಾವಿ ಬತ್ತಿದ್ದು, ಈ ಗ್ರಾಮಗಳ ರೈತರಿಗೆ ನೀರಿನ ತೊಂದರೆ ಹೆಚ್ಚಾಗಿದೆ.

ತೋಟದ ಮನೆಗಳಲ್ಲಿ ವಾಸಿಸುವ ರೈತರಿಗೆ ಕುಡಿಯಲು ನೀರು ಹಾಗೂ ದನಕರುಗಳಿಗೆ ಮನೆ ಬಳಕೆಗೆ ನೀರು ಲಭ್ಯವಿಲ್ಲ. ಆದ್ದರಿಂದ ರೈತರು ಬೇರೆ ಬೇರೆ ಕಡೆ ವಲಸೆ ಹೋಗುವ ಸಂದರ್ಭ ಎದುರಾಗಿದೆ ಎಂದು ಅಳಲು ತೋಡಿಕೊಂಡರು.

ಏ.5ರ ಒಳಗಾಗಿ ನೀರು ಬಿಡದೆ ಹೋದರೆ ಅಹೋರಾತ್ರಿ ಧರಣಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಹಿಡಕಲ್ ಡ್ಯಾಂ ನೀರಾವರಿ ಎಇಇ ಪಿ.ಎಂ ಅರಳಿಕಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹುಕ್ಕೇರಿ ತಾಲ್ಲೂಕು ಘಟಕದ ಅಧ್ಯಕ್ಷ ಸಂಜೀವ ಹಾವನ್ನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಬೈಲನ್ನವರ, ಕಾರ್ಯದರ್ಶಿ ಶಿವಲಿಂಗ ಪಾಟೀಲ, ತಾಲ್ಲೂಕು ಸಂಚಾಲಕ ಮಹಾಂತೇಶ ಕಂಬಾರ, ಘೋಡಗೇರಿ ಶಾಖೆ ಅಧ್ಯಕ್ಷ ಶಿವಕುಮಾರ ಬಡಕುಂದ್ರಿ, ಯಮಕನಮರಡಿ ಶಾಖೆ ಅಧ್ಯಕ್ಷ ಬಸವರಾಜ ಹುಲಕುಂದ ಹಾಗೂ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-21-1987948306

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.