ಹುಕ್ಕೇರಿ: ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳು ಸರಿಯಾಗಿ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಶಾಸಕ ನಿಖಿಲ್ ಕತ್ತಿ ಸಲಹೆ ನೀಡಿದರು.

ಪಟ್ಟಣದ ಪುರಸಭೆಯಲ್ಲಿ ಈಚೆಗೆ ವಿವಿಧ ಯೋಜನೆಯಡಿ ಮಂಜೂರಾದ ಪರಿಕರ ವಿತರಿಸಿ ಮಾತನಾಡಿದರು.

ಎಸ್.ಎಫ್.ಸಿ. ಮುಕ್ತ ನಿಧಿಯ ಶೇ 5ರ ಅಡಿ 22 ಅಂಗವಿಕಲ (ಶ್ರವಣ ದೋಷವುಳ್ಳ) ಫಲಾನುಭವಿಗಳಿಗೆ, ಎಸ್.ಎಫ್.ಸಿ. ಮುಕ್ತ ನಿಧಿಯ ಶೇ 29ರ ಪರಿಶಿಷ್ಟ ಜಾತಿ ಎಸ್.ಸಿ. ಎಸ್ಪಿ ಫಲಾನುಭವಿಗಳಿಗೆ, ಎಸ್.ಎಫ್.ಸಿ.ಮುಕ್ತ ನಿಧಿಯ ಶೇ 29ರ ಪರಿಶಿಷ್ಟ ಪಂಗಡ ಟಿಎಸ್ಪಿ ಫಲಾನುಭವಿಗಳು ಸೇರಿ ಒಟ್ಟು 22 ಹೊಲಿಗೆ ಯಂತ್ರ, 18 ವಿಶೇಷ ಅಗತ್ಯವುಳ್ಳ (ಬುದ್ಧಿಮಾಂದ್ಯ ಮಕ್ಕಳು) ಫಲಾನುಭವಿಗಳಿಗೆ ವಾಟರ್ ಬೆಡ್ ವಿತರಿಸಿದರು.

ಎಸ್.ಎಫ್.ಸಿ.ಮುಕ್ತ ನಿಧಿಯ ಶೇ 29ರ ಪರಿಶಿಷ್ಟ ಪಂಗಡದ 8 ಫಲಾನುಭವಿಗಳಿಗೆ ಹೊಸ ಜೀವವಿಮೆ ಪಾಲಿಸಿ ಹಾಗೂ 40 ಪೌರ ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಿಸಿದರು. ಮುಖ್ಯಾಧಿಕಾರಿ ಈಶ್ವರ ಸಿದ್ನಾಳ, ಜೆಇ ರಾಜು ಪಟ್ಟಣಶೆಟ್ಟಿ ಯೋಜನೆಯ ಮಾಹಿತಿ ನೀಡಿದರು.

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಪುರಸಭೆ ಮಾಜಿ ಅಧ್ಯಕ್ಷರಾದ ಕಲಗೌಡ ಪಾಟೀಲ,ಇಮ್ರಾನ್ ಮೊಮೀನ್, ರಾಜು ಚೌಗಲಾ, ಉಪಾಧ್ಯಕ್ಷ ಗುರುರಾಜ ಕುಲಕರ್ಣಿ, ಆನಂದ ಗಂಧ, ಸದಸ್ಯ ರಾಜು ಮುನ್ನೋಳಿ, ಇಸ್ಮಾಯಿಲ್ ಮುಲ್ಲಾ ಗಜಬರ್, ವ್ಯವಸ್ಥಾಪಕ ಮಲ್ಲಿಕಾರ್ಜುನ ಇದ್ದರು. ಮುಖ್ಯಾಧಿಕಾರಿ ಈಶ್ವರ ಸಿದ್ನಾಳ ಸ್ವಾಗತಿಸಿದರು. ಕಿರಿಯ ಎಂಜನಿಯರ್ ರಾಜು ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-21-508820006

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.