ಹುಕ್ಕೇರಿ: ಕುರಣಿ, ಕೋಚರಿ ಏತ ನೀರಾವರಿ, ಅಡವಿ ಸಿದ್ಧೇಶ್ವರ ಮತ್ತು ಶಂಕರಲಿಂಗ ಏತ ನೀರಾವರಿಯನ್ನು ಇನ್ನೆರಡು ತಿಂಗಳಲ್ಲಿ ಪ್ರಾರಂಭಿಸಲಾಗುವುದು. ₹ 780 ಕೋಟಿ ವೆಚ್ಚದ ಮಲ್ಲಿಕಾರ್ಜುನ ಏತ ನೀರಾವರಿ ಯೋಜನೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಅನುದಾನ ಮಂಜೂರಾತಿ ಪಡೆದು ಕಾರ್ಯಗತ ಮಾಡಲಾಗುವುದು ಎಂದು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಅಮ್ಮಿಣಭಾವಿ ಭರವಸೆ ನೀಡಿದರು.

ತಾಲ್ಲೂಕಿನಲ್ಲಿ ಸಮಗ್ರ ನೀರಾವರಿ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಕೋರ್ಟ್ ಸರ್ಕಲ್ ಬಳಿ ರಾಜ್ಯ ರೈತ ಸಂಘ ಹಮ್ಮಿಕೊಂಡಿದ್ದ ನಾಲ್ಕನೇ ದಿನದ ಪ್ರತಿಭಟನೆಯಲ್ಲಿ ರೈತರನ್ನು ಮತ್ತು ಮುಖಂಡರನ್ನು ಉದ್ಧೇಶಿಸಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿನ ರಸ್ತುಂಪುರ, ದಡ್ಡಿ ನಾಗನೂರ, ಅರಳಿಕಟ್ಟಿ ಜಾರಕಿಹೊಳಿ, ಹತ್ತರಗಿ ಗುಡಗನಟ್ಟಿ, ಶಿಪ್ಪೂರ ಹಡಲಗಾ, ಕೊಟಬಾಗಿ ಏತ ನೀರಾವರಿ ಕುರಿತು ಸ್ಥಿತಿಗತಿ ವಿವರಿಸಿದರು.

ಈಗಾಗಲೇ ಯೋಜನೆಯ ಕಾರ್ಯಗತ ತಡವಾಗಿದ್ದು, ತಾವುಗಳು ಇಲ್ಲಿಯೆ ವಸತಿ ಮಾಡಿ ನಾಳೆಯಿಂದ ಯೋಜನೆಯ ಸ್ಥಿತಿಗತಿ ಅರಿತುಕೊಂಡು ಶೀಘ್ರ ನಿರ್ಧಾರ ಕೈಗೊಳ್ಳುವಂತೆ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಮತ್ತು ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಎಂಡಿ ಅಮ್ಮಿನಭಾವಿ ಅವರನ್ನು ಒಕ್ಕೋರಲಿನಿಂದ ಆಗ್ರಹಿಸಿದರು. ಅದಕ್ಕೆ ಒಪ್ಪಿಗೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯುವುದಾಗಿ ಮುಖಂಡರು ಘೋಷಿಸಿದರು.

ಇದಕ್ಕೂ ಮೊದಲು ಹಿರೇಮಠದ ಚಂದ್ರಶೇಖರ ಸ್ವಾಮೀಜಿ, ಕ್ಯಾರಗುಡ್ಡದ ಮಂಜುನಾಥ ಸ್ವಾಮೀಜಿ, ಹುಣಸಿಕೊಳ್ಳಮಠದ ಸಿದ್ಧೇಶ್ವರ ದೇವರು, ಹುಲ್ಲೋಳಿಯ ವಿದ್ಯಾರ್ಥಿನಿ ಶ್ವೇತಾ ಕುಗಟೋಳಿ, ವಕೀಲ ಭೀಮಸೇನ ಬಾಗಿ, ಸತ್ಯಪ್ಪ ಮಲ್ಲಾಪುರೆ, ನಾಗರಾಜ ಹಾದಿಮನಿ ಮಾತನಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮಾನುಜಮ್, ಎಸ್.ಇ.ಗಣಿ, ತಹಶೀಲ್ದಾರ್ ಬಲರಾಮ ಕಟ್ಟಿಮನಿ, ಸಂಗಮ ಶುಗರ್ಸ್ ಅಧ್ಯಕ್ಷ ರಾಜೇಂದ್ರ ಪಾಟೀಲ, ಬಸವರಾಜ ನಾಯಿಕ, ಬಂಡು ಹತನೂರಿ, ಅಮರ ನಲವಡೆ, ಸುಭಾಷ ಕಾಸರಕರ್, ದಿಲೀಪ ಹೊಸಮನಿ, ಚಿಕ್ಕೋಡಿ ವಕೀಲರು ಸೇರಿದಂತೆ ವಿವಿಧ ಗ್ರಾಮಗಳ ಸಾವಿರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-21-1418513207

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.