ಹುಕ್ಕೇರಿ: ತಾಲ್ಲೂಕಿನಲ್ಲಿ ನನೆಗುದಿಗೆ ಬಿದ್ದಿರುವ 14 ನೀರಾವರಿ ಯೋಜನೆ, ಕೆರೆ ತುಂಬುವ ಮತ್ತು ಜಲಾಶಯದಿಂದ ಹೂಳೆತ್ತುವುದು, ಏತ ನೀರಾವರಿ ಅನುಷ್ಠಾನದಲ್ಲಿ ವಿಳಂಬ, ಜನರಿಗೆ ನೀರಾವರಿ ಸೌಲಭ್ಯದಿಂದ ವಂಚನೆ ಮಾಡಿರುವ ಮತ್ತು ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಬುಧವಾರ ಪಟ್ಟಣದ ಕೋರ್ಟ್ ಸರ್ಕಲ್ ನಲ್ಲಿ ರಾಜ್ಯ ರೈತ ಸಂಘದಿಂದ ಬೃಹತ್ ಪ್ರತಿಭಟನೆ ಜರುಗಿತು.

ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚೂನಪ್ಪ ಪೂಜೇರಿ ಮತ್ತು ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ ಗುರೂಜಿ ಮಾತನಾಡಿ, ಇಲ್ಲಿಯವರೆಗೆ ಆಯ್ಕೆಯಾದ ಜನಪ್ರತಿನಿಧಿಗಳನ್ನು, ರಾಜಕೀಯ ಮುಖಂಡರನ್ನು ತರಾಟೆಗೆ ತೆಗೆದುಕೊಂಡು ರೈತರಿಗೆ ಮೋಸ ಮಾಡಿರುವ ಕುರಿತು ಕಿಡಿ ಕಾರಿದರು.

ಈ ಯೋಜನೆ ಕೈಗೆತ್ತಿಕೊಳ್ಳಲು ಸುಮಾರು ₹2000 ಕೋಟಿ ಬೇಕಾಗುವುದು. ಹಣ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಮತ್ತು ನೀರಾವರಿ ಸಚಿವರನ್ನು ಒತ್ತಾಯಿಸಿದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಸಂಸದ ರಮೇಶ್ ಕತ್ತಿ ಮಾತನಾಡಿ, ಸರ್ಕಾರ ಯಾವುದೇ ಇದ್ದರೂ, ರೈತರ ಹಿತಾಸಕ್ತಿ ಕಾಪಾಡಲು ಬದ್ಧವಾಗಿರಬೇಕು. ರೈತರ ಹೋರಾಟಕ್ಕೆ ಮತ್ತು ನ್ಯಾಯ ಒದಗಿಸಲು ಈ ಭಾಗದ ಜನರ ಬೆಂಬಲ ಇದೆ ಎಂದು ತಿಳಿಸಿದರು.

ಹುಣಸಿಕೊಳ್ಳಮಠದ ಸಿದ್ಧಬಸವ ದೇವರು, ವಕೀಲ ಭೀಮಸೇನ್ ಬಾಗಿ, ರೈತ ಮುಖಂಡರಾದ ಯಾದಗಿರಿಯ ಮಲ್ಲನಗೌಡ ಸುಬೇದಾರ, ಮಲ್ಲಪ್ಪ ಅಂಗಡಿ, ಭೀಮಗೌಡ ಗಿರಿಗೌಡನವರ, ಪ್ರೇಮ ಚೌಗಲಾ, ಸತ್ಯಪ್ಪ ಮಲ್ಲಾಪುರೆ ಮಾತನಾಡಿದರು.

ಬೆಳಗಾವಿ ಉಪವಿಭಾಗಾಧಿಕಾರಿ ಶರವಣ ನಾಯ್ಕ ಮಾತನಾಡಿ, ಡಿಪಿಆರ್, ಈಗಾಗಲೇ ಕಳಿಸಿದ ಅಂದಾಜು ವರದಿ ಮತ್ತಿತರ ವಿಷಯವನ್ನು ರೈತರ ಗಮನಕ್ಕೆ ತಂದು, ಚರ್ಚಿಸಲು ಸಮಯ ಕೇಳಿದರು. ಅದಕ್ಕೆ ಒಪ್ಪದ ಮುಖಂಡರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಡಿಸಿ ಯವರು ಸ್ಥಳಕ್ಕೆ ಬಂದು ಹಣ ಮಂಜೂರು ಸೇರಿದಂತೆ ಕಾಮಗಾರಿ ಪೂರ್ಣ ಮಾಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಗುವುದು ಎಂದು ಶಶಿಕಾಂತ ಗುರೂಜಿ ಘೋಷಿಸಿದರು.

ಮೇ 21ರಂದು ಬೆಳಿಗ್ಗೆ 11ಕ್ಕೆ ಕೋರ್ಟ್ ಸರ್ಕಲ್ ನಲ್ಲಿ ಮತ್ತೆ ಸಭೆ ಸೇರಿ ಸಚಿವರು ಮತ್ತು ಡಿಸಿಯವರು ಹೇಳಿಕೆ ಕೇಳಿ, ಪ್ರತಿಭಟನೆ ಹಿಂಪಡೆಯಬೇಕೊ ಅಥವಾ ಮುಂದುವರೆಸಬೇಕೊ ಎಂಬುದನ್ನು ನಿರ್ಧರಿಸಲಾಗುವುದು ಎಂದರು.

ಡಿವೈಎಸ್ಪಿಗಳಾದ ಗೋಕಾಕದ ರವಿ ನಾಯ್ಕ, ಅಥಣಿಯ ಪ್ರಶಾಂತ ಮುನ್ನೋಳಿ, ಪಿಐಗಳಾದ ಶಿವಶರಣ ಗಣಾಚಾರಿ, ಗಣಪತಿ ಕುಂಗನೊಳ್ಳಿ, ಘಟಪ್ರಭಾದ ಎಚ್.ಡಿ.ಮುಲ್ಲಾ ಪೊಲೀಸ್ ಬಂದೋಬಸ್ತ್ ಮಾಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-21-854359157

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.