ಹುಕ್ಕೇರಿ: ಪಟ್ಟಣದ ಎಲಿಮುನ್ನೋಳಿ ರಸ್ತೆಗೆ ಹೊಂದಿಕೊಂಡ ಜಾಬಾಪುರ ಹನುಮ ಜಯಂತಿ ಶನಿವಾರ ಭಕ್ತಿಭಾವದಿಂದ ಆಚರಿಸಲಾಯಿತು. ಬೇರೆಡೆ ಈಗಾಗಲೇ ಹನುಮ ಜಯಂತಿ ಆಚರಿಸಲಾಗಿದೆ. ಆದರೆ ಇಲ್ಲಿ ದೇವಸ್ಥಾನದಲ್ಲಿ ದೇವರು ‘ಕವಲು ಕೊಟ್ಟಾಗ’ ಮಾತ್ರ ಜಯಂತಿ ಆಚರಿಸಲಾಗುವುದು ಎಂದು ಸಮಿತಿ ಸದಸ್ಯರಾದ ಶಿವಾನಂದ ಪೂಜೇರಿ ಮತ್ತು ಅಜೀತ ಪೂಜೇರಿ ಹೇಳುತ್ತಾರೆ.

ಶುಕ್ರವಾರ ವಿರೂಪಾಕ್ಷಿ ವಾಲಿ ಅವರ ಮನೆಯಲ್ಲಿ ಪ್ರಾರಂಭಗೊಂಡ ಭಜನೆಯು ಇಡೀ ರಾತ್ರಿ ದೇವಸ್ಥಾನದಲ್ಲಿ ನಡೆಯಿತು. ಶನಿವಾರ ಜಾಬಾಪುರದ ಸೇವಾ ಹಕ್ಕುದಾರರು ಸ್ವಯಂಪ್ರೇರಣೆಯಿಂದ ದೇವಸ್ಥಾನಕ್ಕೆ ಬಂದು ಪೆಂಡಾಲ್ ಹಾಕುವ, ಸ್ವಚ್ಛಗೊಳಿಸುವ, ಪ್ರಸಾದ (ಭೋಜನ ನೀಡುವ), ಅಡುಗೆ ಮಾಡುವ ಸೇವೆ ಸಲ್ಲಿಸುತ್ತಾರೆ. ಕಾರಂಜಿಯಿಂದ ತಂದ ನೀರಿನಿಂದ ಅಡುಗೆ ಮಾಡುವ ಪದ್ಧತಿಯಿದೆ. ಬೆಳಿಗ್ಗೆ ಅರ್ಚಕ ಅಜೀತ ಪೂಜೇರಿ ಅಭಿಷೇಕ ನೆರವೇರಿಸಿದರು. ವಿರೂಪಾಕ್ಷಿ ವಾಲಿ, ಚಂದು ವಾಡೇಕರ್, ದಾನಯ್ಯ ನಂದಿಕೋಲಮಠ, ಕಲ್ಲಪ್ಪ ಗಜಬರ್, ಮಹಾದೇವ್ ಪೂಜೇರಿ, ರಾಮಪ್ಪ ಹಂಜಿ, ಶಿವಾನಂದ ಪೂಜೇರಿ, ವಿರೇಶ್ ಗಜಬರ್, ಸೋಮು ನಂದಿಕೋಲಮಠ, ಮಲ್ಲಪ್ಪ ಖೋತ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-21-273874751

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.