ಹುಕ್ಕೇರಿ: ಕ್ಷೇತ್ರದ ಜನರಿಗೆ ಮೂಲ ಸೌಲಭ್ಯ ಒದಗಿಸಲು ಮೊದಲ ಆದ್ಯತೆ ನೀಡಲಾಗಿದ್ದು, ತಾಲ್ಲೂಕಿನ ಕಮತನೂರ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ನೀಗಿಸಲು ಸಹಕಾರಿ ಆಗಿದೆ ಎಂದು ಶಾಸಕ ನಿಖಿಲ್ ಕತ್ತಿ ಹೇಳಿದರು.

ತಾಲ್ಲೂಕಿನ ಕಮತನೂರ ಗ್ರಾಮದಲ್ಲಿ ₹40 ಲಕ್ಷ ವೆಚ್ಚದ ಕುಡಿಯುವ ನೀರಿನ ಪಂಪ್ ಮತ್ತು ನೀರು ಸೋಸುವ (ಪ್ರೆಶರ್ ಫಿಲ್ಟರ್) ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ದಿ.ಉಮೇಶ್ ಕತ್ತಿ ಅವರು ಆಶಿಸಿದ್ದ ಕೆರೆ ಅಭಿವೃದ್ಧಿ ಕಾಮಗಾರಿ, ಕೆರೆ ತುಂಬಿಸುವ ಮತ್ತು ತೋಟಪಟ್ಟಿ ರಸ್ತೆ ಕಾಮಗಾರಿ ಕೈಗೊಂಡಿದ್ದು, ಹಂತ ಹಂತವಾಗಿ ಇಡೀ ಕ್ಷೇತ್ರವನ್ನು ನೀರಾವರಿಗೆ ಒಳಪಡಲಾಗುವುದು ಎಂದರು.

ಮುಖಂಡರಾದ ಶ್ರೀಧರ ಕುಲಕರ್ಣಿ ಮತ್ತು ಅಶೋಕ ಚೌಗಲಾ ಮಾತನಾಡಿದರು. ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ನಿರ್ದೇಶಕ ಶಿವಾನಂದ ಮುಡಸಿ, ಮುಖಂಡರಾದ ಅಪ್ಪಾಸಾಹೇಬ ಶಿರಕೋಳಿ, ಗಜಾನನ ಕ್ವಳ್ಳಿ, ಕಲ್ಲಪ್ಪಣ್ಣ ಚೌಗಲಾ, ಪ್ರಶಾಂತ ಪಾಟೀಲ, ಗುತ್ತಿಗೇದಾರ ಮಲ್ಲಪ್ಪ ಬಿಸಿರೊಟ್ಟಿ, ರಾಜೇಶ್ವರಿ ಗೋಠಿ, ವಿರೂಪಾಕ್ಷಿ ಚೌಗಲಾ, ಬಿ.ಬಿ.ಪಾಟೀಲ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-21-411083398

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.