ಹುಕ್ಕೇರಿ: ಪಟ್ಟಣದ ಶ್ರೀ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ಮಾರ್ಚ್ 10 ರಂದು ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕಾಗಿ ಬಸ್ ನಿಲ್ದಾಣದ ಹತ್ತಿರ ಇರುವ ಬೀದಿ ವ್ಯಾಪಾರಸ್ಥರನ್ನು ಪೊಲೀಸ್ ಮತ್ತು ಪುರಸಭೆ ಸಿಬ್ಬಂದಿ ತೆರವುಗೊಳಿಸಿದರು.

ತುರ್ತಾಗಿ ನಡೆದ ಕಾರ್ಯಾಚರಣೆಯಲ್ಲಿ ಹಲವಾರು ವರ್ಷಗಳಿಂದ ಪುಟಪಾತ್ ಅತಿಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದ ಬೀದಿ ವ್ಯಾಪಾರಸ್ಥರನ್ನು ತೆರವುಗೊಳಿಸಿದ್ದು, ವ್ಯಾಪರಸ್ಥರ ಆಕ್ರೋಶಕ್ಕೆ ಕಾರಣವಾದರೆ ಸಾರ್ವಜನಿಕರಿಗೆ ರಸ್ತೆ ತೆರವು ಹರ್ಷ ಮೂಡಿಸಿದೆ. ಆದರೆ ಜಾತ್ರೆಗೆ ಸೀಮಿತವಾಗದೇ ನಿತ್ಯ ಇದೇ ರೀತಿ ಪುಟಪಾತ್ ತೆರವು ಇರಬೇಕು ಎಂಬುವುದು ಜನರ ಅಭಿಪ್ರಾಯವಾಗಿದೆ.

ಸಭೆಯ ನಿರ್ಧಾರ: ಗ್ರಾಮದೇವತೆ ಲಕ್ಷ್ಮೀದೇವಿ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಅವರಿಗೆ ಸರಾಗ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಈಚೆಗೆ ನಡೆದ ಜಾತ್ರಾ ಸಿದ್ದತಾ ಸಭೆಯಲ್ಲಿ ಹಲವರು ಆರೋಪಿಸಿದ್ದರು. ಜತೆಗೆ ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಜಾತ್ರಾ ಮಹೋತ್ಸವ ಸಮಿತಿ ಪೌರಾಡಳಿತಕ್ಕೆ ಕೋರಿದ್ದರು. ಇಂದಿನ ತೆರವು ಕಾರ್ಯಕ್ರಮದಿಂದ ಬಸ್ ನಿಲ್ದಾಣ ಬಳಿ ವಿಸ್ತಾರ ರಸ್ತೆ ಕಂಡ ಜನ ಜನದಟ್ಟನೆಗೆ ಶಾಶ್ವತ ಪರಿಹಾರ ಕಂಡು ಬಂದಂತೆ ಕಾಣಿತು.

ಸಕಲ ಸಿದ್ಧತೆ: ಜಾತ್ರೆಗೆ ಬೇಕಾದ ಎಲ್ಲ ಮೂಲಭೂತ ಸೌಲಭ್ಯಗಳನ್ನು ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ಈಶ್ವರ ಸಿದ್ನಾಳ ಪತ್ರಿಕೆಗೆ ತಿಳಿಸಿದರು.

ಜಾತ್ರೆ ಮಾ.10 ರಿಂದ: ತ್ರೈವಾರ್ಷಿಕ ಪರಂಪರೆಯಂತೆ ಪಟ್ಟಣದ ಗ್ರಾಮದೇವತೆ ಮಹಾಲಕ್ಷ್ಮೀ (ದ್ಯಾಮವ್ವದೇವಿ) ಜಾತ್ರಾ ಮಹೋತ್ಸವ ಆರಂಭವಾಗಲಿದೆ. ಬೆಳಗಿನ ಜಾವದಲ್ಲಿ ಎಲ್ಲ ಅರ್ಚಕರಿಂದ 7 ಗಂಟೆಗೆ ದೇವಿಮೂರ್ತಿ ಜೋಡಿಸುವುದು, ನಂತರ ಪರಂಪರೆಯಂತೆ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ, ಪೂಜೆ ಇತ್ಯಾದಿ, ನಂತರ ಮುಂಜಾನೆ 8 ಗಂಟೆಗೆ ಕನ್ನಡಿಯಲ್ಲಿ ದೇವಿಯ ಮುಖದರ್ಶನ ಪ್ರಕ್ರಿಯೆ ನಡೆಯುತ್ತದೆ.

ನಂತರ 9 ಗಂಟೆಗೆ ದ್ಯಾಮವ್ವದೇವಿಯ ಹೊನ್ನಾಟ (ದೇವಿ ಮಂದಿರದ ಆವರಣದಲ್ಲಿ ಅರ್ಧ ಗಂಟೆ ವರೆಗೆ ಕೈಮೇಲೆ ಆಡಿಸುವುದು) ನಂತರ 9.15ಕ್ಕೆ ದ್ಯಾಮವ್ವದೇವಿಯನ್ನು ಸರ್ವಾಲಂಕಾರದಿಂದ ಶೃಂಗಾರಗೊಂಡ ಮಂದಿರದಲ್ಲಿ ಆಸೀನವಾಗಿಸುವುದು. ನಂತರ ಭಕ್ತರಿಂದ ದರ್ಶನ, ನೈವೇದ್ಯ ಸಮರ್ಪಣೆ ಮುಂದುವರೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.